ರಾಮನಗರ: ಸಾಮಾಜಿಕ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜಯಂತಿ ಪ್ರಯುಕ್ತ ಬೆಳ್ಳಿ ರಥದಲ್ಲಿ ಅರಸುರವರ ಭಾವಚಿತ್ರ ಇರಿಸಿ ನಡೆಸಿದ ಮೆರವಣಿಗೆಯಲ್ಲಿ ಹಿಂದುಳಿದ ಸಮುದಾಯಗಳ ಜನರು ಪ್ರದರ್ಶಿಸಿದ ಕಲೆ ಮತ್ತು ಸಂಸ್ಕೃತಿ ಕಣ್ಮನ ಸೆಳೆಯಿತು.
ಈ ಮೆರವಣಿಗೆಯಲ್ಲಿ ಕುಂಬಾರ ಸಮುದಾಯದ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರೆ,
ಕುರುಬು ಸಮುದಾಯದವರು ಡೊಳ್ಳು ಕುಣಿತ, ವೀರಗಾಸೆ, ಈಡಿಗ ಮತ್ತು ರಜಪೂತ ಸಮುದಾಯದವರ ಐತಿಹ್ಯ ಬಿಂಬಿಸುವ ಸ್ಥಬ್ಧಚಿತ್ರಗಳು, ರಾಧಾಕೃಷ್ಣ ವೇಷ ಸೇರಿದಂತೆ ಹಿಂದುಳಿದ ಸಮುದಾಯದ ಕುಲದ ಐತಿಹಾಸಿಕ ಪುರುಷರನ್ನು ಬಿಂಬಿಸುವ ವೇಷಭೂಷಣಗಳು ಮೆರವಣಿಗೆಯಲ್ಲಿ ಗಮನಸೆಳೆದವು.ಸವಿತಾ ಸಮಾಜದ 500 ಮಂದ ಒಟ್ಟಾಗಿ ಬಾರಿಸಿದ ನಾದಸ್ವರ, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತುಂಬಿದವು.
ವೇದಿಕೆ ಕಾರ್ಯಕ್ರಮದಲ್ಲಿ ಹಿಂದುಳಿದ ಸಮುದಾಯದಲ್ಲಿ ಸಾಧನೆ ಮಾಡಿದ 5 ಮಂದಿ ಸಾಧಕರಿಗೆ ತಲಾ 25 ಸಾವಿರ ನಗದು, ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರನ್ನು ಸನ್ಮಾನಿಸಲಾಯಿತು.19ಕೆಆರ್ ಎಂಎನ್ 6,7.ಜೆಪಿಜಿ
6.ರಾಮನಗರದಲ್ಲಿ ನಡೆದ ದೇವರಾಜ ಅರಸು ಜಯಂತಿಯ ಅಂಗವಾಗಿ ಅರಸು ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.7.ಅರಸು ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.