ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಗ್ರಾಮದೇವಿಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ನಡೆದ ಧಾರ್ಮಿಕ ಸಭೆ ಮತ್ತು ಸಾರ್ವಜನಿಕ ಸಭೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯ ವ್ಯವಸ್ಥೆಯೇ ಬೇರೆಯಾಗಿದ್ದು, ಸಮಾಜದಲ್ಲಿ ನಡೆಯುವ ಉತ್ಸವಗಳು ಮತ್ತು ಸಂಭ್ರಮಗಳೇ ಬೇರೆಯಾಗಿವೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ ಕಲಿಸುವ ಜೊತೆಗೆ ಸನಾತನ ಧರ್ಮವನ್ನು ಉಳಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂದರು.ಯಾವುದೇ ಜಾತಿ ಧರ್ಮವಿರಲಿ ಅವರವರ ಪದ್ದತಿಯಂತಿ ದೇವರನ್ನು ಸ್ಮರಿಸುವ ಜೊತೆಗೆ ಧರ್ಮ ಪರಿಪಾಲನೆ ಮಾಡಬೇಕೆಂದರು. ತಾಯಂದಿರು ತಮ್ಮ ಮಕ್ಕಳಿಗೆ ನಮ್ಮ ಆಚರಣೆಗಳ ಬಗ್ಗೆ ತಿಳಿಸುವ ಮೂಲಕ ಜಾತ್ರೆಯ ಮಹೋತ್ಸವದ ಅರಿವು ಮೂಡಿಸಬೇಕೆಂದರು.
ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಸ್ವರೂಪದ ದೇವಿಗೆ ವಿಶೇಷ ಸ್ಥಾನಮಾನವಿದ್ದು, ಗುಡ್ಡದ ಯಲ್ಲಮ್ಮನ ಪುಣ್ಯ ಕ್ಷೇತ್ರ ಸವದತ್ತಿಯಲ್ಲಿ ಅನೇಕ ಪುಣ್ಯದ ಕಾರ್ಯಗಳು ನಡೆದು ಬಂದಿದ್ದು, ಅದರಲ್ಲಿ ಗ್ರಾಮದೇವಿ ಜಾತ್ರೆ ಕ್ಷೇತ್ರಕ್ಕೆ ಇನ್ನಷ್ಟು ಇಂಬು ನೀಡಿದೆ. ಸಂಸ್ಕಾರವಿಲ್ಲದ ಸಮಾಜದಿಂದ ರಾಷ್ಟ್ರಕ್ಕೆ ಒಳಿತಾಗುವುದಿಲ್ಲ. ಭಕ್ತಿಪರವಾದ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.ಧಾರವಾಡ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಾತನಾಡಿ, ಮಾನವ ಜನ್ಮವು ಸಿಕ್ಕಿದ್ದು ನಮ್ಮ ಪುಣ್ಯದ ಫಲ. ಈ ಪಾವನ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತ ನಾವು ಸಾಗಬೇಕಿದೆ. ಜಾತ್ರೆಗಳು ನೆಪಮಾತ್ರವಾದರೂ ನಮ್ಮ ಧರ್ಮ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋದಲ್ಲಿ ಮಾತ್ರ ನಮ್ಮ ಮಾನವ ಜನ್ಮ ಸಾರ್ಥಕವಾಗಲಿದೆ ಎಂದರು.
ಪ್ರೀತಿ ಕೋರೆ(ದೊಡವಾಡ), ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸಗೌಡ ಪಾಟೀಲ, ಸುಭಾಸಸಿಂಗ್ ರಜಪುತ, ಡಾ.ಎನ್.ಸಿ.ಬೆಂಡಿಗೇರಿ, ಪ್ರಭು ಪ್ರಭುನವರ, ಪ್ರವೀಣ ಪಟ್ಟಣಶೆಟ್ಟಿ, ಮದನಲಾಲ ಚೋಪ್ರಾ ಮತ್ತು ಇತರರು ಉಪಸ್ಥಿತರಿದ್ದರು. ಡಾ.ವೈ.ಎಂ.ಯಾಕೊಳ್ಳಿ ಸ್ವಾಗತಿಸಿದರು. ಶಿವಾನಂದ ತಾರೀಹಾಳ, ವಿಜಯ ಹಿರೇಮಠ ನಿರೂಪಿಸಿದರು. ಹುಸೇನ ನದಾಫ ವಂದಿಸಿದರು.
-----