ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಪರಿಸರ ದಿನವನ್ನು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಿನ್ಸಿಪಾಲ್, ಉಪನ್ಯಾಸಕರು ಬಸಳೆ ಹಾಗೂ ತೊಂಡೆ ಗಿಡಗಳನ್ನು ನೆಡುವ ಮೂಲಕ ವಿನೂತನ ರೀತಿಯಲ್ಲಿ ಆಚರಿಸಿದರು.ಪ್ರಿನ್ಸಿಪಾಲ್ ಪ್ರೊ.ರಾಮಚಂದ್ರ ಭಟ್ ಮಾತನಾಡಿ, ವಿಶ್ವ ಪರಿಸರ ದಿನದ ಸಮಯದಲ್ಲಿ ಗಿಡ ನೆಟ್ಟು ಮತ್ತೆ ಮರೆತು ಬಿಡುವುದೇ ಹೆಚ್ಚು. ನಮ್ಮ ವಿದ್ಯಾರ್ಥಿಗಳು ಬಸಳೆ, ತೊಂಡೆಕಾಯಿಯನ್ನು ನೆಟ್ಟಿದ್ದು ಮಾತ್ರವಲ್ಲ ನಿತ್ಯನೂ ನೀರು ಹಾಕಿ ಪೋಷಣೆ ಮಾಡುವ ಮೂಲಕ ಹಸಿರು ನಿರಂತರವಾಗಿ ಇರಲಿ ಎನ್ನುವ ಸಂದೇಶ ಸಾರಿದ್ದಾರೆ ಎಂದರು. ಬಳಿಕ ವಿದ್ಯಾರ್ಥಿಗಳು ಸಮೀಪದ ಸಾರ್ವಜನಿಕ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.