ಕನ್ನಡಪ್ರಭ ವಾರ್ತೆ, ಚಾಮರಾಜಗರ
ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾ ಮಂಟಪ ಮೈಸೂರು ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ರಂಗೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿ ಪಠ್ಯೇತರ ಚಟುವಟಿಕೆಗಳಾದ ರಂಗಭೂಮಿ, ಸಂಗೀತ ಸಾಹಿತ್ಯ, ಕ್ರೀಡಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ಮುಂದಿನ ಜೀವನದಲ್ಲಿ ಅವು ಸಹಕಾರಿಯಾಗಿ ವಿಕಸನಗೊಳಿಸುತ್ತವೆ ಎಂದರು.ಜೀವನದಲ್ಲಿ ಶಿಸ್ತು, ಸಂಯಮ, ಧೈರ್ಯ, ಮಾನಸಿಕ ಸ್ಧೈರ್ಯವನ್ನು ತುಂಬುವುದರ ಜೊತೆಗೆ ಮನುಷ್ಯರ ಆರೋಗ್ಯಕರ ಜೀವನಕ್ಕೆ ಸಹಕಾರ ನೀಡುತ್ತದೆ. ತಾನು ಬೆಳೆಯುವುದರ ಮೂಲಕ ಇತರರನ್ನು ಬೆಳಸಬಹುದು ಎಂದರು.
ಮೂರು ದಿನಗಳ ಈ ರಂಗೋತ್ಸವದಲ್ಲಿ ಪಾಲ್ಗೊಳ್ಳಿ, ನಾಟಕಗಳನ್ನು ನೋಡಿ, ನಾಟಕಗಳಲ್ಲಿನ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮ ಪ್ರತಿಭೆಯನ್ನು ವಿಕಸನಗೊಳಿಸಿಕೊಳ್ಳಿ ಎಂದರು.ನಟಿ ರೇಖಾ ರೋಹಿತ್ (ಬೇಬಿ ರೇಖಾ) ಮಾತನಾಡಿ, ನಾನು ಚಲನಚಿತ್ರದಲ್ಲಿ ೩೫ ವರ್ಷಗಳಿಂದ ಬಾಲನಟಿಯಾಗಿ ನಟಿಸಿದ್ದೇ, ೩೫ ವರ್ಷವಾದರೂ ನನ್ನನ್ನು ನೆನಪಿಸಿಕೊಳ್ಳುತ್ತಾರೆ ಅಂದರೆ ಅದಕ್ಕೆ ನನ್ನ ನಟನಾ ಕಲೆಯೇ ಕಾರಣ ಎಂದರು.
ಇಂತಹ ಕಲೆಗಳು ನಿಜ ಜೀವನದಲ್ಲೂ ಸಹಕಾರಿಯಾಗುತ್ತವೆ ರಂಗಭೂಮಿ ಜೀವನ ಶೈಲಿಯಲ್ಲಿ ಬದಲಾವಣೆಯಲ್ಲಿ ರಂಗಶಿಕ್ಷಣ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ ಭಾಷೆಯನ್ನು ತಿದ್ದಿತೀಡಿ ಪರಿಪಕ್ವತೆಯನ್ನು ನೀಡುತ್ತದೆ ಎಂದರು.ರಂಗಭೂಮಿಯಲ್ಲಿ ನಟನೆಯಷ್ಟೇ ಮುಖ್ಮವಲ್ಲ ಅದರ ಹಿಂದಿನ ರಂಗಸಜ್ಜಿಕೆಯು ಮುಖ್ಯವಾಗಿದೆ, ಭಾಷಾ ಕೌಶಲ್ಯವನ್ನು ಕಲಿಸಿ, ಘನತೆಯನ್ನು ಹೆಚ್ಚಿಸಿ ಸಮಾಜ ಗುರುತಿಸುವಂತೆ ಮಾಡುತ್ತದೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಳಲ್ಲಿ ತೊಡಗಿಸಿಕೊಂಡಾಗ ಅಡಗಿರುವ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಮಲ್ಲಿಕಾಜುನಸ್ವಾಮಿ ಮಾತನಾಡಿ ಭೂಮಿಯಷ್ಟೇ ಮಹತ್ವವುಳ್ಳದ್ದು ರಂಗಭೂಮಿ ಎಂದರು.ಚಾಮರಾಜನಗರದಂತಹ ಈ ಗಟ್ಟಿ ನೆಲದ ರಂಗಭೂಮಿಯಿಂದ ಬಂದ ಗ್ರಾಮೀಣ ಪ್ರತಿಭೆ ಡಾ. ರಾಜ್ ಕುಮಾರ್ ವರನಟರಾದರು, ಹಾಗೇ ಕುಪ್ಪಳ್ಳಿಯಂತಹ ಗ್ರಾಮದಿಂದ ಬಂದ ಕುವೆಂಪು ರಾಷ್ಟ್ರಕವಿಯಾಗಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟರು ಸಾಧನೆ ಮಾಡಿದವರಲ್ಲಿ ಹೆಚ್ಚಿನವರು ಗ್ರಾಮೀಣ ಬಾಗದವರು ಎಂದರು.
ಹಿಂದೆ ಗ್ರಾಮೀಣ ಭಾಗದಲ್ಲಿ ವರ್ಷಕ್ಕೊಮ್ಮೆ ನಾಟಕಗಳನ್ನು ಆಡುತ್ತಿದ್ದರು, ಆ ಮೂಲಕ ನಮ್ಮ ನಾಟಕ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದರೂ ಅವು ಈಗ ಮರೆಯಾಗುತ್ತವೆ, ಈ ನಿಟ್ಟಿನಲ್ಲಿ ಇಂತಹ ರಂಗ ಶಿಕ್ಷಣವನ್ನು ಜೆಎಸ್‌ಎಸ್ ವಿದ್ಯಾಪೀಠ ಮಾಡುತ್ತಿರುವುದು ನಮ್ಮ ಪುಣ್ಯ, ಮಕ್ಕಳ ಪ್ರತಿಭಾನ್ವೇಷನೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಇದು ಹೆಮ್ಮೆ ಪಡಬೇಕಾದ ವಿಷಯ ಎಂದರು.ಜಿಲ್ಲೆ ಕಲೆಗಳ ತವರೂರು, ಜಾನಪದ, ರಂಗಭೂಮಿ, ಸಂಸ್ಕೃತಿ, ಕಲೆಯನ್ನು ಸೇರಿದಂತೆ ವಿವಿಧ ಕಲೆಗಳ ತವರೂರು, ಮಹದೇಶ್ವರ, ಮಂಟೇಸ್ವಾಮಿ ಓಡಾಡಿದ ಪುಣ್ಯ ಭೂಮಿ, ಡಾ. ರಾಜ್‌ಕುಮಾರ್ ಅವರನ್ನು ಈ ನಾಡಿಗೆ ಕೊಟ್ಟ ನೆಲ ಎಂದರು.
ರಂಗೋತ್ಸವದ ಸಂಚಾಲಕ ಚಂದ್ರಶೇಖರ್ ಹೆಗ್ಗೋಠಾರ ಮಾತನಾಡಿ ವಿದ್ಯಾರ್ಥಿಗಳಿಗೆ ರಂಗಭೂಮಿ ಬಗ್ಗೆ ಅಭಿರುಚಿ ಬೆಳಸಬೇಕು ಮತ್ತು ನಟನೆಗೆ ಪ್ರೋತ್ಸಾಹ ಕೊಡಬೇಕೆಂಬ ನಿಟ್ಟಿನಲ್ಲಿ ಆರಂಭವಾದ ಜೆಎಸ್‌ಎಸ್ ರಂಗೋತ್ಸವವು ಈಗ ೧೪ನೇ ವರ್ಷಕ್ಕೆ ಕಾಲಿಟ್ಟಿದೆ ಎಂದರು.ಪ್ರಸ್ತುತ ರಂಗೋತ್ಸವ ೨೦೨೫ ರಲ್ಲಿ ಷರೀಪ, ಅಂಗಭಂಗದ ರಾಜ್ಯದಲ್ಲಿ, ಧಾಂ. ಧೂಂ ಸುಂಟರಗಾಳಿ, ನಾಟಕಗಳು ಪ್ರದರ್ಶಗೊಳ್ಳಲಿವೆ , ಮುಂದೆ ಸರಗೂರು ಮತ್ತು ಗುಂಡ್ಲುಪೇಟೆಗಳಲ್ಲಿ ನಡೆಯಲಿದೆ ಎಂದರು.
ಪ್ರಾಂಶುಪಾಲ ಡಾ. ಮಹದೇವಸ್ವಾಮಿ ಸ್ವಾಗತಿಸಿದರು, ಸಾರ್ವಜನಿಕ ಸಂಪರ್ಕಾಧಿಕಾರಿ ಆರ್. ಎಂ. ಸ್ವಾಮಿ ಉಪಸ್ಥಿತರಿದ್ದರು. ಜಮುನಾ ವಂದಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು.ಮೈಸೂರು ಸರಸ್ವತಿಪುರಂ ಜೆಎಸ್‌ಎಸ್ ಜೆಎಸ್‌ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ಷರೀಪ ನಾಟಕ ಪ್ರದರ್ಶನಗೊಂಡಿತು.