ಧಾರವಾಡ: ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಡಲಾಗಿದೆ ಎಂಬ ಇಮೇಲ್ ಕರೆ ಬಂದ ಹಿನ್ನೆಲೆಯಲ್ಲಿ ಗುರುವಾರ ಕೆಲ ಕಾಲ ನ್ಯಾಯಾಲಯ ಕಲಾಪ ಬಂದ್ ಮಾಡಿ ತಪಾಸಣೆ ನಡೆಸಿದ ಘಟನೆ ನಡೆಯಿತು.
ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಆಗಮಿಸಿ ನ್ಯಾಯಾಲಯದ ಆವರಣದಲ್ಲಿ ತಪಾಸಣೆ ಮಾಡಲಾಯಿತು. ತದನಂತರ ಇದೊಂದು ಹುಸಿ ಕರೆ ಎಂದು ಗೊತ್ತಾದ ನಂತರ ಮಧ್ಯಾಹ್ನ 3ರ ನಂತರ ಎಂದಿನಂತೆ ಕಲಾಪಗಳು ಶುರುವಾದವು. ಜಿಲ್ಲಾ ನ್ಯಾಯಾಲಯಕ್ಕೆ ಇದು ಮೊದಲ ಬಾರಿಯ ಹುಸಿ ಕರೆ ಇಲ್ಲ. ಈಗಾಗಲೇ ನಾಲ್ಕೈದು ತಿಂಗಳ ಹಿಂದೆ ಇದೇ ರೀತಿಯ ಹುಸಿ ಕರೆ ಬಂದಿದ್ದನ್ನು ಸ್ಮರಿಸಬಹುದು. ಇಮೇಲ್ ಮೂಲಕ ಬಂದಿರುವ ಈ ಹುಸಿ ಕರೆಯ ಜಾಡು ಹಿಡಿದು ಉಪ ನಗರ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ನಿರ್ಮಿತಿ ಕೇಂದ್ರದ ಅಂಭಿಯಂತರ ಮೇಲೆ ಲೋಕಾ ದಾಳಿ
ಧಾರವಾಡ: ನಿರ್ಮಿತಿ ಕೇಂದ್ರದಲ್ಲಿ ಅಭಿಯಂತರ ಆಗಿರುವ ಸುರೇಂದ್ರಕುಮಾರ ಎಂಬುವರ ಮನೆ ಹಾಗೂ ಕಚೇರಿ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ಸುರೇಂದ್ರ ಕುಮಾರ ಅವರ ನಿಸರ್ಗ ಲೇಔಟ್ ಬಳಿ ಬಾಡಿಗೆ ಮನೆ ಹಾಗೂ ಇಸ್ಕಾನ್ ದೇವಸ್ಥಾನದ ಬಳಿಯ ಕಚೇರಿಗೆ ಏಕಕಾಲಕ್ಕೆ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ಲೋಕಾಯುಕ್ತ ಪೊಲೀಸರು ಸುರೇಂದ್ರ ಕುಮಾರ ಅವರು ನಡೆಸುತ್ತಿರುವ ಸರ್ಕಾರದ ಕಾಮಗಾರಿಗಳು, ಅದರ ಮೊತ್ತ ಸೇರಿದಂತೆ ಅನೇಕ ಮಾಹಿತಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಇದೆ.