ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅಳವಡಿಸಿರುವ ಮೇನ್ ಲೈನ್ ಹಾಗೂ ರೈತರ ಬೋರ್‌ವೆಲ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲೆಂದು ಹಾಕಿರುವ ವಿದ್ಯುತ್ ಕಂಬಗಳು ಉರುಳಿ ಬಿದ್ದು ವರ್ಷ ಕಳೆದಿದ್ದರೂ ಕ್ರಮಕೈಗೊಳ್ಳದ ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ನೆಲಕ್ಕೆ ಬಾಗಿರುವ ವಿದ್ಯುತ್ ಕಂಬಗಳು ಕೈಗನ್ನಡಿಯಾಗಿದೆ.
ಕಳೆದ ವರ್ಷ ಸುರಿದ ಗಾಳಿ ಮಿಶ್ರಿತ ಮಳೆಗೆ ಸುಂಬಡ, ದುಮ್ಮದ್ರಿ, ನಾಗರಹಳ್ಳಿ, ಮಳ್ಳಿ, ಕುಳಗೇರಿ, ಮುಂತಾದ ಗ್ರಾಮಗಳಿಗೆ ಮೇನ್ ಲೈನ್ ಹಾಗೂ ರೈತರ ಬೋರ್‌ವೆಲ್‌ಗಳಿಗೆಂದು ಪರ್ಯಾಯವಾಗಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದವು. ಈ ಕುರಿತಂತೆ ಸ್ಥಳೀಯ ರೈತರು ಜೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕೇವಲ ಆ ಕಂಬಗಳಿಗೆ ಸರಬರಾಜಾಗುವ ವಿದ್ಯುತ್ ಪೂರೈಕೆ ನಿಲ್ಲಿಸಿ, ನಾಳೆ ಬಂದು ಕಂಬವನ್ನು ಮತ್ತೆ ನಿಲ್ಲಿಸುವುದಾಗಿ ತೆರಳಿದವರು ಮೂರು ತಿಂಗಳ ಕಳೆದರೂ ಮತ್ತೆ ಈ ಕಡೆ ಮುಖ ಮಾಡಿಲ್ಲ. ಈ ಕಾರಣದಿಂದಾಗಿ ಕಂಬಗಳು ಉರುಳಿ ಬಿದ್ದಿರುವ ಗ್ರಾಮೀಣ ಭಾಗದ ರೈತರು ಜಮೀನಿನಲ್ಲಿ ಉಳಿಮೆ ಮಾಡಲು ತೊಂದರೆಯಾಗುತ್ತಿದೆ ಎಂದು ನಿಂಗಣ್ಣ ಹಾದಿಮನಿ ಆರೋಪಿಸಿದರು.ಅಲ್ಲದೇ, ಜೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಕಳೆದ ಆರು ತಿಂಗಳದ ಹಿಂದೆ ಕಾಚಾಪುರ ಗ್ರಾಮದಲ್ಲಿ ಅಕಾಲಿಕ ವಿದ್ಯುತ್ ಪೂರೈಕೆಯಿಂದ ಮೃತಪಟ್ಟ ಘಟನೆಯಿಂದ ಗ್ರಾಮದ ಜನತೆ ಭೀತಿಯಲ್ಲಿ ಇದ್ದಾರೆ. ಉರುಳಿಬಿದ್ದ ಕಂಬದಲ್ಲಿ ಯಾವ ಕ್ಷ ಣದಲ್ಲಿ ವಿದ್ಯುತ್ ಪೂರೈಕೆ ಉಂಟಾಗಿ, ಯಾರ ಪ್ರಾಣ ಯಾವ ಸಮಯದಲ್ಲಿ ಕಳೆದುಕೊಳ್ಳುತ್ತಾ ಎಂಬ ಆತಂಕ ಮೂಡಿದೆ.
ಭಾಗ್ಯವಂತ, ಜೆಸ್ಕಾಂ, ಎಇಇ, ಯಡ್ರಾಮಿ