ಮರದಿಂದ ಉದುರಿದ ಹೂವು, ಹೀಚು, ಬಾಕ್ಸ್ ನಲ್ಲೇ ಉಳಿದುಹೋದ ಮಾವಿನ ಹಣ್ಣು
ಕನ್ನಡಪ್ರಭ ವಾರ್ತೆ ತರೀಕೆರೆ
ರಾಜ್ಯ ಮತ್ತು ಹೊರ ರಾಜ್ಯದ ಮಾರುಕಟ್ಟೆಯಲ್ಲಿ ತರೀಕೆರೆ ತಾಲೂಕಿನಲ್ಲಿ ಬೆಳೆಯುವ ಬಗೆ ಬಗೆಯ ಮಾವಿನ ಹಣ್ಣುಗಳಿಗೆ ಪ್ರಮುಖ ಸ್ಥಾನವಿದೆ. ಅತ್ಯಂತ ನೈಸರ್ಗಿಕವಾಗಿ ಬೆಳೆದ ಆರೋಗ್ಯಕರವಾದ ಈ ಹಣ್ಣಿನಲ್ಲಿ ಹೆಚ್ಚು ತಿರುಳು, ತೆಳುವಾದ ಸಿಪ್ಪೆ, ಚಿಕ್ಕ ವಾಟೆ ಅಕರ್ಷಣೀಯ ಬಣ್ಣ ಮತ್ತು ಗಾತ್ರ ಈ ರೀತಿಯ ಹಲವು ಕಾರಣಗಳಿಂದ ತರೀಕೆರೆ ಮಾವಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ಅಪಾರ ಬೇಡಿಕೆ ಇದೆ.ಮೈಸೂರು- ಬೆಂಗಳೂರು-ಗದಗ-ಸಾಂಗ್ಲಿ-ಬಾಂಬೆ ಇತ್ಯಾದಿ ಮಾರುಕಟ್ಟೆಯಲ್ಲಿ ತರೀಕೆರೆ ಮಾವಿನ ಹಣ್ಣುಗಳು ಬಹುಬೇಗ ಹಾಗೂ ಹೆಚ್ಚು ಮಾರಾಟವಾಗುತ್ತವೆ.
ಮಾವಿನ ಉತ್ತಮ ಇಳುವರಿಗೆ ಹವಾಮಾನವೇ ಬಹು ಮುಖ್ಯ. ಹಾಗಾಗಿ ಪೂರಕ ಹವಾಮಾನ ಸಹಕರಿಸಿದರೆ ಎಲೆ ಟೊಂಗೆಗಳೇ ಕಾಣದಂತೆ ಮಾವು ಹೂವು, ಹೀಚು, ಕಾಯಿ ಮರಗಳಲ್ಲಿ ತುಂಬಿಕೊಂಡಿರುತ್ತದೆ. ಕಟಾವು ಮಾಡಿದಷ್ಟು ಮರ ದಲ್ಲಿ ಮಾವಿನ ಕಾಯಿಗಳು ಅಕ್ಷಯವಾಗುತ್ತದೆ.
ಔಷಧ ಸಿಂಪಡಣೆಯಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ ಪ್ರಕೃತಿದತ್ತವಾಗಿ ಬೆಳೆದ ಮಾವಿಳಿಗೂ ಔಷಧಬಳಸಿ ಬೆಳೆದ ಮಾವಿಗೂ ಅಜಗಜಾಂತರ ವ್ಯತ್ಯಾಸ. ಕಳೆದ 2-3 ವರ್ಷಗಳಿಂದ ತರೀಕೆರೆ ತಾಲೂಕಿನ ಮಾವು ಬೆಳೆಗಾರರು ಈ ರೀತಿ ಸಂಕಷ್ಟ ಎದುರಿಸುತ್ತಿದ್ದಾರೆ. ಬದಲಾದ ಹವಾಮಾನದಿಂದ ಬೆಳೆಗಾರರು ಮಾವಿನ ಬೆಳೆ ಬಗ್ಗೆ ನಂಬಿಕೆ ಕಳೆದು ಕೊಳ್ಳುತ್ತಿದ್ದಾರೆ. ಮಾವು ಬೆಳೆದವರಿಗೂ ನಷ್ಟ, ಚೇಣಿದಾರರಿಗೂ ನಷ್ಟ, ಮಾವು ವರ್ತಕರಿಗೂ ನಷ್ಟ,
-ಬಾಕ್ಸ್--
ಮಾವಿನ ಹೀಚಿಗೆ ಪೂರಕ ಶಕ್ತಿ ಸಿಗದೆ ಮರಗಳಿಂದ ಮಾವಿನ ಕಾಯಿಗಳು ಉದುರಿದ್ದರಿಂದ ಮರದಲ್ಲಿದ್ದ ಕಾಯಿಗಳಿಗಿಂತ ನೆಲಕ್ಕೆ ಬಿದ್ದು ಕೊಳೆತ ಕಾಯಿಗಳ ಸಂಖ್ಯೆಯೇ ಅಧಿಕವಾಗಿತ್ತು. ಜೊತೆಗೆ ಈ ಬಾರಿ ಯುದ್ದದ ಪರಿಣಾಮ ಯಾವ ಹಣ್ಣುಗಳು ಹೊರದೇಶಕ್ಕೆ ರವಾನೆಯಾಗದೆ ಉಳಿದವು ಇದರಿಂದ ಮಾವು ಹೊರತಾಗಲಿಲ್ಲ. ಮಾವಿನ ಹಣ್ಣು ಜ್ಯೂಸ್ ತಯಾರಿಕೆಗೆ ಮಾರುಕಟ್ಟೆಯಲ್ಲಿ ಖರೀದಿ ಆಗದೆ, ಮಾವಿನ ಹಣ್ಣಿಗೂ ಧಾರಣೆಯೇ ಇಲ್ಲದಂತಾಯಿತು ಎಂದು ದೋರನಾಳು ಗ್ರಾಮದ ಮಾವು ಬೆಳೆಗಾರ ಅಸ್ಲಾಂಖಾನ್ ತಿಳಿಸಿದ್ದಾರೆ.
ಬೆಳೆಗಾರರು ಮಾವು ಬೆಳೆಯುವುದನ್ನು ನಿಲ್ಲಿಸಬಾರದು, ತರೀಕೆರೆ ತಾಲೂಕಿನ ಮಾವಿನ ಹಣ್ಣಿಗೆ ಬೇಡಿಕೆ ಖಂಡಿತ ಇದ್ದೇ ಇರುತ್ತದೆ. ನಿರಾಶರಾಗದೆ ಬೆಳೆಗಾರರು ಹೆಚ್ಚು ಹೆಚ್ಚು ಮಾವು ಬೆಳೆ ಉಳಿಸಿ ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.
22ಕೆಟಿಆರ್.ಕೆ.1ಃ
ತರೀಕೆರೆ ತಾಲೂಕಿನಲ್ಲಿ ಬದಲಾದ ಹವಾಮಾನದಿಂದ ಮರಗಳಿಂದ ಉದುರಿಹೋದ ಮಾವು ಬೆಳೆ22ಕೆಟಿಆರ್.ಕೆ.02ಃ
ಮರಗಳಿಂದ ಉದುರಿಹೋದ ಮಾವು ಬೆಳೆ22ಕೆಟಿಆರ್.ಕೆ.03ಃ
ದೋರನಾಳು ಅಸ್ಲಾಂಖಾನ್ ಮಾವು ಬೆಳೆಗಾರರು.