ಮಹಿಳೆಯರು ಕೌಶಲ್ಯ ಅಳವಡಿಸಿಕೊಳ್ಳಲಿ: ಮೌಲಾಲಿ ಯಲವಿಗಿ

KannadaprabhaNewsNetwork |  
Published : Sep 20, 2025, 01:02 AM IST
ಹಾವೇರಿ ತಾಲೂಕಿನ ಕಬ್ಬೂರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಾಲಯದಲ್ಲಿ ಮಹಿಳಾ ಆರ್ಥಿಕ ಸಬಲತೆ ಕುರಿತು ಬಜ್ ಇಂಡಿಯಾ ಸಂಸ್ಥೆಯ ವತಿಯಿಂದ ತರಬೇತಿ ನಡೆಯಿತು. | Kannada Prabha

ಸಾರಾಂಶ

ಬಜ್ ಇಂಡಿಯಾ ಸಂಸ್ಥೆ ಮಹಿಳೆಯರಿಗೆ ನೀಡುವ ತರಬೇತಿಗೆ ಕಬ್ಬೂರ ಗ್ರಾಮ ಪಂಚಾಯಿತಿ ಸಂಪೂರ್ಣ ಸಹಕಾರ ನೀಡುತ್ತದೆ. ನಮ್ಮ ಗ್ರಾಮದ ಮಹಿಳೆಯರು ಇದರ ಸದುಪಯೋಗ ಪಡೆಯಬೇಕು.

ಹಾವೇರಿ: ಮಹಿಳೆಯರು ಆರ್ಥಿಕವಾಗಿ ಬಲವಾಗಲು ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಬಜ್ ಇಂಡಿಯಾ ಸಂಸ್ಥೆಯ ಜತೆಗೆ ಕೈಜೋಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೌಲಾಲಿ ಯಲವಿಗಿ ತಿಳಿಸಿದರು.ತಾಲೂಕಿನ ಕಬ್ಬೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಹಿಳಾ ಆರ್ಥಿಕ ಸಬಲತೆ ಕುರಿತು ಬಜ್ ಇಂಡಿಯಾ ಸಂಸ್ಥೆಯ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಬಸಪ್ಪ ಹೊಸಳ್ಳಿ ಮಾತನಾಡಿ, ಬಜ್ ಇಂಡಿಯಾ ಸಂಸ್ಥೆ ಮಹಿಳೆಯರಿಗೆ ನೀಡುವ ತರಬೇತಿಗೆ ಕಬ್ಬೂರ ಗ್ರಾಮ ಪಂಚಾಯಿತಿ ಸಂಪೂರ್ಣ ಸಹಕಾರ ನೀಡುತ್ತದೆ. ನಮ್ಮ ಗ್ರಾಮದ ಮಹಿಳೆಯರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.ಬಜ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ರುದ್ರೇಶ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಶಿವಪ್ಪ ತಿಪ್ಪಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ತರಬೇತಿ ಸುಗಮಕಾರ ನೇತ್ರಾ ಧರೆಯಪ್ಪನವರ ಇದ್ದರು.ಕಾರ್ಯಕ್ರಮದಲ್ಲಿ ಕಬ್ಬೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳೆಯರು ಪಾಲ್ಗೊಂಡಿದ್ದರು. ಪ್ರಾಸ್ತಾವಿಕವಾಗಿ ರೇಣುಕಾ ಕಹಾರ ಮಾಡಿದರು. ಅರ್ಚನಾ ಡಿ. ನಿರೂಪಿಸಿದರು. ಅಕ್ಕಮಹಾದೇವಿ ಸ್ವಾಗತಿಸಿದರು. ಉಮಾ ಸೋಟಾರಿ ವಂದಿಸಿದರು.ಬೆಳೆಹಾನಿ ವಾಸ್ತವ ಮರೆಮಾಚುತ್ತಿರುವ ಜಿಲ್ಲಾಡಳಿತ: ಆರೋಪ

ಹಾನಗಲ್ಲ: ಜಿಲ್ಲೆಯಲ್ಲಿ ನಡೆದ ಅತಿವೃಷ್ಟಿ ಬೆಳೆಹಾನಿ ಸಮೀಕ್ಷೆ ಸಂಪೂರ್ಣ ವಿಫಲವಾಗಿದ್ದು, ಜಿಲ್ಲಾಡಳಿತ ನೀಡಿದ ಬೆಳೆಹಾನಿ ಅಂಕಿ ಅಂಶಗಳು ವಾಸ್ತವವನ್ನು ಮರೆಮಾಚುತ್ತಿವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿವಿಧ ಇಲಾಖೆಗಳು ಜಂಟಿಯಾಗಿ ನಡೆಸಿದ ಬೆಳೆಹಾನಿ ಸಮೀಕ್ಷೆ ವರದಿ ಬಿಡುಗಡೆಗೊಳಿಸಿದ್ದು, ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ಬೆಳೆಹಾನಿ ಆಗಿದೆ ಎಂದು ಹೇಳಿರುವುದು ರೈತರನ್ನು ಕಂಗೆಡಿಸಿದೆ.ಒಂದೊಂದು ತಾಲೂಕಿನಲ್ಲಿ 12 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆಹಾನಿಯಾಗಿದೆ. ಇದರಲ್ಲಿ ಇಡೀ ಜಿಲ್ಲೆಯಲ್ಲಿ ಕೇವಲ 17 ಸಾವಿರ ಹೆಕ್ಟೇರ್ ಬೆಳೆಹಾನಿ ಎಂದು ವರದಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಬಿತ್ತನೆ ಕಾಲದಿಂದಲೂ ಆದ ನಿರಂತರ ಮಳೆಯಿಂದಾಗಿ ರೈತರಿಗೆ ಬಿಡಿಗಾಸೂ ಬಾರದ ರೀತಿಯಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಎರಡು ಪಟ್ಟಿಗೂ ಹೆಚ್ಚು ಬೆಳೆಹಾನಿಯಾಗಿದ್ದರೂ ಜಿಲ್ಲಾಡಳಿತ ಅತ್ಯಂತ ಕಡಿಮೆ ಬೆಳೆಹಾನಿ ದಾಖಲು ಮಾಡಿರುವುದು ರೈತ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದಿದ್ದಾರೆ.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ