Explosion of objects in toilet: Damage to house, death of pet dog
ಕನ್ನಡಪ್ರಭ ವಾರ್ತೆ ಆನವಟ್ಟಿ
ಸಮೀಪದ ಹಿರೇಚೌಟಿ ಗ್ರಾಮದ ಮಹಾದೇವಪ್ಪ ಅವರ ಮನೆಯ ಹಿಂಭಾಗದ ಟಾಯ್ಲೆಟ್ ರೂಂನಲ್ಲಿ ಶೇಖರಿಸಿಟ್ಟಿದ್ದ ಸ್ಫೋಟಕ ವಸ್ತುಗಳು ಸ್ಫೋಟಗೊಂಡ ಪರಿಣಾಮ ಟಾಯ್ಲೆಟ್ ರೂಂಗೆ ಹಾನಿಯಾಗಿದ್ದು, ಮನೆಯ ಸಾಕು ನಾಯಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.ಘಟನೆ ಕುರಿತು ಮಾಹಿತಿ ತಿಳಿದ ಆನವಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಚಂದನ್ ಜೆ.ಸಿ. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ಸಂಜೆ 4 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮನೆಯ ಹಿಂಭಾಗದಲ್ಲಿದ್ದ ಟಾಯ್ಲೆಟ್ ರೂಂನ ಮೇಲ್ಛಾವಣಿ ಹಾಗೂ ಗೋಡೆಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ. ಸ್ಫೋಟದ ಪರಿಣಾಮ ಸಾಕು ನಾಯಿಗೂ ಗಾಯಗಳಾಗಿದ್ದು, ಅದು ಸ್ಥಳದಲ್ಲೇ ಮೃತಪಟ್ಟಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.