ಗ್ರಂಥಾಲಯದ ಪುಸ್ತಕಗಳನ್ನು ಸದುಪಯೋಗಪಡಿಸಿಕೊಳ್ಳಿ

KannadaprabhaNewsNetwork |  
Published : Nov 23, 2024, 12:33 AM IST
ಚನ್ನರಾಯಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹೇಮವಾಣಿ ಪ್ರಕಾಶನ, ಹೇಮಾವತಿ ಆಫ್‌ಸೆಟ್ ಪ್ರಿಂಟರ್ಸ್ ವತಿಯಿಂದ ನಡೆದ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಗ್ರಂಥಾಲಯದಲ್ಲಿರುವ ಪುಸ್ತಕಗಳ ಸದುಪಯೋಗಪಡಿಸಿಕೊಳ್ಳುವಂತೆ ಪುರಸಭೆ ಅಧ್ಯಕ್ಷ ಬನಶಂಕರಿ ರಘು ಕರೆ ನೀಡಿದ್ದಾರೆ. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹೇಮವಾಣಿ ಪ್ರಕಾಶನ, ಹೇಮಾವತಿ ಆಫ್‌ಸೆಟ್ ಪ್ರಿಂಟರ್ಸ್ ವತಿಯಿಂದ ನಡೆದ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಉನ್ನತ ಹುದ್ದೆಗಳನ್ನು ಯುವಕರು ಹಿಡಿಯುವಲ್ಲಿ ಗ್ರಂಥಾಲಯ ಸಹಕಾರಿಯಾಗಿದೆ. ಜ್ಞಾನದ ದೇಗುಲ ಗ್ರಂಥಾಲಯ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗ್ರಂಥಾಲಯದಲ್ಲಿರುವ ಪುಸ್ತಕಗಳ ಸದುಪಯೋಗಪಡಿಸಿಕೊಳ್ಳುವಂತೆ ಪುರಸಭೆ ಅಧ್ಯಕ್ಷ ಬನಶಂಕರಿ ರಘು ಕರೆ ನೀಡಿದ್ದಾರೆ.ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹೇಮವಾಣಿ ಪ್ರಕಾಶನ, ಹೇಮಾವತಿ ಆಫ್‌ಸೆಟ್ ಪ್ರಿಂಟರ್ಸ್ ವತಿಯಿಂದ ನಡೆದ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಉನ್ನತ ಹುದ್ದೆಗಳನ್ನು ಯುವಕರು ಹಿಡಿಯುವಲ್ಲಿ ಗ್ರಂಥಾಲಯ ಸಹಕಾರಿಯಾಗಿದೆ. ಜ್ಞಾನದ ದೇಗುಲ ಗ್ರಂಥಾಲಯ ಎಂದರು.ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ್ ಮಾತನಾಡಿ, ಪುಸ್ತಕ ಒಳ್ಳೆಯ ಸಂಗಾತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಗೋಕಾಕ್ ಪುಟ್ಟಣ್ಣ ಮಾತನಾಡಿ, ಅಜ್ಞಾನವನ್ನು ದೂರ ಮಾಡಿ ಆಪತ್ಕಾಲದಲ್ಲಿ ನೆರವಿಗೆ ಬರುವುದು ಜ್ಞಾನ, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಗಳ ಅಧ್ಯಯನಶೀಲರಾಗಿ, ಸ್ನೇಹಿತರು, ನೆಂಟ್ಟರು ಕೈಬಿಟ್ಟರೂ ನಿಮ್ಮ ಜ್ಞಾನದ ಬುತ್ತಿನ ಸಮಾಜದಲ್ಲಿ ಬದುಕಲು ದಾರಿಯಾಗುತ್ತದೆ. ಗ್ರಂಥಾಲಯದಿಂದ ಎಷ್ಟೋ ಜನರ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದು ವಿದ್ಯಾರ್ಥಿಗಳು ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುಸ್ತಕ ಬಹುಮಾನ ನೀಡಲಾಯಿತು. ಗ್ರಂಥಾಲಯದ ಉತ್ತಮ ಓದುಗ ಪ್ರಶಸ್ತಿ ನೀಡಿ ನಂದೀಶ್ ಅವರನ್ನ ಗೌರವಿಸಲಾಯಿತು. ಹಿರಿಯ ಪತ್ರಿಕಾ ವಿತರಕ ಸೈಕಲ್‌ ರಂಗನಾಥ್, ರಾಜ್‌ಕುಮಾರ್ ಅಭಿಮಾನಿ ಬಳಗದ ಸಂಘದ ರೇವಣ್ಣ, ರಾಮಚಂದ್ರು, ದಿನೇಶ್, ಮಹೇಶ್, ಆರೋಗ್ಯ ಇಲಾಖೆಯ ನಂದೀಶ್, ಗ್ರಂಥಪಾಲಕ ದೇವರಾಜ್, ತೇಜಸ್, ಜಯರಾಮ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!