ಗದಗ: ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿದ್ದು, ಅದರ ರಕ್ಷಣೆಗೆ ನಮ್ಮೆಲ್ಲರ ಮೊದಲ ಆದ್ಯತೆ ಇರಲಿ ಎಂದು ರೋಟರಿ ವೇಲ್ಫೇರ್ ಸೊಸೈಟಿ ಅಧ್ಯಕ್ಷ ಶ್ರೀಧರ ಸುಲ್ತಾನಪುರ ಹೇಳಿದರು.
ನಗರದ ರೋಟರಿ ಕ್ಲಬ್ ವೇಲ್ಫೇರ್ ಸೊಸೈಟಿಯಲ್ಲಿ ರೋಟರಿ ಕ್ಲಬ್ ಹಾಗೂ ಜೇಂಟ್ಸ್ ಗ್ರುಫ್ ಆಫ್ ಸಖಿ ಸಹೇಲಿ ಸಂಯುಕ್ತಾಶ್ರಯದಲ್ಲಿ ನಡೆದ ನೇತ್ರ ತಪಾಸಣೆ ಹಾಗೂ ಕಣ್ಣಿನಲ್ಲಿ ಮಸೂರ ಅಳವಡಿಸುವ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.ರೋಟರಿ ಕ್ಲಬ್ ನಿರಂತರವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ನಡೆಸುತ್ತಿದ್ದು ಇದು ಬಡವ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿದೆ. ದೃಷ್ಟಿಯು ಸೃಷ್ಟಿಯನ್ನು ನೋಡಲು ಒಳ್ಳೆಯ ಅವಕಾಶ ಒದಗಿಸಿಕೊಡುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜೇಂಟ್ಸ್ ಗ್ರುಫ್ ಆಫ್ ಸಖಿ ಸಹೇಲಿ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಕಣ್ಣು ಬೆಳಕು ಕಾಣುವ ಜ್ಞಾನೇಂದ್ರೀಯ ನಮ್ಮ ದೇಹದ ತುಂಬಾ ಸೂಕ್ಷ್ಮವಾದ ಅತ್ಯಂತ ಪ್ರಮುಖವಾದ ಭಾಗವೇ ಕಣ್ಣು. ಇವುಗಳ ಸದೃಢ ಹಾಗೂ ಆರೈಕೆ ಅತೀ ಮುಖ್ಯವಾಗಿದೆ. ವಿಟಾಮಿನ್ ಸಿ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಕಣ್ಣಿನ ಪೊರೆ ಬರುವದನ್ನು ತಡೆಗಟ್ಟಬಹುದು. ಮುಖ್ಯವಾಗಿ ತಜ್ಞ ವೈದ್ಯರ ಭೇಟಿ ಸೂಕ್ತ ಚಿಕಿತ್ಸೆ ಮೂಲಕ ಕಣ್ಣಿನ ರಕ್ಷಣೆ ಮಾಡಿಕೊಳ್ಳಬೇಕು ಎಂದರು.ರೋಟರಿ ಕ್ಲಬ್‌ನ ಕಾರ್ಯದರ್ಶಿ ಸುರೇಶ ಕುಂಬಾರ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ನಡೆಸುತ್ತಿರುವ ಶಿಬಿರದಲ್ಲಿ ಕಣ್ಣಿನ ಚಿಕಿತ್ಸೆ ಪಡೆದ ಸಾವಿರಾರು ಫಲಾನುಭವಿಗಳು ಇಂದು ಆರೋಗ್ಯದಿಂದ ಇದ್ದು ಉತ್ತಮ ದೃಷ್ಠಿ ಹೊಂದಿದ್ದಾರೆ. ನುರಿತ ವೈದ್ಯರ ತಂಡ ಕ್ಲಬ್‌ನಲ್ಲಿ ಸಹಕಾರ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.ಈ ವೇಳೆ ಅಶ್ವಿನಿ ಮಾದಗುಂಡಿ, ಶಶಿಕಲಾ ಮಾಲಿಪಾಟೀಲ, ಮಾಧುರಿ ಮಾಳೆಕೊಪ್ಪ, ಅನುರಾಧಾ ಅಮಾತ್ಯೆಗೌಡರ, ಚಂದ್ರಕಲಾ ಸ್ಥಾವರಮಠ, ಸುಶ್ಮೀತಾ ವೇರ್ಣೆಕರ, ನಿರ್ಮಲಾ ಪಾಟೀಲ, ರೇಖಾ ರೊಟ್ಟಿ, ಮಧು ಕರಬಿಷ್ಟಿ, ಸುಗ್ಗಲಾ ಯಳಮಲಿ, ಶ್ರೀದೇವಿ ಮಹೇಂದ್ರಕರ, ಬಾಲಕೃಷ್ಣ ಕಾಮತ, ಡಾ. ಪ್ರದೀಪ ಉಗಲಾಟ, ಡಾ. ವಿನಯ ಟೀಕಾರೆ, ರುದ್ರೇಶ, ನೇತ್ರಾ, ಜ್ಯೋತಿ ದೊಡ್ಡಮನಿ, ದೀಪಾ, ಆನಂದ ಶಿಂಗ್ರಿ ಸೇರಿದಂತೆ ಇತರರು ಇದ್ದರು. ಶಿವಾಚಾರ್ಯ ಹೊಸಳ್ಳಿಮಠ ಸ್ವಾಗತಿಸಿದರು. ಡಾ. ಆರ್.ಜಿ. ಉಪ್ಪಿನ ನಿರೂಪಿಸಿದರು. ಚಂದ್ರಶೇಖರ ಹುಣಶೀಕಟ್ಟಿ ವಂದಿಸಿದರು.