ಸಾಗುವಳಿ ಚೀಟಿ ವಿತರಿಸುವ ಕಾರ್ಯಕ್ಕೆ ಚುರುಕು ಮುಟ್ಟಿಸಿರುವೆ; ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Apr 11, 2026, 02:00 AM IST
9ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಶಾಸಕ ಇಕ್ಬಾಲ್ ಹುಸೇನ್ ರವರ ಅಧ್ಯಕ್ಷತೆಯಲ್ಲಿ  ಬಗರ್ ಹುಕುಂ ಸಾಗುವಳಿ ಸಭೆ ನಡೆಯಿತು. | Kannada Prabha

ಸಾರಾಂಶ

ಕಸಬಾ 1 ರಲ್ಲಿ 6 ಸರ್ವೇ ನಂಬರ್ ನಲ್ಲಿ 45 ಅರ್ಜಿ ಗಳಿದ್ದು , ಕಸಬಾ 2 ರಲ್ಲಿ 7 ಸರ್ವೇ ನಂಬರ್ ಗಳಲ್ಲಿ 21 ಅರ್ಜಿಗಳಿದ್ದು, ಏಪ್ರಿಲ್ 13ರಂದು ಸ್ಥಳ ಪರಿಶೀಲನೆ ನಡೆಸಲಾಗುವುದು. ಕೈಲಾಂಚ 1 ರಲ್ಲಿ 17 ಸರ್ವೇ ನಂಬರ್ ಗಳಲ್ಲಿ 97 ಅರ್ಜಿಗಳಿದ್ದು ಕೈಲಾಂಚ 2ರಲ್ಲಿ 4 ಸರ್ವೇ ನಂಬರ್‌ಗಳಲ್ಲಿ 24 ಅರ್ಜಿಗಳಿದ್ದು ಮೇ ಕೊನೆಯ ವಾರ ಪರಿಶೀಲನೆ ನಡೆಸಲಾಗುವುದು. ಕಂದಾಯ ನಿರೀಕ್ಷಕರು ಫಲಾನುಭವಿಗಳಿಗೆ ಮಾಹಿತಿ ನೀಡಿ ಸ್ಥಳದಲ್ಲಿರಲು ತಿಳಿಸುವಂತೆ ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಹಲವು ವರ್ಷಗಳಿಂದ ನಾನಾ ಕಾರಣಗಳಿಂದ ಸಮಸ್ಯೆ ಬಗೆ ಹರಿಯದೆ ಧೂಳು ಹಿಡಿದಿದ್ದ ರೈತರ ಸಾಗುವಳಿ ಅರ್ಜಿಗಳಿಗೆ ಮುಕ್ತಿ ನೀಡಿ ಸಾಗುವಳಿ ಚೀಟಿಗಳನ್ನು ವಿತರಿಸುವ ಕಾರ್ಯಕ್ಕೆ ವೇಗ ನೀಡಿದ್ದೇನೆ ಎಂದು ಶಾಸಕ ಎಚ್.ಎ.ಇಕ್ಬಾಲ್‌ ಹುಸೇನ್ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಗರ್ ಹುಕುಂ ಸಾಗುವಳಿ ಸಭೆಯಲ್ಲಿ ಮಾತನಾಡಿದ ಅವರು, ಸಾಗುವಳಿ ಚೀಟಿ ವಿತರಿಸುವ ಸಂಬಂಧ ತಹಸೀಲ್ದಾರ್ ಮತ್ತು ಅಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಲಾಗಿದೆ. ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ಸಾಗುವಳಿ ಪತ್ರ ಹಂಚುವ ಹಂತಕ್ಕೆ ಬಂದಿದ್ದೇವೆ. ಈಗಾಗಲೇ ಕೈಲಾಂಚ ಭಾಗದ ಕೆಲವು ಸಾಗುವಳಿ ಪ್ರದೇಶಗಳನ್ನು ಪರಿಶೀಲನೆ ನಡೆಸಿದ್ದು, ಅರ್ಹರಿಗೆ ನ್ಯಾಯ ಕೊಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಈ ಹಿಂದೆ ಬಗರ್ ಹುಕುಂ ಸಾಗುವಳಿ ಸಭೆ ಸಕಾಲದಲ್ಲಿ ನಡೆಸದೆ ರಾಜಕಾರಣ ಮಾಡಿಕೊಂಡು ಕಾಲ ಕಳೆದರು. ಇದರ ಪರಿಣಾಮ ಕೆಲವು ರೈತರ ಅರ್ಜಿಗಳಿಗೆ ಮುಕ್ತಿ ಸಿಕ್ಕಿಲ್ಲ. ಇನ್ನೂ ಕೆಲವು ರೈತರ ಅರ್ಜಿಗಳು ವಜಾ ಆಗಿವೆ. ಕೆಲವರು ಮರಣ ಹೊಂದಿದ್ದರೆ, ಅವರ ಮಕ್ಕಳು ಅನುಭವದಲ್ಲಿದ್ದುಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅಂತವರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ರೈತರ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಈ ಹಿಂದೆ ಕೆಲವು ರೈತರ ಅರ್ಜಿಗಳು ವಜಾಗೊಂಡಿವೆ. ಅಂತಹ ರೈತರು ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲಿ ಎಂದು ಹೇಳಿದರು.

ರಾಜಸ್ವ ನಿರೀಕ್ಷಕರು ಅರ್ಜಿಗಳ ಲಾಗಿನ್ ಪ್ರಕ್ರಿಯೆಯನ್ನು ಮುಗಿಸಿ, ಬೇಗ ಅಪ್ ಡೇಟ್ ಮಾಡಿದ ನಂತರವಷ್ಟೇ ಸಾಗುವಳಿ ಭೂಮಿ ಪರಿಶೀಲನೆ ನಡೆಸಲು ಸಾಧ್ಯವಾಗಲಿದೆ. ಕಸಬಾ 1, ಕಸಬಾ 2 ಹಾಗೂ ಕೈಲಾಂಚ ವ್ಯಾಪ್ತಿಯಲ್ಲಿ ನಮೂನೆ 50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಲಾಗಿನ್ ಮಾಡಿ ಅನುಭವದಲ್ಲಿರುವ ಭೂಮಿಯ ಸ್ಥಳ ಪರಿಶೀಲನೆ ನಡೆಸಿ ಅರ್ಹ ರೈತರಿಗೆ ಶೀಘ್ರವಾಗಿ ಸಾಗುವಳಿ ಚೀಟಿ ಕೊಡೋಣ. ಇದಕ್ಕೆ ತಹಸೀಲ್ದಾರ್, ಸಮಿತಿ ಸದಸ್ಯರು, ಅಧಿಕಾರಿಗಳು ನನ್ನ ಜೊತೆ ಕೈ ಜೋಡಿಸಿ ಎಂದು ತಿಳಿಸಿದರು.

ಕಸಬಾ 1 ರಲ್ಲಿ 6 ಸರ್ವೇ ನಂಬರ್ ನಲ್ಲಿ 45 ಅರ್ಜಿ ಗಳಿದ್ದು , ಕಸಬಾ 2 ರಲ್ಲಿ 7 ಸರ್ವೇ ನಂಬರ್ ಗಳಲ್ಲಿ 21 ಅರ್ಜಿಗಳಿದ್ದು, ಏಪ್ರಿಲ್ 13ರಂದು ಸ್ಥಳ ಪರಿಶೀಲನೆ ನಡೆಸಲಾಗುವುದು. ಕೈಲಾಂಚ 1 ರಲ್ಲಿ 17 ಸರ್ವೇ ನಂಬರ್ ಗಳಲ್ಲಿ 97 ಅರ್ಜಿಗಳಿದ್ದು ಕೈಲಾಂಚ 2ರಲ್ಲಿ 4 ಸರ್ವೇ ನಂಬರ್‌ಗಳಲ್ಲಿ 24 ಅರ್ಜಿಗಳಿದ್ದು ಮೇ ಕೊನೆಯ ವಾರ ಪರಿಶೀಲನೆ ನಡೆಸಲಾಗುವುದು. ಕಂದಾಯ ನಿರೀಕ್ಷಕರು ಫಲಾನುಭವಿಗಳಿಗೆ ಮಾಹಿತಿ ನೀಡಿ ಸ್ಥಳದಲ್ಲಿರಲು ತಿಳಿಸುವಂತೆ ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ, ಸಮಿತಿ ಸದಸ್ಯರಾದ ಕೆ.ರವಿ, ತಿಮ್ಮಯ್ಯ, ಅಮೃತ , ಎಡಿಎಲ್‌ಆರ್, ರಾಜಸ್ವ ನಿರೀಕ್ಷಕರು, ಲೆಕ್ಕಾಧಿಕಾರಿಗಳು, ಸರ್ವೇಯರ್ ಭಾಗವಹಿಸಿದ್ದರು. ನಂತರ ಶಾಸಕರು ಸಾರ್ವಜನಿಕರ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋರ್ಟ್‌ನಲ್ಲಿ ವಾದ ಮಾಡುವಾಗಲೇ ಹೃದಯಾಘಾತದಿಂದ ವಕೀಲ ಸಾವು
ಹಿಟ್ನಾಳ-ಹುಲಿಗಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ