ಹೊರಗಿನ ಐಶ್ವರ್ಯ ಶಾಶ್ವತವಲ್ಲ, ನಮ್ಮಲ್ಲಿರುವ ಜ್ಞಾನವೇ ಶಾಶ್ವತ- ಶಶಿಧರ ಶಾಸ್ತ್ರಿ

KannadaprabhaNewsNetwork | Published : Apr 28, 2025 12:50 AM

ಸಾರಾಂಶ

ಕಲ್ಯಾಣ ನಾಡಿನ ಶರಣರು ಹೇಳುವಾಗೆ ಹೊರಗಿನ ಐಶ್ವರ್ಯ ಯಾವುದು ಶಾಶ್ವತವಲ್ಲ, ನಮ್ಮಲ್ಲಿರುವ ಒಳಗಿನ ಜ್ಞಾನವೇ ಶಾಶ್ವತ ಎಂದು ಪುಟ್ಟರಾಜ ಗವಾಯಿಗಳರ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ನರಗುಂದ: ಕಲ್ಯಾಣ ನಾಡಿನ ಶರಣರು ಹೇಳುವಾಗೆ ಹೊರಗಿನ ಐಶ್ವರ್ಯ ಯಾವುದು ಶಾಶ್ವತವಲ್ಲ, ನಮ್ಮಲ್ಲಿರುವ ಒಳಗಿನ ಜ್ಞಾನವೇ ಶಾಶ್ವತ ಎಂದು ಪುಟ್ಟರಾಜ ಗವಾಯಿಗಳರ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ ನಡೆದ 24ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣವರ ಅನುಭವ ಮಂಟಪದಲ್ಲಿ ನಮ್ಮ ಜಿಲ್ಲೆಯ ಲಕ್ಕುಂಡಿ ಗ್ರಾಮದ ಅಣ್ಣ ಅಜಗಣ್ಣ, ತಾಯಿ ಮುಕ್ತಾಯಿ ಎಂಬುವ ಶರಣರು ಅಂದಿನ ದಿನಗಳಲ್ಲಿ ನೂರಾರು ವಚನಗಳನ್ನು ಕಲ್ಯಾಣದ ಅನುಭವ ಮಂಟಪದಲ್ಲಿ ರಚಿಸಿ ಈ ಸಮಾಜದ ಉದ್ದಾರಕ್ಕೆ ಶ್ರಮಿಸಿದ್ದಾರೆ. ಆದರೆ ನಾವು ನಮ್ಮ ನಾಡಿನ ಶರಣರು ಅಂದಿನ ದಿನ ಶರಣರ ಕಾಲದಲ್ಲಿ ವಚನಗಳನ್ನು ರಚನೆ ಮಾಡಿ ಈ ಸಮಾಜದ ಸುಧಾರಣೆಗೆ ಶ್ರಮಿಸಿದ್ದಾರೆಂದು ನಮಗೆ ಬಹಳಷ್ಟು ಜನರಿಗೆ ತಿಳಿದಿಲ್ಲವೆಂದರು.

ಇಂದಿನ ಸಮಾಜದಲ್ಲಿ ನಾವು ಧರ್ಮ, ಆಧ್ಯಾತ್ಮ, ಸಂಸ್ಕಾರ, ಆಚಾರ, ವಿಚಾರಗಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಈ ಸಮಾಜದ ಪ್ರತಿಯೊಬ್ಬರು ನಮ್ಮ ಧರ್ಮದ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮಗೆ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗಲು ಸಾಧ್ಯವೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಸವ ಪುರಾಣದ ದಾಸೋಹ ಸೇವೆ ಮಾಡಿದ ಸದ್ಭಕ್ತರನ್ನು ಶ್ರೀ ಮಠದಿಂದ ಸತ್ಕಾರಿಸಲಾಯಿತು.

ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ನಾಗನಗೌಡ ತಿಮ್ಮನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ. ನಧಾಪ್, ಹನಮಂತ ಕಾಡಪ್ಪನವರ, ಶೆಲ್ಲಿಕೇರಿ, ನಾಗಲೋಟಿಮಠ, ಪ್ರಾಚಾರ್ಯ ಬಿ.ಆರ್.ಸಾಲಿಮಠ ಸೇರಿದಂತೆ ಮುಂತಾದವರು ಇದ್ದರು.

Share this article