ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಆರೋಗ್ಯ ಸಮಾಜ ನಿರ್ಮಿಸಿ

KannadaprabhaNewsNetwork |  
Published : Mar 01, 2025, 01:03 AM IST
ಐಜಿಪಿ ರವಿಕಾಂತೇಗೌಡ | Kannada Prabha

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಆಡಳಿತಾತ್ಮಕವಾಗಿ ಆರೋಗ್ಯ ಸಮಾಜ ನಿರ್ಮಾಣಕ್ಕೆ ಯುವಜನರು ಮುಂದಾಗಬೇಕು ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಎಂಐಟಿಯಲ್ಲಿ ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆ ಉಪನ್ಯಾಸ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಆಡಳಿತಾತ್ಮಕವಾಗಿ ಆರೋಗ್ಯ ಸಮಾಜ ನಿರ್ಮಾಣಕ್ಕೆ ಯುವಜನರು ಮುಂದಾಗಬೇಕು ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ಹೇಳಿದರು.

ನಗರದ ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಜಿಎಂಐಟಿ ಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಐಎಎಸ್ ಅಕಾಡೆಮಿ- ದಿ ಹಿಂದೂ ಗ್ರೂಪ್ ಹಮ್ಮಿಕೊಂಡಿದ್ದ ಐಎಎಸ್‌ ಆಸ್ಪಿರೆಂಟ್ಸ್‌ ಕ್ಲಬ್‌ ಅತಿಥಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತ ಉತ್ತಮವಾಗಿದ್ದರೆ ಒಳ್ಳೆಯ ಆಸ್ಪತ್ರೆ, ಜನರ ಒಳ್ಳೆಯ ಬದುಕು, ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದರು.

ವಿದ್ಯಾರ್ಥಿ, ಯುವಜನರು ಕೇವಲ ತಮ್ಮ ಬದುಕನ್ನಷ್ಟೇ ರೂಪಿಸಿಕೊಳ್ಳದೇ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಆಡಳಿತಾತ್ಮಕವಾಗಿ ಸಮಾಜದಲ್ಲಿ ಆರೋಗ್ಯಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ಸಾಧನೆಯ ಹೆಜ್ಜೆ ಮೂಡಿಸಬೇಕು. ನಾವೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವಾಗ ಇಂತಹ ತರಬೇತಿಗೆಗಳಿಗೆ ಅವಕಾಶಗಳು ಇರಲಿಲ್ಲ. ಹಾಗಾಗಿ, ತರಬೇತಿದಾಗಿ ದೆಹಲಿ ಇತರೆಡೆ ಹೋಗಬೇಕಾಗಿತ್ತು ಎಂದು ತಿಳಿಸಿದರು.

ರಾಜ್ಯದಲ್ಲೇ ಕನ್ನಡದ ಯುವಕ- ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲೆಂಬ ಸದುದ್ದೇಶದಿಂದ ಉತ್ತೇಜನಕಾರಿ ಕೆಲಸವನ್ನು ಶಂಕರ ಅಕಾಡೆಮಿ ಸೇರಿದಂತೆ ರಾಜ್ಯಾದ್ಯಂತ ಹಲವಾರು ಐಎಎಸ್ ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ. ನೀವೆಲ್ಲರೂ ಅದೃಷ್ಟವಂತರಾಗಿದ್ದು, ಇಂತಹ ತರಬೇತಿ, ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಜ್ಞಾನಾರ್ಜನೆಗಾಗಿ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿಕೊಂಡು ತರುವ, ಓದುವ ಸ್ಥಿತಿ ನಮಗಿತ್ತು. ಆದರೆ, ಈಗ ಅಕಾಡೆಮಿಗಳು ಉಚಿತವಾಗಿ ತರಬೇತಿ ನೀಡಿ, ನಿಮ್ಮನ್ನು ತಯಾರುಗೊಳಿಸುತ್ತಿರುವುದು ಇದೊಂದು ಸದಾವಕಾಶವಾಗಿದೆ ಎಂದು ಐಜಿಪಿ ರವಿಕಾಂತೇಗೌಡ ತಿಳಿಸಿದರು.

ದಿ ಹಿಂದೂ ಗ್ರೂಪ್ ಪ್ರಧಾನ ವ್ಯವಸ್ಥಾಪಕ ಸಿ.ಶ್ರೀಧರ, ಹುಬ್ಪಳ್ಳಿ ವಿಭಾಗದ ಮುಖ್ಯ ಸಂಪಾದಕ ಗಿರೀಶ, ಶಂಕರ್ ಐಎಎಸ್ ಅಕಾಡೆಮಿ ಪ್ರಾದೇಶಿಕ ಮುಖ್ಯಸ್ಥ ಪ್ರೇಮಾನಂದ, ಆನಂದ ಮಾಳಗಿ, ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಸ್. ಓಂಕಾರಪ್ಪ ಸೇರಿದಂತೆ ಇತರರು ಇದ್ದರು.

- - - (ಫೋಟೋಗಳಿವೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ