ನಕಲಿ ಗುಟ್ಕಾ ತಯಾರಿಕೆ ಘಟಕ: ಪೊಲೀಸರಿಂದ ತೀವ್ರ ತನಿಖೆ

KannadaprabhaNewsNetwork | Published : Oct 22, 2023 1:01 AM

ಸಾರಾಂಶ

ನಗರದ ಹೊರವಲಯದ ಅಜ್ಜಯ್ಯನಗುಡಿ ರಸ್ತೆಯ ಖಾಸಗಿ ಮಿಲ್‌ನಲ್ಲಿ ನಕಲಿ ಗುಟ್ಕಾ ತಯಾರಿಕ ಘಟಕ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮುಂಬೈನ ಜೆಎಂಜೆ ಗುಟ್ಕಾ ತಯಾರಿಕಾ ಮತ್ತು ಮಾರಾಟ ಘಟಕ ವ್ಯವಸ್ಥಾಪಕ ಅಜಯ್‌ಕುಮಾರ್ ಜೈನ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಳ್ಳಕೆರೆ ನಗರದ ಹೊರವಲಯದ ಅಜ್ಜಯ್ಯನಗುಡಿ ರಸ್ತೆಯ ಖಾಸಗಿ ಮಿಲ್‌ನಲ್ಲಿ ನಕಲಿ ಗುಟ್ಕಾ ತಯಾರಿಕ ಘಟಕ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮುಂಬೈನ ಜೆಎಂಜೆ ಗುಟ್ಕಾ ತಯಾರಿಕಾ ಮತ್ತು ಮಾರಾಟ ಘಟಕ ವ್ಯವಸ್ಥಾಪಕ ಅಜಯ್‌ಕುಮಾರ್ ಜೈನ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ಸ್ಪೆಕ್ಟರ್ ಆರ್.ಎಫ್.ದೇಸಾಯಿ ಮತ್ತು ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಕಲಿ ಗುಟ್ಕಾ ತಯಾರಿಕ ಘಟಕಕ್ಕೆ ಭೇಟಿ ನೀಡಿ ಅಲ್ಲಿ ದಾಸ್ತಾನು ಮಾಡಿರುವ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ. ಇದರ ಬೆನ್ನ ಹಿಂದೆಯೇ ಬಳ್ಳಾರಿಯ ಕಸ್ಟಂಸ್‌ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಕ್ರಮ ಗುಟ್ಕಾ ತಯಾರಿಕೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪ ಹೊತ್ತವರು ಈಗಾಗಲೇ ಸ್ಥಳದಿಂದ ನಾಪತ್ತೆಯಾಗಿದ್ದು, ಅವರನ್ನು ಹುಡುಕಿ ತಂದು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಬೇಕಿದೆ.

Share this article