(ಲೀಡ್‌ ಬಾಕ್ಸ್‌) ಆಕಾಶ್‌ ಶಾಲೆಗೆ ಹುಸಿ ಬಾಂಬ್‌ ಬೆದರಿಕೆ

KannadaprabhaNewsNetwork |  
Published : Dec 02, 2023, 12:45 AM IST
ದೆವನಹಳ್ಳಿಯಲ್ಲಿರುವ ಆಕಾಶ್‌ ಇಂಟರ್‌ ನ್ಯಾಸನಲ್‌ ಶಾಲೆ | Kannada Prabha

ಸಾರಾಂಶ

ದೇವನಹಳ್ಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ಗೆ ಶುಕ್ರವಾರ ಬೆಳಗ್ಗೆ ಮೇಲ್‌ ಮೂಲಕ ಶಾಲೆಯಲ್ಲಿ ಬಾಂಬ್‌ ಇಡಲಾಗಿದೆ ಎಂಬ ಸಂದೇಶ ಅಲಾಲ್‌ ಮುಲ್ಲ ಎಂಬ ಹೆಸರಿನಲ್ಲಿ ಬಂದಿದೆ ಎಂದು ಶಾಲಾ ಸಂಸ್ಥಾಪಕ ಕೆ. ಮುನಿರಾಜು ತಿಳಿಸಿದ್ದಾರೆ.

ದೇವನಹಳ್ಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ಗೆ ಶುಕ್ರವಾರ ಬೆಳಗ್ಗೆ ಮೇಲ್‌ ಮೂಲಕ ಶಾಲೆಯಲ್ಲಿ ಬಾಂಬ್‌ ಇಡಲಾಗಿದೆ ಎಂಬ ಸಂದೇಶ ಅಲಾಲ್‌ ಮುಲ್ಲ ಎಂಬ ಹೆಸರಿನಲ್ಲಿ ಬಂದಿದೆ ಎಂದು ಶಾಲಾ ಸಂಸ್ಥಾಪಕ ಕೆ. ಮುನಿರಾಜು ತಿಳಿಸಿದ್ದಾರೆ. ಸುದ್ದಿ ತಿಳಿದಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಂಗಳೂರಿನಿಂದ ಬಾಂಬ್‌ ನಿಷ್ಕ್ರಿಯ ದಳ ಆಗಮಿಸಿ ಶಾಲೆಯ ಪ್ರತಿ ಕೊಠಡಿಯ ತಪಾಸಣೆ ನಡೆಸಿ ಇದೊಂದು ಸುಳ್ಳು ಸುದ್ದಿ ಎಂದು ಖಚಿತಪಡಿಸಿದರು. ಶಾಲೆಯಲ್ಲಿ ಸುಮಾರು 600 ಮಕ್ಕಳಿದ್ದು ಕೆಲ ಪೋಷಕರು ವಿಷಯ ತಿಳಿದು ಶಾಲೆಗೆ ಆಗಮಿಸಿ ಮಕ್ಕಳನ್ನು ಮನೆಗೆ ಕರೆದೊಯ್ದರು. ಪೊಲೀಸರು ಹುಸಿ ಬಾಂಬ್‌ ಸಂದೇಶದ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಅದೇ ರೀತಿ ಬೆಟ್ಟಹಲಸೂರಿನ ಸ್ಟೋನ್‌ ಹಿಲ್‌ ಶಾಲೆಗೂ ಹುಸಿ ಬಾಂಬ್‌ ಬೆದರಿಕೆ ಸಂದೇಶ ಇ ಮೇಲ್‌ ಬಂದಿರುವುದಾಗಿ ಹೇಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!