ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಗ್ರಾಮದೇವತೆ, ಜಲದುರ್ಗಮ್ಮದೇವಿ, ಮಾರಮ್ಮ, ಪಳೇಕಮ್ಮ, ಮಣ್ಣೆಮ್ಮದೇವಿ, ಕೆಂಪಮ್ಮ ದೇವಿ ಸೇರಿದಂತೆ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವಗಳು ಕಳೆಗಟ್ಟಿವೆ.
ಕಳೆದ ತಿಂಗಳು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದು ವಾರ ಮುಂದೂಡಿದ್ದ ಗ್ರಾಮಗಳಲ್ಲಿನ ಜಾತ್ರಾ ಮಹೋತ್ಸವಗಳನ್ನು ಚುನಾವಣೆ ಮುಗಿಯುತ್ತಿದ್ದಂತೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಸೊಡಗಿನ ಹಬ್ಬದ ವಾತಾವರಣ ಎಲ್ಲಾ ಗ್ರಾಮಗಳಲ್ಲಿಯೂ ಕಂಡು ಬರುತ್ತಿದೆ.ಎಲ್ಲೆಲ್ಲಿ ಜಾತ್ರಾ ಮಹೋತ್ಸವ: ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ, ಮದ್ದೇನಹಳ್ಳಿ, ಕೃಷ್ಣರಾಜಪುರ, ತ್ಯಾಮಗೊಂಡ್ಲು, ತಿಪ್ಪಶೆಟ್ಟಿಹಳ್ಳಿ, ಸುಬ್ರಹ್ಮಣ್ಯನಗರ, ಧರ್ಮೇಗೌಡನಪಾಳ್ಯ, ಮಣ್ಣೆ, ಗೋಲ್ಲರಹಟ್ಟಿ, ಸೋಮಸಾಗರ, ಅಪ್ಪಕಾರನಹಳ್ಳಿ, ರಾಂಪುರ, ಕನುವಳ್ಳಿ, ಮಾವಿನಕುಂಟೆ ಗ್ರಾಮಗಳಲ್ಲಿ ಜಾತ್ರೆಯ ಮೆರಗು ಜೋರಾಗಿದೆ.
ನಾಟಕ ಪ್ರದರ್ಶನ:ಓಬಳಾಪುರ ಗ್ರಾಮದಲ್ಲಿ ಗಂಗಸಂದ್ರಮ್ಮ ದೇವಿಯ ಜಾತ್ರೆಯ ಅಂಗವಾಗಿ ಪೌರಾಣಿಕ ನಾಟಕ ಕುರುಕ್ಷೇತ್ರ ಪ್ರದರ್ಶನ ನಡೆಯಿತು.
ಮೇ 4ರಂದು ಮಣ್ಣೆ ಗ್ರಾಮದಲ್ಲಿ ಸೋಮೇಶ್ವರ ಕೃಪಪೋಷಿತ ನಾಟಕ ಮಂಡಳಿ ವತಿಯಿಂದ ಶನಿವಾರ ರಾತ್ರಿ 8 ಗಂಟೆಗೆ ಶ್ರೀ ಕೃಷ್ಣ ಸಂಧಾನ ನಾಟಕವನ್ನು ಗ್ರಾಮದ ಕಲಾವಿದರು ಪ್ರದರ್ಶಿಸಲಿದ್ದಾರೆ.ರಥೋತ್ಸವ: ಮೇ 4ರಂದು ಶನಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಗಂಗರ ರಾಜಧಾನಿ ಮಣ್ಣೆ ಗ್ರಾಮದಲ್ಲಿ ಶ್ರೀ ಮಣ್ಣೆಮ್ಮ ದೇವಿ ಮಹಾರಥೋತ್ಸವ ಜರುಗಲಿದೆ.
ಪೊಲೀಸ್ ಸರ್ಪಗಾವಲು:ಚುನಾವಣೆ ಕೆಲಸ ಮುಗಿದ ಕೂಡಲೇ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತಿರವ ಹಿನ್ನೆಲೆಯಲ್ಲಿ ಪಿಐ ರಂಜನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿನಿತ್ಯ ಬೀಟ್ ವ್ಯವಸ್ಥೆಯನ್ನು ಮಾಡುವಂತೆ ನೇಮಿಸಿ, ಶಾಂತಿಯುತ ಜಾತ್ರಾ ಮಹೋತ್ಸವಕ್ಕೆ ಸಿದ್ಧಗೊಳಿಸಿದ್ದಾರೆ.
ಅಗ್ನಿಕೊಂಡೋತ್ಸವ:ಓಬಳಾಪುರ ಗ್ರಾಮದ ಶ್ರೀ ಗಂಗಸಂದ್ರಮ್ಮ ದೇವಾಲಯ ಆವರಣದಲ್ಲಿ ಸೋಮವಾರ ರಾತ್ರಿ ನಡೆದ ಅಗ್ನಿಕೊಂಡೋತ್ಸವದಲ್ಲಿ ಭಾರಿ ಅನಾಹುತದಿಂದ ಭಕ್ತಾದಿಗಳು ಪಾರಾಗಿದ್ದಾರೆ, ಕೊಂಡೋತ್ಸವದಲ್ಲಿ ಭಾಗಿಯಾದ 60ಕ್ಕು ಹೆಚ್ಚು ಭಕ್ತರ ಪಾದಗಳು ಸುಟ್ಟು ಬೊಬ್ಬೆ ಬಂದಿದ್ದು, ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಣ್ಣೆ ಗ್ರಾಮದಲ್ಲಿಯೂ ಶುಕ್ರವಾರ ಮುಂಜಾನೆ ಅಗ್ನಿಕೊಂಡೋತ್ಸವ ಹಮ್ಮಿಕೊಂಡಿದ್ದಾರೆ.(ಈ ಫೋಟೋ ಸುದ್ದಿಗೆ ಬಳಸಿ)
ಪೋಟೋ 4 : ಓಬಳಾಪುರ ಗ್ರಾಮದಲ್ಲಿ ಗಂಗಸಂದ್ರಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಗ್ನಿಕೊಂಡೋತ್ಸವ.(ಈ ಫೋಟೋವನ್ನು ಪ್ಯಾನಲ್‌ನಲ್ಲಿ ಬಳಸಿ)
ಪೋಟೋ 3 :ತ್ಯಾಮಗೊಂಡ್ಲು ಹೋಬಳಿಯ ತಿಪ್ಪಶೆಟ್ಟಿಹಳ್ಳಿ, ಸುಬ್ರಮಣ್ಯನಗರ ಹಾಗೂ ಧರ್ಮೇಗೌಡನ ಪಾಳ್ಯದ ಅಗ್ನಿವಂಶ ಕ್ಷತ್ರಿಯರು ಶ್ರೀ ಜಲದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.