ಹನುಮಸಾಗರ: ಫೆ. 10ರಂದು ಮಹರ್ಷಿ ವಾಲ್ಮೀಕಿ ಜಾತ್ರೆ, ಉಚಿತ ಸಾಮೂಹಿಕ ವಿವಾಹ, ಮದುವೆಗಳು, ರಾಜಾವೀರ ಮದಕರಿ ನಾಯಕ, ವೀರ ಸಿಂಧೂರ ಲಕ್ಷ್ಮಣ ಹಾಗೂ ಮಹಾತ್ಮ ಗಾಂಧಿ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಸಮೀಪದ ತುಮರಿಕೊಪ್ಪ ಗ್ರಾಮದ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ಮಠದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.
ವಾಲ್ಮೀಕಿ ಸಮಾಜದ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರು ಕಲಾಶ್ರಮದ ಸ್ವಾಮೀಜಿಗಳಾದ ಆತ್ಮಾನಂದ ಸ್ವಾಮೀಜಿ, ಪವನಕುಮಾರ ಸ್ವಾಮೀಜಿ, ರಾಜಾನವೀನಚಂದ್ರ ನಾಯಕ ದೊರೆಗಳು ಸಾನ್ನಿಧ್ಯವನ್ನು ವಹಿಸಲಿದ್ದಾರೆ. ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ರಮೇಶ ಜಾರಕಿಹೊಳಿ, ಶಿವನಗೌಡ ನಾಯಕ, ನರಸಿಂಹನಾಯಕ ರಾಜುಗೌಡ, ಬಿ. ಶ್ರೀರಾಮುಲು, ಎಂಪಿ ರಾಜಶೇಖರ ಹಿಟ್ನಾಳ, ಅಗ್ನಿಶಾಮಕದಳದ ಡಿಐಜಿ ರವಿ ಡಿ. ಚನ್ನಣ್ಣನವರ ಆಗಮಿಸಲಿದ್ದಾರೆ.
ಗ್ರಾಪಂ ಸದಸ್ಯರಾದ ಹನುಮಂತ ಮೂಗನೂರು, ಮಹಾಂತೇಶ ಪೂಜಾರ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಗಾಣದಾಳ, ಗ್ರಾಮಸ್ಥರಾದ ಬಸಣ್ಣ ನಸಗುನ್ನಿ, ಯಮನೂರಗೌಡ ಪರಸಾಪುರ, ದ್ಯಾಮಣ್ಣ ಮೂಗನೂರು, ಹನಮಪ್ಪ ಗುಳಬಾಳ, ಮರಿಯಪ್ಪ ಕಾ. ಗ್ವಾತಗಿ, ದ್ಯಾಮಣ್ಣ ತುಗ್ಗಲಡೋಣಿ, ಲಕ್ಷ್ಮಣ ಹಲಕುರ್ಕಿ, ಪುಟ್ಟರಾಜ ಗಾಣದಾಳ ಇತರರು ಇದ್ದರು.