ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗುರುವಾರ ಪಟ್ಟಣದ ಜಗದಂಬಾ ದೇವಸ್ಥಾನದ ಸಭಾಭವನದಲ್ಲಿ ವಿಶ್ವಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಆಯೋಜಿಸಿರುವ ಏಳು ದಿನಗಳ ದುರ್ಗಾವಾಹಿನಿ ಶೌರ್ಯ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿ, ಶಕ್ತಿ ಇದ್ದ ವ್ಯಕ್ತಿಗೆ ಸಮಾಜದಲ್ಲಿ ಗೌರವವಿದೆ. ಅದಕ್ಕೆ ನಾವೆಲ್ಲ ಶಕ್ತಿವಂತರಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣು ಮಕ್ಕಳನ್ನು ತೊಡಗಿಸಬೇಕು. ಸಮಾಜದಲ್ಲಿ ನಡೆಯುವ ಕ್ರೌರ್ಯಕ್ಕೆ ಶೌರ್ಯದಿಂದ ಉತ್ತರ ನೀಡಬೇಕಾಗಿದೆ ಎಂದರು.
ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಿಶೆಟ್ಟಿ, ಪ್ರಾಂತ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ದುರ್ಗಾವಾಹಿನಿ ಪ್ರಾಂತ ಸಂಯೋಜಕಿ ಸಂಗೀತಾ ಪವಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ದುರ್ಗಾವಾಹಿನಿ ಮುಖ್ಯಶಿಕ್ಷಕಿ ವಿಶಾಲಾ ಮಂಗಳೂರು, ವಿಶ್ವಹಿಂದೂ ಪರಿಷತ್ ಪ್ರಾಂತ ಸತ್ಸಂಗ ಪ್ರಮುಖ ಮಹಾಬಲೇಶ ಹೆಗಡೆ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಮೇಲನಾಡ, ಕೃಷ್ಣಾ ರಾಜೂರ, ರಾಜು ಕೋಟೆ, ಸ್ನೇಹಾ ನರೆಗಲ್ಲ, ರಾಘವೇಂದ್ರ ಭಸ್ಮೆ, ಜಯಶ್ರೀ ಐಹೊಳೆ, ಮಹಾದೇವ ಜಗತಾಪ, ಉಮಾ ಹಿರೇಮಠ, ವೀಣಾ ಮಠದ, ಭಾಗ್ಯಶ್ರೀ ನಾಯಕವಾಡ, ಪಾರ್ವತಿ ಕಳೇವಾಡ ಸೇರಿದಂತೆ ಇತರರು ಇದ್ದರು.