ಗ್ರಾಮಾಂತರ ಪ್ರದೇಶಗಳಿಗೂ ಸಂಗೀತ, ನೃತ್ಯ ಅಕಾಡೆಮಿ ಕಾರ್ಯಕ್ರಮ ವಿಸ್ತರಣೆ

KannadaprabhaNewsNetwork |  
Published : Oct 28, 2026, 02:15 AM IST
ಕೊಟ್ಟೂರಿನಲ್ಲಿ ಜಿಲ್ಲಾ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕ ಜೆ.ಬಿ. ಸಿದ್ದನಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಬೇಕೆನ್ನುವ ಕಾರಣಕ್ಕಾಗಿ ಅಕಾಡೆಮಿಯಿಂದ ಶಿಷ್ಯವೇತನ ಕೊಡುವ ಕಾರ್ಯಕ್ರಮ

ಕೊಟ್ಟೂರು: ಸಂಗೀತ, ಸಂಸ್ಕೃತಿಯನ್ನು ಸದಾ ಜತನದಿಂದ ಕಾಪಾಡಿಕೊಂಡು ಬರುತ್ತಿರುವ ಕಲಾವಿದರ ಮತ್ತು ಗಾಯಕರ ಎಲ್ಲ ಬಗೆಯ ನೆರವಿಗೆ ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ ನಿರಂತರ ಕಾರ್ಯ ಹಮ್ಮಿಕೊಂಡಿದ್ದು, ಗ್ರಾಮಾಂತರ ಪ್ರದೇಶಗಳಲ್ಲೂ ಸಂಗೀತ - ನೃತ್ಯ ಅಕಾಡೆಮಿಯ ಮೂಲಕ ಅಶಕ್ತ ಕಲಾವಿದರಿಗೆ ನೆರವು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಸಂಗೀತ - ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ ಹೇಳಿದರು.

ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಎಚ್.ಜಿ. ರಾಜ್ ಸಭಾಂಗಣದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಟ್ಟೂರೇಶ್ವರ ಮಹಾವಿದ್ಯಾಲಯ ಮತ್ತು ಕಲ್ಪತರು ಕಲಾಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಂಗೀತ ನೃತ್ಯೋತ್ಸವ 2026ರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಬೇಕೆನ್ನುವ ಕಾರಣಕ್ಕಾಗಿ ಅಕಾಡೆಮಿಯಿಂದ ಶಿಷ್ಯವೇತನ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜತೆಗೆ ಹಿರಿಯ ಕಲಾವಿದರಿಗೆ ಪಿಂಚಣಿ ಕೊಡುವ ಕೆಲಸ ಸಾಗಿದೆ. ಒಟ್ಟಾರೆಯಾಗಿ ಸಂಗೀತ - ನೃತ್ಯ ಅಕಾಡೆಮಿ ಕೆಲಸಕ್ಕೆ ಯಾವ ತೊಂದರೆಯೂ ಬಾಧಿಸದಂತೆ ಅಕಾಡೆಮಿಯ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ಅಕಾಡೆಮಿ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ತಮ್ಮ ಅಧ್ಯಕ್ಷ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಕಲಾವಿದರಿಗೆ ಉತ್ತೇಜನ ಮತ್ತು ಸ್ಫೂರ್ತಿ ತರುವ ಕಾರ್ಯಕ್ರಮ ಸಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಜಿ.ಬಿ. ಸಿದ್ದನಗೌಡ, ಸಂಗೀತ ಆಲಾಪನೆ ಎಲ್ಲ ಬಗೆಯ ಅಲಸ್ಯವನ್ನು ಕಡಿಮೆ ಮಾಡಿ, ಸ್ಫೂರ್ತಿದಾಯಕ ಶಕ್ತಿ ತಂದುಕೊಡುತ್ತದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ಸಾಹಿತ್ಯ, ಸಂಗೀತ, ಸಂಸ್ಕೃತಿಯಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟಾರ್ ರಶ್ಮಿ ಟಿ.ಎಸ್., ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷ ಚಿಗಟೇರಿ ಕೊಟ್ರೇಶ ಮಾತನಾಡಿದರು.

ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ ಸಂಚಾಲಕಿ ಸವಿತಾ ಅಮರೀಶ, ಸುಶ್ರಾವವಾಗಿ ಹಾಡಿ ಪ್ರಾಥನೆಗೈದರು. ಆನಂತರ ಕಲಾ ಕೌಸ್ತುಬಾ ತಂಡದಿಂದ ಭರತನಾಟ್ಯ, ಕೆ. ಪ್ರಿಯಾಂಕಾ ತಂಡದಿಂದ ಹಿಂದುಸ್ತಾನಿ ಸಂಗೀತ, ಯು.ಎಂ. ನಿರಂಜನ ಮೂರ್ತಿ ಅವರಿಂದ ಹಾರ್ಮೋನಿಯಂ ವಾದನ, ಪಲ್ಲವಿ ಆರ್. ಭಟ್ ಮತ್ತು ಡಿ. ವಿಶ್ವನಾಥ ಅವರಿಂದ ಗಮಕ ವಾಚನ, ವಿದ್ವಾನ್ ಕೆ.ಎಸ್. ರಾಘವೇಂದ್ರ ಭರತನಾಟ್ಯ, ಮಂಜುನಾಥ ಎನ್. ಕರಿಲಿಂಗನಣ್ಣನವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆದವು. ಅಕಾಡೆಮಿಯ ಸದಸ್ಯ ಡಾ. ಎಂ. ಕಾಸೀಂ, ಮಲ್ಲಿಗೆ ಮಡುವು ಸ್ವಾಗತಿಸಿದರು. ದೇವೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗಾಮತ ಸಮಾಜ ಮುಖ್ಯವಾಹಿನಿಗೆ ಬರಲು ವಿಫಲ
ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯಿಸಿ ಕಪ್ಪು ಧರಿಸಿ ಮೆರವಣಿಗೆ