36ನೇ ರೆಸ್ಪಿಕಾನ್-2024 ಸಮ್ಮೇಳನಕ್ಕೆ ತಜ್ಞ ವೈದ್ಯರು

KannadaprabhaNewsNetwork |  
Published : Nov 23, 2024, 12:33 AM IST
22ಕೆಡಿವಿಜಿ12-ದಾವಣಗೆರೆಯಲ್ಲಿ ಶನಿವಾರದಿಂದ ಮೂರು ದಿನಗಳ ಮಕ್ಕಳ ಶ್ವಾಸಕೋಶ ತಜ್ಞರ 36ನೇ ರೆಸ್ಪಿಕಾನ್-2024 ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಮಕ್ಕಳ ತಜ್ಞರು, ತಜ್ಞ ವೈದ್ಯರು. | Kannada Prabha

ಸಾರಾಂಶ

ಮಕ್ಕಳ ಶ್ವಾಸಕೋಶ ತಜ್ಞರ ಮೂರು ದಿನಗಳ 36ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ರೆಸ್ಪಿಕಾನ್-2024 ನಗರದ ಎಸ್‌.ಎಸ್‌. ಕನ್ವೆನ್ಷನ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸಮ್ಮೇಳನ ರೆಸ್ಪಿಕಾನ್ -2024ರ ಸರಣಿ ಕಾರ್ಯಾಗಾರಗಳು ಇಲ್ಲಿನ್ನ ಎಸ್‌.ಎಸ್‌. ಸಭಾಂಗಣ, ಎಸ್‌.ಎಸ್‌. ಹೈಟೆಕ್ ಆಸ್ಪತ್ರೆ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆರಂಭವಾಯಿತು.

- ಮಕ್ಕಳ ಶ್ವಾಸಕೋಶ ತಜ್ಞರ ಮೂರು ದಿನದ ಸಮ್ಮೇಳನಕ್ಕೆ ಚಾಲನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳ ಶ್ವಾಸಕೋಶ ತಜ್ಞರ ಮೂರು ದಿನಗಳ 36ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ರೆಸ್ಪಿಕಾನ್-2024 ನಗರದ ಎಸ್‌.ಎಸ್‌. ಕನ್ವೆನ್ಷನ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸಮ್ಮೇಳನ ರೆಸ್ಪಿಕಾನ್ -2024ರ ಸರಣಿ ಕಾರ್ಯಾಗಾರಗಳು ಇಲ್ಲಿನ್ನ ಎಸ್‌.ಎಸ್‌. ಸಭಾಂಗಣ, ಎಸ್‌.ಎಸ್‌. ಹೈಟೆಕ್ ಆಸ್ಪತ್ರೆ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆರಂಭವಾಯಿತು.

ಎಸ್‌.ಎಸ್‌. ಹೈಟೆಕ್ ಆಸ್ಪತ್ರೆಯಲ್ಲಿ ಸಮ್ಮೇಳನದ ಸಂಘಟನಾ ಅಧ್ಯಕ್ಷ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎನ್.ಕೆ. ಕಾಳಪ್ಪನವರ್, ಎಸ್ಸೆಸ್‌ಐಎಂಎಸ್‌ ಅಂಡ್ ಆರ್‌ಸಿ ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ.ಅರುಣಕುಮಾರ ಅಜ್ಜಪ್ಪ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಅನಂತರ ಉಚಿತ ಕಾರ್ಯಾಗಾರದಲ್ಲಿ ಡಾ.ಜಗದೀಶ ಗೋಯಲ್ ಸ್ವಾಗತಿಸಿ, ಡಾ.ಲತಾ ವಂದಿಸಿದರು.

ಐದು ಪ್ರಮುಖ ಕಾರ್ಯಾಗಾರ ನಡೆದವು. 50 ಸಾರ್ವಜನಿಕ ಸದಸ್ಯರು, 200ಕ್ಕೂ ಹೆಚ್ಚು ಪ್ರತಿನಿಧಿಗಳು ಟಿಓಟಿ (ತರಬೇತುದಾರರ ತರಬೇತಿ), ATM ಅಪ್‌ಡೇಟೆಡ್-2024, ಟಿಓಟಿ (ತರಬೇತುದಾರರ ತರಬೇತಿ)- ನನ್ನ ಮನೆ, ನನ್ನ ಮಗು, ಅಸ್ತಮಾ ತರಬೇತಿ ಮಾದರಿ, ಶ್ವಾಸಕೋಶ ಕಾರ್ಯ ಪರೀಕ್ಷೆಗಳು, ಬ್ರಾಂಕೋಸ್ಕೋಪಿ ಹೀಗೆ ಐದೂ ಕಾರ್ಯಾಗಾರಗಳ ನ್ನು ತಜ್ಞರು ನಡೆಸಿಕೊಟ್ಟರು.

ಸಂಜೆ ಅಂತಾರಾಷ್ಟ್ರೀಯ ಅಸ್ತಮಾ ಕಾಂಗ್ರೆಸ್‌ನಲ್ಲಿ ಡಾ. ಎನ್.ಕೆ. ಕಾಳಪ್ಪನವರ್, ಡಾ. ಬಿ.ಎಸ್. ಪ್ರಸಾದ್, ಡಾ.ಸಂಜೀವ್ ಸಿಂಗ್ ರಾವತ್, ಡಾ.ಜಗದೀಶ ಗೋಯಲ್, ಡಾ.ಮುಗನಗೌಡ ಪಾಟೀಲ, ಡಾ.ಮಧು ಪೂಜಾರ್ ಭಾಗವಹಿಸಿ, ಶ್ವಾಸಕೋಶ ಆರೈಕೆಯಲ್ಲಿ ಈಚಿನ ಪ್ರಗತಿ, ಜೈವಿಕ ಏಜೆಂಟ್‌ಗಳು, ಜೀವ ರಾಸಾಯನಿಕ ಬದಲಾವಣೆಗಳು ಮತ್ತು ಶ್ವಾಸಕೋಶ ಕಾರ್ಯ ಸಾಧನಗಳ ಕುರಿತು ಮಾತನಾಡಿದರು.

ದೇಶದ ಪ್ರಮುಖ ಶ್ವಾಸಕೋಶ ತಜ್ಞರು ಮತ್ತು ಬ್ರಾಂಕೋಸ್ಕೋಪಿಸ್ಟ್‌ಗಳ ಅನುಭವ, ಪ್ರಾದೇಶಿಕ ವೈದ್ಯಕೀಯ ತಜ್ಞರು ಮಕ್ಕಳ ಶ್ವಾಸಕೋಶ ಆರೈಕೆಯಲ್ಲಿ ಕಾಣಬೇಕಾದ ಸುಧಾರಣೆ, ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ಹಾಗೂ ಇಂಗ್ಲೆಂಡ್, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ತಜ್ಞರು ಅಸ್ತಮಾ ನಿರ್ವಹಣೆಯ ಇತ್ತೀಚಿನ ನವೀಕರಣಗಳ ಕುರಿತು ಚರ್ಚಿಸಿದರು.

- - - -22ಕೆಡಿವಿಜಿ12:

ದಾವಣಗೆರೆಯಲ್ಲಿ ಮಕ್ಕಳ ಶ್ವಾಸಕೋಶ ತಜ್ಞರ 36ನೇ ರೆಸ್ಪಿಕಾನ್-2024 ರಾಷ್ಟ್ರೀಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಎಸ್‌.ಎಸ್‌. ಹೈಟೆಕ್ ಆಸ್ಪತ್ರೆಯಲ್ಲಿ ಸಮ್ಮೇಳನದ ಸಂಘಟನಾ ಅಧ್ಯಕ್ಷ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎನ್.ಕೆ. ಕಾಳಪ್ಪನವರ್, ಎಸ್‌ಎಸ್‌ಐಎಂಎಸ್‌ ಅಂಡ್ ಆರ್‌ಸಿ ಪ್ರಾಚಾರ್ಯ ಡಾ. ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ.ಅರುಣಕುಮಾರ ಅಜ್ಜಪ್ಪ ಇನ್ನಿತರ ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!