ನ್ಯಾಯಬೆಲೆ ಅಂಗಡಿಗಳಿಂದ ಜನತೆಗೆ ಅನುಕೂಲ

KannadaprabhaNewsNetwork |  
Published : Jul 30, 2025, 12:45 AM IST
ಮಾಗಡಿ ಪಟ್ಟಣದ 18 ನೇ ವಾರ್ಡ್ ನಲ್ಲಿ  ನೂತನ  ನ್ಯಾಯಬೆಲೆ ಅಂಗಡಿ ಉದ್ಘಾಟನೆ ವೇಳೆ ಶಾಸಕ ಎಚ್.ಸಿ.ಬಾಲಕೃಷ್ಣ ಪಡಿತರದಾರರಿಗೆ ಅಕ್ಕಿ ವಿತರಿಸಿದರು. | Kannada Prabha

ಸಾರಾಂಶ

ಮಾಗಡಿ: ಪಟ್ಟಣದ 18ನೇ ವಾರ್ಡ್ ಕಲ್ಯಾಗೇಟ್ ಮತ್ತು ಅಕ್ಕಪಕ್ಕದ ವಾರ್ಡ್ ಗಳಿಗೆ ಅನುಕೂಲವಾಗಲೆಂದು ಈ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲಾಗಿದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ ತಿಳಿಸಿದರು.

ಮಾಗಡಿ: ಪಟ್ಟಣದ 18ನೇ ವಾರ್ಡ್ ಕಲ್ಯಾಗೇಟ್ ಮತ್ತು ಅಕ್ಕಪಕ್ಕದ ವಾರ್ಡ್ ಗಳಿಗೆ ಅನುಕೂಲವಾಗಲೆಂದು ಈ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲಾಗಿದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಟಿಎಪಿಸಿಎಂಎಸ್ ವತಿಯಿಂದ ಉಪ ನ್ಯಾಯಬೆಲೆ ಅಂಗಡಿ ಉದ್ಘಾಟಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸುವ ಸಮಯದಲ್ಲಿ ಪಟ್ಟಣದ ಟಿಎಪಿಸಿಎಂಎಸ್ ಬಳಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಒಂದೇ ಮಳಿಗೆಯಲ್ಲಿ ಪಡಿತರ ಕೊಂಡುಕೊಳ್ಳುವುದನ್ನು ನೋಡಿ ಜನಸಾಮಾನ್ಯರು ದಿನಗಟ್ಟಲೆ ಪಡಿತರ ಪಡೆಯಲು ಕಾಯುವುದು ಸರಿಯಲ್ಲ ಎಂದು ಜೊತೆಗೆ ಸಾರ್ವಜನಿಕರು ಸಹ ಮನವಿ ಮಾಡಿದ್ದರಿಂದ ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್‌ಗೆ ಹೇಳಿ ಕಲ್ಯಾಗೇಟ್ ಮತ್ತು ಅಕ್ಕ ಪಕ್ಕದ ವಾರ್ಡ್ 800 ಪಡಿತರ ಚೀಟಿದಾರರಿಗೆ ಇಲ್ಲೆ ಪಡಿತರ ಹಂಚುವ ಮೂಲಕ ಪುರಜನತೆಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಪಟ್ಟಣದ ಟಿಎಪಿಸಿಎಂಎಸ್ ಬಳಿ ಪಟ್ಟಣದ ಸುಮಾರು 2000 ಪಡಿತರ ಚೀಟಿದಾರರು ಬೆಳಗ್ಗೆಯಿಂದ ಸಂಜೆವರೆಗೆ ಪಡಿತರ ಪಡೆಯಲು ಹರಸಾಹಸ ಪಡುತ್ತಿದ್ದರು. ಶಾಸಕರರ ಗಮನಕ್ಕೆ ಬಂದ ಮೇಲೆ ಶಾಸಕರು ನಮಗೆ ಸೂಚನೆ ನೀಡಿ ಕಲ್ಯಾಗೇಟ್ ಮತ್ತು ಅಕ್ಕಪಕ್ಕದ ವಾರ್ಡ್‌ಗಳ ಜನತೆಗೆ ಅನುಕೂವಾಗುವಂತೆ ಒಂದು ಮಳಿಗೆಯನ್ನು ಬಾಡಿಗೆಗೆ ಪಡೆದು ಆ ಭಾಗದ ಜನತೆಗೆ ಅಲ್ಲಿಯೇ ಪಡಿತರ ವಿತರಿಸುವಂತೆ ಸೂಚನೆ ನೀಡಿದ್ದರ ಮೇರೆಗೆ ಟಿಎಪಿಸಿಎಂಎಸ್ ವತಿಯಿಂದ ಮಳಿಗೆ ತೆರೆಯಲಾಗಿದೆ. ತಾಲೂಕಿನಲ್ಲಿ ಟಿಎಪಿಸಿಎಂಎಸ್ ವತಿಯಿಂದ ತಾಲೂಕಿನ ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಈವರೆಗೆ ಸುಮಾರು 200 ಟನ್ ಗೊಬ್ಬರ ವಿತರಣೆ ಮಾಡಲಾಗಿದೆ. ರೈತರಿಗೆ ಅವಶ್ಯಕತೆಗೆ ತಕ್ಕಂತೆ ರಿಯಾಯಿತಿ ದರದಲ್ಲಿ ರಸಗೊಬ್ಬರ ವಿತರಣೆ ಮಾಡಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಮುತ್ತಸಾಗರ ಸೋಮಣ್ಣ, ಎಂ.ಆರ್.ಮಂಜುನಾಥ್, ನಂಜುಂಡಯ್ಯ, ರಮೇಶ್, ಗಂಗಣ್ಣ, ಮಹದೇವ್, ದೊಡ್ಡಸೋಮನಹಳ್ಳಿ ನಂಜುಂಡಯ್ಯ, ವಿಜಯ್ ಕುಮಾರ್ ರವೀಶ್, ಕಲ್ಲೂರು ರಂಗನಾಥ್, ಪುರಸಭಾ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ, ಉಪಾಧ್ಯಕ್ಷ ರಿಯಾಝ್, ಸದಸ್ಯ ಎಂ.ಎನ್.ಮಂಜುನಾಥ್ ಇತರ ಮುಖಂಡರಿದ್ದರು.

(ಫೋಟೊ ಕ್ಯಾಪ್ಷನ್‌)

ಮಾಗಡಿ ಪಟ್ಟಣದ 18ನೇ ವಾರ್ಡನಲ್ಲಿ ನೂತನ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿದ ಶಾಸಕ ಎಚ್.ಸಿ.ಬಾಲಕೃಷ್ಣ ಪಡಿತರದಾರರಿಗೆ ಅಕ್ಕಿ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು
ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುತ್ತಿರುವ ಪ್ರಶಂಸಾರ್ಹ: ಎಂ.ಎನ್.ಪಾಟೀಲ