ಸಮಾಜದಲ್ಲಿ ಸಮಾನತೆ ಮೂಡಿಸಲು ಜಾತ್ರೆಗಳು ಪ್ರೇರೇಪಿಸುತ್ತವೆ-ಹುಕ್ಕೇರಿಮಠದ ಶ್ರೀಗಳು

KannadaprabhaNewsNetwork |  
Published : Nov 18, 2025, 01:15 AM IST
ಮ | Kannada Prabha

ಸಾರಾಂಶ

ಸಮಾಜದ ವಿವಿಧ ಸ್ಥರಗಳಲ್ಲಿ ಸಮಾನತೆ ತರಲು ಹಾಗೂ ಅವಶ್ಯಕ ಸಾಮಾಜಿಕ ಬದಲಾವಣೆಗೆ ಧನಾತ್ಮಕವಾಗಿ ಕೆಲಸ ಮಾಡಲು ಜಾತ್ರಾ ಮಹೋತ್ಸವಗಳು ಪ್ರೇರೇಪಿಸುತ್ತವೆ. ಹೀಗಾಗಿ ಪ್ರತಿಯೊಂದು ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಸಮಾಜದ ವಿವಿಧ ಸ್ಥರಗಳಲ್ಲಿ ಸಮಾನತೆ ತರಲು ಹಾಗೂ ಅವಶ್ಯಕ ಸಾಮಾಜಿಕ ಬದಲಾವಣೆಗೆ ಧನಾತ್ಮಕವಾಗಿ ಕೆಲಸ ಮಾಡಲು ಜಾತ್ರಾ ಮಹೋತ್ಸವಗಳು ಪ್ರೇರೇಪಿಸುತ್ತವೆ. ಹೀಗಾಗಿ ಪ್ರತಿಯೊಂದು ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ನೆಹರು ನಗರದಲ್ಲಿ ನಡೆಯಲಿರುವ ದಾನಮ್ಮದೇವಿ ದೇವಸ್ಥಾನದ 14ನೇ ವರ್ಷದ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಧಾರ್ಮಿಕ ನಂಬಿಕೆಗಳು ಅಸ್ತಿತ್ವದಲ್ಲಿ ಇರದಿದ್ದರೇ ಸಾಮಾಜಿಕ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಇರುತ್ತಿರಲಿಲ್ಲ. ಧರ್ಮವು ಯಾವುದಾದರೊಂದು ರೂಪದಲ್ಲಿ ಮನುಷ್ಯನಲ್ಲಿ ಅಡಗಿದ್ದು, ಜಾತ್ರೆಗಳು ಇಂತಹ ಚಟುವಟಿಕೆಗಳಲ್ಲಿ ಒಂದಾಗಿದೆ. ನಾವೆಲ್ಲರೂ ಒತ್ತಡದ ಬದುಕನ್ನು ಸಾಗಿಸುತ್ತಿದ್ದು ಲೌಕಿಕ ಬದುಕಿನಲ್ಲಿ ಸುಖವಾಗಿಲ್ಲ, ಹೀಗಾಗಿ ಜಾತ್ರೆಗಳು ಭೌತಿಕ ಮತ್ತು ಸಾಮಾಜಿಕ ಪರಿಸರದ ಶಕ್ತಿಗಳೊಂದಿಗೆ ಮನುಷ್ಯನ ಸಂಬಂಧಗಳನ್ನು ಬಹಳಷ್ಟು ಹತ್ತಿರಕ್ಕೆ ತರಲು ಸಹಕರಿಸಲಿವೆ ಎಂದರು. ಬದುಕಿನ ಮೌಲ್ಯ, ನಂಬಿಕೆ, ಆಚರಣೆ, ಸಂಪ್ರದಾಯ ಇವುಗಳನ್ನು ಒಗ್ಗೂಡಿಸುವ ಶಕ್ತಿ ಧರ್ಮಕ್ಕಿದೆ ಎಂದರು.

ಅತಿಥಿಗಳಾಗಿದ್ದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಬದುಕಿನ ಮೌಲ್ಯ, ನಂಬಿಕೆ, ಆಚರಣೆ, ಸಂಪ್ರದಾಯ ಇವುಗಳನ್ನು ಒಗ್ಗೂಡಿಸುವ ಶಕ್ತಿ ಧರ್ಮಕ್ಕಿದೆ, ಬಹು ಹಿಂದಿನಿಂದಲೂ ಜಾತ್ರಾ ಮಹೋತ್ಸವಗಳು ಎಲ್ಲಾ ಧರ್ಮದ ಜನರನ್ನು ಒಗ್ಗೂಡಿಸುವಲ್ಲಿ ಪ್ರಮಖ ಪಾತ್ರವನ್ನು ವಹಿಸಿವೆ, ಇಂತಹ ಆಚರಣೆಗಳಿಂದ ಸಮಾಜದ ಮೇಲೆ ಪಾರದರ್ಶಕವಾಗಿ ಹೆಚ್ಚು ಪ್ರಭಾವ ಬೀರಲಿದೆ ಎಂದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿಯ ಡಾ.ಎಸ್.ಎನ್. ನಿಡಗುಂದಿ, ಮಹೇಶ್ವರಿ ಪಸಾರದ, ರಾಜು ಮೋರಿಗೇರಿ, ಚಂದ್ರಶೇಖರ ಅಂಗಡಿ, ಅರುಣ ಕುಮಾರಶಾಸ್ತ್ರಿ, ಕುಮಾರೇಶ್ವರ ವೈದಿಕ ಪಾಠಶಾಲೆ ರಾಚಯ್ಯನವರು ಓದಿಸೋಮಠ ಚನ್ನಬಸಯ್ಯ ಹಾಗೂ ಇನ್ನಿತರರಿದ್ದರು.

ಪೌರಕಾರ್ಮಿಕರಿಗೆ ಸನ್ಮಾನ: ದಾನಮ್ಮದೇವಿಯ 14ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಪುರಸಭೆಯ ಎಲ್ಲಾ ಪೌರ ಕಾರ್ಮಿಕರಿಗೆ ವೇದಿಕೆಯಲ್ಲಿಯೇ ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಸನ್ಮಾನಿಸಿ ಗೌರವಿಸಿದರು. ಮುಖ್ಯಾ ಧಿಕಾರಿ ವಿನಯಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ರೈತ ಸಂಘದಿಂದ ದಾವಣಗೆರೆಯಲ್ಲಿ 19ಕ್ಕೆ ಬೃಹತ್‌ ಪ್ರತಿಭಟನೆ
ಖಾಸಗಿ ಮೈಕ್ರೋ ಫೈನಾನ್ಸಗಳ ಸಾಲ ಮನ್ನಾಕ್ಕೆ ಆಗ್ರಹಿಸಿ ಮನವಿ