ಕನ್ನಡಪ್ರಭ ವಾರ್ತೆ ಬೆಳಗಾವಿ
ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38) ಮೃತ ವ್ಯಕ್ತಿ. ಪಂಚಮಿ ಹಬ್ಬಕ್ಕಾಗಿ ಮದ್ದು ಹಾರಿಸಲು ಅನಧಿಕೃತವಾಗಿ ತಗಡಿನ ಶೆಡ್ ನಲ್ಲಿ ಮದ್ದು ತಯಾರಿಸುತ್ತಿದ್ದಾಗ ಸ್ಫೋಟ ಸಂಭವಿಸಿ ಅವಘಡ ಉಂಟಾಗಿದೆ. ಸ್ಫೋಟದ ಬಳಿಕ ಎಲ್ಲೆಡೆ ಬೆಂಕಿ ಆವರಿಸಿದ್ದರಿಂದ ಮಲ್ಲಪ್ಪ ಸುಟ್ಟು ಕರಕಲಾಗಿದ್ದಾನೆ. ಶೆಡ್‌ನೊಳಗಿದ್ದ ಇನ್ನಿಬ್ಬರು ಗಂಭೀರ ಗಾರಗೊಂಡಿದ್ದು, ಚಿಕಿತ್ಸೆಗೆ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಘಟಪ್ರಭಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.