ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಜನ್ಮದಿನಾಂಕವನ್ನು ಆಧಾರ್ ಲಿಂಕ್‌ಗೆ ಸೇರಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಅನುಶ್ರೀ ಎಂಬಾಕೆ ಸಿಕ್ಕಿಬಿದ್ದಿದ್ದು, ಅಕೆ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬುವರ ಬಳಿ ಹಣ ಕೊಟ್ಟರೇ ಸಾಕು ನಕಲಿ ಜನ್ಮದಿನಾಂಕವನ್ನು ಸೃಷ್ಠಿ ಮಾಡಲು ಖಾಸಗೀ ಇಂಟರ್ ಪಾರ್ಲರ್‌ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾರೆ. ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್‌ಗೆ ಲಿಂಕ್ ಮಾಡಿಕೊಡುವುದನ್ನು ಮೈಗೂಡಿಸಿಕೊಂಡು ಸಂಬಳದ ಜೊತೆ ಈ ರೀತಿಯ ದೇಶದ್ರೋಹಿ ಕೆಲಸ ಮಾಡಿ ಒಬ್ಬರಿಂದ ೫ ಸಾವಿರದಿಂದ ೧೦ ಸಾವಿರದವರೆಗೂ ಹಣ ಪಡೆಯುತ್ತಿದ್ದಳು.
ಕನ್ನಡಪ್ರಭ ವಾರ್ತೆ ಹಾಸನ
ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಜನ್ಮದಿನಾಂಕವನ್ನು ಆಧಾರ್ ಲಿಂಕ್‌ಗೆ ಸೇರಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಅನುಶ್ರೀ ಎಂಬಾಕೆ ಸಿಕ್ಕಿಬಿದ್ದಿದ್ದು, ಅಕೆ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಈಗಾಗಲೇ ಬಾಂಗ್ಲದೇಶದಿಂದ ಸಾವಿರಾರು ಜನರು ಇಲ್ಲಿಗೆ ವಲಸೆ ಬರುತ್ತಿರುವ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ನೋಡುತ್ತಿದ್ದೇವೆ. ಇಂತಹವರಿಗೆ ನಮ್ಮವರೇ ಕೆಲವರು ಹಣದಾಸೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್ ಸೇವಾ ಕೇಂದ್ರದ ಆಪರೇಟರ್ ಆಗಿ ಕೆಲಸ ಮಾಡುವ ಮಹಿಳೆಯೊಬ್ಬರು ತನಿಖೆ ವೇಳೆ ಸಿಕ್ಕಿಬಿದ್ದಿದ್ದಾರೆ. ಕಳೆದ ಎರಡುವರೆ ವರ್ಷದಿಂದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬುವರ ಬಳಿ ಹಣ ಕೊಟ್ಟರೇ ಸಾಕು ನಕಲಿ ಜನ್ಮದಿನಾಂಕವನ್ನು ಸೃಷ್ಠಿ ಮಾಡಲು ಖಾಸಗೀ ಇಂಟರ್ ಪಾರ್ಲರ್‌ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾರೆ. ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್‌ಗೆ ಲಿಂಕ್ ಮಾಡಿಕೊಡುವುದನ್ನು ಮೈಗೂಡಿಸಿಕೊಂಡು ಸಂಬಳದ ಜೊತೆ ಈ ರೀತಿಯ ದೇಶದ್ರೋಹಿ ಕೆಲಸ ಮಾಡಿ ಒಬ್ಬರಿಂದ ೫ ಸಾವಿರದಿಂದ ೧೦ ಸಾವಿರದವರೆಗೂ ಹಣ ಪಡೆಯುತ್ತಿದ್ದಳು.
ಈ ಬಗ್ಗೆ ವಿಚಾರ ತಿಳಿದ ಇಲ್ಲಿ ಆಧಾರ್ ಲಿಂಕ್ ಅಧಿಕಾರಿ ಬೆಂಗಳೂರಿನ ಕಚೇರಿಗೆ ವಿಷಯ ಮುಟ್ಟಿಸಿದ್ದು, ಇದನ್ನು ಪರಿಶೀಲನೆ ಮಾಡಲು ಬಂದಿದ್ದ ಬೆಂಗಳೂರಿನ ವಲಯ ಅಧಿಕಾರಿ ವಿಜಯಕುಮಾರ್ ಆಧಾರ್ ಬಗ್ಗೆ ಆಳವಾಗಿ ಪರಿಶೀಲನೆ ಮಾಡಿದಾಗ ಅನುಶ್ರೀ ಐಡಿಯಿಂದ ಇಲ್ಲಿ ನಕಲಿ ಮಾಡುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಅನುಶ್ರೀ ಎಂಬುವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ವಿಚಾರಿಸಿದರು. ನಮ್ಮಲ್ಲೆ ಈತರ ಘಟನೆ ನಡೆದಿರುವುದು ಬೇಸರದ ವಿಚಾರ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಈಕೆ ಮೇಲೆ ದೂರು ದಾಖಲಿಸಿ ಎಫ್.ಐ.ಆರ್. ಮಾಡುವಂತೆ ಪೊಲೀಸ್ ಅಧಿಕಾರಿಯನ್ನು ಕರೆಸಿ ಅನುಶ್ರೀಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಈಕೆಯ ಕೆಲಸದ ಅವಧಿಯ ಎರಡೂವರೆ ವರ್ಷದ ಎಲ್ಲಾ ದಾಖಲೆಯನ್ನು ಪರಿಶೀಲಿಸುವಂತೆ ಡಿಸಿ ಸೂಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.