ಸಂಡೂರು: ವಾಲ್ಮೀಕಿ ನಾಯಕ ಸಮಾಜದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಮುಖಂಡರು ಸೋಮವಾರ ಕಪ್ಪುಪಟ್ಟಿ ಧರಿಸಿ, ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಜಿ. ಅನಿಲ್‌ಕುಮಾರ್‌ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಮಾಜದ ಮುಖಂಡರಾದ ನವಲೂಟಿ ಜಯಣ್ಣ ಮನವಿ ಸಲ್ಲಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ವಾಲ್ಮೀಕಿ ನಾಯಕ ಸಮಾಜಕ್ಕೆ ದೊರೆಯಬೇಕಾದ ಸಾಮಾಜಿಕ ನ್ಯಾಯ ದೊರೆಯುತ್ತಿಲ್ಲ. ಪರಿಶಿಷ್ಟ ಪಂಗಡಕ್ಕೆ ನೀಡಬೇಕಾದ ಶೇ. ೭ರಷ್ಟು ಮೀಸಲಾತಿ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಆದ್ದರಿಂದ ೩೦ ವರ್ಷಗಳ ನಮ್ಮ ಬೇಡಿಕೆಯಾದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಅಂಬರೀಷ್ ವಿ., ಉಪಾಧ್ಯಕ್ಷರಾದ ಎನ್. ಚಂದ್ರು, ಮಂಜು ಬಾಳೆಕಾಯಿ, ಎಚ್.ಟಿ. ವೆಂಕಟೇಶ್, ಶ್ರೀನಿವಾಸ ಟಿ., ಕೆ. ಪಂಪಾಪತಿ, ಹನುಮಯ್ಯ ಎನ್.ಪಿ., ಪ್ರಧಾನ ಕಾರ್ಯದರ್ಶಿ ಆರ್. ರಘುನಾಥ, ಶಂಕರ್ ವಿ.ಎಸ್., ಎರ‍್ರಿಸ್ವಾಮಿ ಟಿ., ಕಾರ್ಯದರ್ಶಿಗಳಾದ ಓಬಳೇಶ್ ಎಚ್., ಹುಲಿರಾಜ್ ಕೆ., ಎನ್. ರಮೇಶ್, ಬಿ. ಶಂಕರ್, ಬಾಂಡ್ರೆಪ್ಪ ಇ., ನಾಗರಾಜ ಆರ್., ಖಜಾಂಚಿ ದೇವೇಂದ್ರಪ್ಪ ಎಂ., ಪ್ರಶಾಂತ ಯು., ಕಾನೂನು ಸಲಹೆಗಾರ ಕೃಷ್ಣಮೂರ್ತಿ ವಿ.ಜಿ., ಕುಮಾರಸ್ವಾಮಿ, ಪರಶುರಾಮ ಪಿ., ಮಹಿಳಾ ಘಟಕದ ಅಧ್ಯಕ್ಷೆ ಎನ್. ಪೂರ್ಣಿಮಾ, ಪ್ರಧಾನ ಕಾರ್ಯದರ್ಶಿ ಟಿ. ಕವಿತಾ, ಸದಸ್ಯೆ ಗೌರಮ್ಮ, ಮುಖಂಡರಾದ ಡಿ. ಕೃಷ್ಣಪ್ಪ, ವಸಂತಕುಮಾರ್, ಫಕ್ಕೀರಪ್ಪ, ನಾಗರಾಜ, ಟಿ. ಪರಶುರಾಮ, ಟಿ. ನಾಗರಾಜ, ಅಂಜಿನಿ, ರಮೇಶ್, ನರಸಿಂಹ ಉಪಸ್ಥಿತರಿದ್ದರು.