ಮಳೆಗೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರಾದ ಕುಟುಂಬ

KannadaprabhaNewsNetwork |  
Published : Aug 09, 2025, 12:00 AM IST
ಪೋಟೋ 5 : ಸೋಂಪುರ ಹೋಬಳಿಯ ಶಿವಗಂಗೆ ಗ್ರಾ.ಪಂ.ವ್ಯಾಪ್ತಿಯ ನಾರಾಯಣಪುರ ಗ್ರಾಮದ ಸಂಜೀವಯ್ಯ ಎಂಬುವವರ ಮನೆ ಕುಸಿದಿರುವುದು | Kannada Prabha

ಸಾರಾಂಶ

ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಸಂಜೀವಯ್ಯ (75) ಅವರು ಮನೆ ಕುಸಿದಿದೆ.

ದಾಬಸ್‍ಪೇಟೆ : ಕಳೆದ ಮೂರು ದಿನಗಳಿಂದ ಸುರಿಸುತ್ತಿರುವ ಮಳೆಗೆ ಮನೆಯೊಂದು ಕುಸಿದು ಬಿದ್ದಿದ್ದು ಮನೆಯಲ್ಲಿದ್ದ ನಾಲ್ಕು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಸಂಜೀವಯ್ಯ (75) ಅವರು ಮನೆ ಕುಸಿದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಶಿವಗಂಗೆ ಭಾಗದಲ್ಲಿ ಬಾರಿ ಮಳೆ ಸುರಿಯುತ್ತಿದ್ದು, ಸಂಜೀವಯ್ಯನವರು ತನ್ನ ಮಗ, ಮಗಳು, ಅಳಿಯನೊಂದಿಗೆ ಮನೆಯಲ್ಲಿ ಮಲಗಿದ್ದರು. ಬುಧವಾರ ರಾತ್ರಿ ಮಲಗಿದ್ದ ಸಮಯದಲ್ಲಿ ಮನೆಯೂ ಕುಸಿದಿದೆ. ಮನೆ ಕುಸಿಯುತ್ತಿದ್ದ ಶಬ್ದ ಕೇಳುತ್ತಿದ್ದಂತೆ ಮಲಗಿದ್ದವರು ಎದ್ದು ಮನೆಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಗನಿಗೆ ಗಾಯ: ಸಂಜೀವಯ್ಯನವರ ಮಗ ಹನುಮಂತರಾಜು (45) ವಿಕಲಚೇತನರಾಗಿದ್ದು, ಮನೆ ಕುಸಿದಿದ್ದರೂ ತಕ್ಷಣ ಮನೆಯಿಂದ ಹೊರಗೆ ಬಾರಲು ಸಾಧ್ಯವಾಗದ ಕಾರಣ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಧಿಕಾರಿಗಳ ಭೇಟಿ: ಮನೆ ಕುಸಿದು ಬಿದ್ದ ವಿಷಯ ತಿಳಿಯುತ್ತಿದ್ದಂತೆ ಗ್ರಾ.ಪಂ. ಸದಸ್ಯೆ ಉಮಾರೇವಣ್ಣ, ಪಿಡಿಒ ಗಿರೀಶ್ ಕುಮಾರ್, ಗ್ರಾಮಲೆಕ್ಕಿಗ ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರಿಹಾರಕ್ಕೆ ಮನವಿ: ಸಂಜೀವಯ್ಯ ಅವರಿಗೆ ವಯಸ್ಸಾಗಿದ್ದು, ಮಗ ವಿಕಲಚೇತನರಾಗಿದ್ದು ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದೇವೆ. ಸರ್ಕಾರವೂ ಹೆಚ್ಚಿನ ಪರಿಹಾರ ನೀಡಿ ಬಡಕುಟುಂಬಕ್ಕೆ ನೆರವಾಗಬೇಕು ಎಂದು ಗ್ರಾ.ಪಂ.ಸದಸ್ಯೆ ಉಮಾರೇವಣ್ಣ ಅಧಿಕಾರಿಗಳಿಗೆ ಮನವಿ ಮಾಡಿದರು.ಪೋಟೋ 5 : ಸೋಂಪುರ ಹೋಬಳಿಯ ಶಿವಗಂಗೆ ಗ್ರಾ.ಪಂ.ವ್ಯಾಪ್ತಿಯ ನಾರಾಯಣಪುರ ಗ್ರಾಮದ ಸಂಜೀವಯ್ಯ ಎಂಬುವವರ ಮನೆ ಕುಸಿದಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಪಥ ಬದಲಾಗಲು ನಮ್ಮಲ್ಲಿದೆ ಹೈಕಮಾಂಡ್‌: ಸಚಿವ ತಿಮ್ಮಾಪೂರ
ದುಡಿದ ಹಣದಲ್ಲಿ ಒಂದು ಭಾಗ ಸಮಾಜ ಸೇವೆಗೆ