ಗವಿಮಠವು ಅನ್ನ, ಅಕ್ಷರ, ಅರಿವು, ಆರೋಗ್ಯ, ಆಧ್ಯಾತ್ಮ ಸೇವೆಗೆ ಹೆಸರುವಾಸಿಯಾಗಿದೆ. ವಿದ್ಯಾಥಿಗಳು ಉತ್ತಮ ಕನಸುಗಳನ್ನು ಕಾಣಬೇಕು
ಕೊಪ್ಪಳ: ವೈದ್ಯಕೀಯ ಸೇವೆ ಬಹಳ ಪವಿತ್ರವಾದದ್ದು. ತೊಂದರೆಯಿಂದ ಬರುವ ರೋಗಿಗಳ ಗುಣಮುಖ ಮಾಡುವ ಸೇವೆ ಬಹಳ ಶ್ರೇಷ್ಠ ಸೇವೆಯಾಗಿದೆ. ಉತ್ತಮ ಅಧ್ಯಯನ ಮಾಡುವುದರ ಮೂಲಕ ಕೋರ್ಸ್ ನ ಪರಿಣಿತಿ ಪಡೆಯಲು ಸಾಧ್ಯ ಎಂದು ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಡಾ. ಆರ್. ಮರೇಗೌಡ ಹೇಳಿದರು.
ನಗರದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಪ್ಯಾರಮೆಡಿಕಲ್ ಕಾಲೇಜಿನಲ್ಲಿ 2025 -26ನೇ ಸಾಲಿನ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಗವಿಮಠವು ಅನ್ನ, ಅಕ್ಷರ, ಅರಿವು, ಆರೋಗ್ಯ, ಆಧ್ಯಾತ್ಮ ಸೇವೆಗೆ ಹೆಸರುವಾಸಿಯಾಗಿದೆ. ವಿದ್ಯಾಥಿಗಳು ಉತ್ತಮ ಕನಸುಗಳನ್ನು ಕಾಣಬೇಕು. ಕನಸಿಗೆ ತಕ್ಕಂತೆ ಪ್ರಯತ್ನ ಪಡಬೇಕು. ಅಂದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಈಗ ನೀವು ಅಧ್ಯಯನ ಮಾಡುತ್ತಿರುವ ಪ್ಯಾರಾಮೆಡಿಕಲ್ ಕೋರ್ಸ್ ಬಹಳ ಪವಿತ್ರ ಸೇವೆಯ ಕೋರ್ಸ್ ಆಗಿದೆ. ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಸೇವೆಯ ಮೂಲಕ ಕೀರ್ತಿವಂತರಾಗಬೇಕು ಎಂದು ಹೇಳಿದರು.
ಕೊಪ್ಪಳ ವೈಧ್ಯಕೀಯ ವಿಜ್ಞಾನ ಸಂಸ್ಥೆಯ ಅಂಗರಚನ ಶಾಸ್ತ್ರವಿಭಾಗದ ಸಹ ಪ್ರಾಧ್ಯಪಕ ಡಾ. ಮಂಜುನಾಥ್ ಎಸ್. ಹಲಗತ್ತಿ ಮಾತನಾಡಿ, ತಾವೆಲ್ಲರೂ ಉತ್ತಮ ಅಭ್ಯಾಸದ ಕಡೆಗೆ ಗಮನ ಹರಿಸಬೇಕು. ಉತ್ತಮ ಅಧ್ಯಯನದಿಂದ ಮಾತ್ರ ತಾವು ಓದುವ ಕೋರ್ಸಿಗೆ, ಸೇವೆಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು. ಶ್ರೀ ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಮರ್ಸಿಲ್ ಎಸ್. ಹೂಲಗೇರಿ, ಪ್ಯಾರಾ ಮೆಡಿಕಲ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪ್ರೊ. ನಾಗರಾಜ್ ಬೊಮ್ಮನಾಳ್, ಸಂಯೋಜಕಿ ಶಿಲ್ಪಾ ಹಾಗೂ ವಿದ್ಯಾರ್ಥಿಗಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.