ಜನರಲ್ಲಿ ಭಕ್ತಿ ಹೆಚ್ಚಿಸಲು ಜಾತ್ರೆ, ಉತ್ಸವಗಳು ಸಹಕಾರಿ

KannadaprabhaNewsNetwork |  
Published : Dec 28, 2023, 01:46 AM IST
೨೭ಬಿಎಸ್ವಿ೦೫- ಬಸವನಬಾಗೇವಾಡಿಯ ಗೌರಿಶಂಕರ ದೇವರ ಜಾತ್ರಾಮಹೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಸಚಿವ ಶಿವಾನಂದ ಪಾಟೀಲ ಜ್ಯೋತಿ ಬೆಳಗಿಸಿದರು. | Kannada Prabha

ಸಾರಾಂಶ

ಗೌರಿ-ಶಂಕರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಾಡಿನಲ್ಲಿ ನಡೆಯುವ ಜಾತ್ರೆ-ಉತ್ಸವಗಳು ಜನರಲ್ಲಿ ಭಕ್ತಿ ಹೆಚ್ಚಿಸಲು ಪೂರಕವಾಗಿವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು. ಜಗತ್ತು ವೈಜ್ಞಾನಿಕವಾಗಿ ಮುಂದುವರಿದರೂ ಆಧ್ಯಾತ್ಮಿಕ ಶಕ್ತಿಯಿಂದ ನಮ್ಮ ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬಹುದು ಎಂದರು.

ಯಾವುದೇ ಕಾಯಕ ಮಾಡಿದರೂ ಭಗವಂತನ ಮೇಲೆ ಭಕ್ತಿ ಬೆಳೆಸಿಕೊಂಡರೆ ತಾವು ಮಾಡುವ ಕಾಯಕ ಉತ್ತಮವಾಗಿ ಸಾಗುತ್ತದೆ. ಗೌರಿ-ಶಂಕರ ಜಾತ್ರೆಯು ವರ್ಷದಿಂದ ವರ್ಷಕ್ಕೆ ಸಡಗರ, ಸಂಭ್ರಮದಿಂದ ಆಚರಣೆಯಾಗುತ್ತಿರುವುದು ಸಂತಸದಾಯಕ ಸಂಗತಿ. ಜಾತ್ರೆಗಳಿಂದ ಜನರಲ್ಲಿ ದೈವ ಭಕ್ತಿ ಬರುವ ಜೊತೆಗೆ ನಾವೆಲ್ಲರೂ ಒಂದು ಎಂಬ ಭಾವ ಬರುತ್ತದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠ ಸಿದ್ದಲಿಂಗ ಸ್ವಾಮೀಜಿ, ಪ್ರವಚನಕಾರ ಹೊಳಲು ವಿರಕ್ತಮಠದ ಚನ್ನಬಸವ ದೇವರು, ವಿಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಶ್ರೀಕಾಂತ ಪಟ್ಟಣಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ, ಪುರಸಭೆ ಸದಸ್ಯ ರವಿ ಪಟ್ಟಣಶೆಟ್ಟಿ, ಮುಖಂಡರಾದ ಅಪ್ಪುಗೌಡ ಪಾಟೀಲ, ಬಸವರಾಜ ಕೋಟಿ, ಡಾ.ಕರುಣಕರ ಚೌಧರಿ, ಪ್ರಕಾಶ ಪಟ್ಟಣಶೆಟ್ಟಿ, ಮಲ್ಲು ಬೋರಗಿ, ಶಿವರಾಜಸಿಂಗ ರಜಪೂತ,ರುದ್ರಯ್ಯ ಮಠಪತಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!