ಜೋಯಿಡಾ: ರಾಜನೀತಿ, ಕೌಟುಂಬಿಕ ಜೀವನ, ಜತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ರಾಮಾಯಣ ನಮಗೆಲ್ಲರಿಗೂ ಆದರ್ಶ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್. ಭಾರತಿ ಹೇಳಿದರು.
ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಾಲ್ಮೀಕಿ ಜಯಂತಿ ಸರ್ಕಾರ ಕಡ್ಡಾಯವಾಗಿ ಆಯೋಜಿಸಲು ಆದೇಶಿಸಿರುವುದು ಅಭಿನಂದನೀಯ. ಆದರೆ ತಾಲೂಕಿನಲ್ಲಿ ಜಯಂತಿಗೆ ಬಹುತೇಕ ಯಾವುದೇ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳದಿರುವುದು ವಿಷಾದನೀಯ. ತಾಲೂಕಿನ 16 ಗ್ರಾಪಂಗಳಲ್ಲಿ ವಾಲ್ಮೀಕಿ ಜಯಂತಿಗೆ ಅಭಿವೃದ್ಧಿ ಅಧಿಕಾರಿಗಳಾರೂ ಪಾಲ್ಗೊಳ್ಳದಿರುವುದು ಸರ್ಕಾರದ ಆದೇಶ ಧಿಕ್ಕರಿಸಿದಂತೆ. ಇದು ವಾಲ್ಮೀಕಿ ಜಯಂತಿಗೆ ಮಾಡಿದ ಅಪಮಾನ ಎಂದರು.
ಸಮಾಜ ಕಲ್ಯಾಣ ಅಧಿಕಾರಿ ವಾಸಂತಿ ಗೌಡ ಮಾತನಾಡಿ, ವಾಲ್ಮೀಕಿ ಭರತಖಂಡದ ವೈಭವ, ರಾಜನೀತಿ, ಆದರ್ಶ ಕೌಟುಂಬಿಕ ವ್ಯವಸ್ಥೆಯನ್ನು ಕಟ್ಟಿಕೊಟ್ಟ ಮಹಾಪುರುಷ. ಇವರ ಬದುಕು ನಮ್ಮ ಯುವ ಸಮೂಹಕ್ಕೆ ಪಾಠವಾಗಿದೆ ಎಂದರು.ಉಪನ್ಯಾಸಕ ಶಿವಾಜಿ ಜೋಮನ್ನವರ ಮಾತನಾಡಿ, ವಾಲ್ಮೀಕಿ ರಾಮಾಯಣದ ಮೂಲಕ ಮನುಕುಲಕ್ಕೆ ಮಾನವಿಯ ಮೌಲ್ಯ, ಬದುಕಿನ ಆದರ್ಶವನ್ನು ಬೋಧಿಸಿದ ಸಂತ. ಸಾಮಾನ್ಯನೂ ದೇವಮಾನವನಾಗಬಲ್ಲ ಎನ್ನುವುದನ್ನು ಜಗತ್ತಿಗೆ ಸಾರಿದ ದಾರ್ಶನಿಕ ಎಂದರು.
ಆರೋಗ್ಯಾಧಿಕಾರಿ ಗೀತಾ ನಾಯ್ಕ, ಶಿಕ್ಷಣ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮಿ ಹಂಜಿ, ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ ಎಕ್ಕೆಳ್ಳಿಕರ ಉಪಸ್ಥಿತರಿದ್ದರು. ಶಿಕ್ಷಕರಾದ ಯಶವಂತ ನಾಯ್ಕ ಅತ್ಯುತ್ತಮವಾಗಿ ನಿರೂಪಣೆ ಮಾಡಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನ. 1ರಂದು ಕನ್ನಡ ರಾಜ್ಯೋತ್ಸವ ಸಮಾರಂಭಯಲ್ಲಾಪುರ: ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನ. ೧ರಂದು ಬೆಳಗ್ಗೆ ೯ ಗಂಟೆಗೆ ನಡೆಯಲಿದೆ.ಶಾಸಕ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಧ್ವಜಾರೋಹಣ ನೆರವೇರಿಸುವರು. ಸಚಿವ ಲಕ್ಷ್ಮಣ ಸವದಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟಂಟ್ ಏಜೆನ್ಸಿಸ್ ಲಿಮಿಟೆಡ್ ಅಧ್ಯಕ್ಷ ಸತೀಶ ಸೈಲ್, ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ದೇವಿದಾಸ ಶಾನಭಾಗ, ತಾಪಂ ಆಡಳಿತಾಧಿಕಾರಿ ಪಾಂಡು ಕೆ.ಎಚ್. ಉಪಸ್ಥಿತರಿರುವರು.