ಟಿಎಸ್‌ಪಿ ಯೋಜನೆಯಲ್ಲಿ ₹46.306 ಕೋಟಿ ಅನುದಾನ ಹಂಚಿಕೆ ಸುಳ್ಳು: ಬಿ. ಶ್ರೀರಾಮುಲು

KannadaprabhaNewsNetwork |  
Published : Oct 27, 2026, 02:30 AM IST
26ುಲು1 | Kannada Prabha

ಸಾರಾಂಶ

ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ಟಿಎಸ್‌ಪಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಇಲಾಖೆಗಳಿಗೆ ₹46.306 ಕೋಟಿ ಅನುದಾನ ಹಂಚಿಕೆ ಮಾಡಿರುವ ಬಗ್ಗೆ ಮುಖ್ಯಮಂತ್ರಿ ತಕ್ಷಣ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಸವಾಲು ಹಾಕಿದರು.

ಗಂಗಾವತಿ: ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ಟಿಎಸ್‌ಪಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಇಲಾಖೆಗಳಿಗೆ ₹46.306 ಕೋಟಿ ಅನುದಾನ ಹಂಚಿಕೆ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಕ್ಷಣ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಸವಾಲು ಹಾಕಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಸರ್ಕಾರದಿಂದ ಪತ್ರಿಕೆಗಳಿಗೆ ಜಾಹೀರಾತು ನೀಡಿ, ಪರಿಶಿಷ್ಟ ಪಂಗಡ ಸಮುದಾಯ ಕಲ್ಯಾಣಕ್ಕಾಗಿ ಟಿಎಸ್‌ಪಿ ಯೋಜನೆಯಡಿ ಅಭಿವೃದ್ಧಿ ಇಲಾಖೆಗಳಿಗೆ ₹46.306 ಕೋಟಿ ಅನುದಾನ ಹಂಚಿಕೆ ಮಾಡಿದ್ದೇವೆ ಎಂದು ಹೇಳಿ ಜನರಿಗೆ ವಂಚಿಸಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗೆ ಪರಿಶಿಷ್ಟ ಪಂಗಡದವರ ಮೇಲೆ ಕಳಕಳಿ ಇಲ್ಲ. ₹187 ಕೋಟಿ ಪರಿಶಿಷ್ಟ ಪಂಗಡದ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವುದು ಬಿಟ್ಟು ಬೆಳಗಾವಿ ಕಬ್ಬು ಬೆಳಗಾರರ ಹತ್ತಿರ ಹೋಗಿದ್ದಾರೆ. ಅವರಿಗೆ ಪರಿಶಿಷ್ಟ ಪಂಗಡದ ಜನರು ಬೇಕಾಗಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಈಡೇರಿಸಲಿ, ನನ್ನದೇನೂ ಅಭ್ಯಂತರ ಇಲ್ಲ, ಇಷ್ಟು ದಿನ ಹೋರಾಟ ಮಾಡುತ್ತಿದ್ದರೂ ಕಬ್ಬು ಬೆಳೆಗಾರರ ಸಮಸ್ಯೆ ಏಕೆ ಆಲಿಸಲಿಲ್ಲ? ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ, ಕಾಂಗ್ರೆಸ್ ಕಸಿದುಕೊಂಡಿದೆ ಎಂದರು.

ಮುಖ್ಯಮಂತ್ರಿಗೆ ಸಚಿವರ, ಶಾಸಕರ ಬಲ ಇಲ್ಲ. ಕಾಂಗ್ರೆಸ್ಸಿನಲ್ಲಿ ಒಳಜಗಳ ಪ್ರಾರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ಆಪರೇಷನ್ ಮಾಡಿದವರು ಕಾಂಗ್ರೆಸ್ಸಿನವರೇ ಹೊರತು ಬೇರೆ ಯಾರೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಿನಕ್ಕೊಂದು ಆರೋಪ ಮಾಡಿ ನಿಂದಿಸುತ್ತಿದ್ದಾರೆ. ಕೂಡಲೆ ಖರ್ಗೆ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಎರಡು ದಿನಗಳ ಹಿಂದೆ ಆನೆಗೊಂದಿ ಪ್ರದೇಶಕ್ಕೆ ಯುನಿಸ್ಕೋ ತಂಡ ಆಗಮಿಸಿ ಪರಿಶೀಲನೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿ, ಕೂಡಲೆ ಯುನಿಸ್ಕೋ ಪ್ರತಿನಿಧಿಗಳು ಕೆಲವೊಂದು ಷರತ್ತುಗಳನ್ನು ಸಡಿಲಿಸಬೇಕು ಮತ್ತು ಅಲ್ಲಿರುವ ಗ್ರಾಮಸ್ಥರಿಗೆ ಮತ್ತು ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ತಿಪ್ಪೇರುದ್ರಸ್ವಾಮಿ, ಯಮನೂರ ಚೌಡ್ಕಿ, ವೀರೇಶ ಬಲಕುಂದಿ, ಚೆನ್ನಪ್ಪಮಳಗಿ, ಡಿ.ಕೆ. ಆಗೋಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿ-ಧರ್ಮ ಮೀರಿದ ಮಾನವೀಯತೆ ಬೆಳೆಸೋಣ: ಲಾಡ್ಲೆಮಷಾಕ್ ದೋಟಿಹಾಳ
ರಾಮಾಯಣ ಮೂಲಕ ಅಮೂಲ್ಯ ಸಂದೇಶ ನೀಡಿದ ವಾಲ್ಮೀಕಿ: ಪರಣ್ಣ ಮುನವಳ್ಳಿ