ಜ್ಯೋತಿಷಿ ಕಮಲಾಕರ ಗುರೂಜಿ ಸೇರಿ ಒಟ್ಟು ಏಳು ಜನರ ಬಂಧನಕನ್ನಡಪ್ರಭ ವಾರ್ತೆ ಸಿದ್ದಾಪುರ
ವಸಂತ ಜಟ್ಯಾ ನಾಯ್ಕ (೪೩) ಮೃತರು.
ಇವರ ಸಹೋದರ ಮಹೇಶ ನಾಯ್ಕ ಹಾಗೂ ಜಗಳ ಬಿಡಿಸಲು ಬಂದ ಕುಮಾರ ನಾರಾಯಣ ನಾಯ್ಕ (೩೫) ಚಾಕುವಿನ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.ಈ ಕುರಿತು ಮೃತ ವಸಂತ ಪತ್ನಿ ಸಂಧ್ಯಾ ನಾಯ್ಕ ಸೋಮವಾರ ರಾತ್ರಿ ದೂರು ನೀಡಿದ್ದು ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಮೊದಲ ಆರೋಪಿ ಸುಚಿತ್ರಾ ನಾಯ್ಕ ಸೇರಿದಂತೆ ಜ್ಯೋತಿಷಿ ಕಮಲಾಕರ ಗುರೂಜಿ, ಸುಚಿತ್ರಾಳ ತಂದೆ ಏಕನಾಥ ನಾಯ್ಕ ಹೊಸೂರು ಹಾಗೂ ಶಿವಮೊಗ್ಗ ಮೂಲದ ನಾಲ್ವರು ಅಪರಿಚಿತ ಹಂತಕರನ್ನು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಸುಚಿತ್ರಾ ಜೊತೆಗಿದ್ದ ಮಗಳು ಸುಮಶ್ರೀ, ಸುಚಿತ್ರಾ ಹಾಗೂ ಕಮಲಾಕರ ಗುರೂಜಿ ಅನೈತಿಕ ಸಂಬಂಧ ಹಾಗೂ ಅವರು ನೀಡುತ್ತಿದ್ದ ಹಿಂಸೆ ತಾಳದೇ ತಂದೆಗೆ ಮಾಹಿತಿ ನೀಡಿದಾಗ ಆತ ಅವರಗುಪ್ಪಕ್ಕೆ ಬರುವಂತೆ ತಿಳಿಸಿದ್ದ. ಆ ಪ್ರಕಾರ ಫೆ.೧ರಂದು ಬಂದ ಸುಮಶ್ರೀಯನ್ನು ಮಹೇಶ ನಾಯ್ಕ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ ಅಲ್ಲಿ ನೀಡಿದ ಮಾರ್ಗದರ್ಶನದ ಮೇರೆಗೆ ಶಿರಸಿಯ ಮಕ್ಕಳ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಹೋಗಿ ಮಾಹಿತಿ ನೀಡಿದ್ದರು.
ಆಗ ವಾಗ್ವಾದ, ತಳ್ಳಾಟ ನಡೆದಿದ್ದು, ಗಲಾಟೆ ಕೇಳಿ ಬಂದ ಪಕ್ಕದ ಮನೆಯ ಕುಮಾರ ನಾಯ್ಕ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅನ್ಯ ವ್ಯಕ್ತಿಯೊಬ್ಬ ಆತನಿಗೆ ಚಾಕುವಿನಿಂದ ಇರಿದಿದ್ದಾನೆ. ಅದನ್ನು ತಡೆಯಲು ಬಂದ ಮಹೇಶ ನಾಯ್ಕನಿಗೂ ಚಾಕುವಿನಿಂದ ಇರಿಯಲಾಗಿದೆ. ಅಷ್ಟಾದ ನಂತರ ಆರೋಪಿಗಳು ಬಂದಿದ್ದ ಇನ್ನೊವಾ ಕಾರಿನ ಬಳಿ ವಸಂತ ನಾಯ್ಕ ಬಂದಾಗ ಆತನ ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಅಷ್ಟರಲ್ಲಾಗಲೇ ಗಲಾಟೆ ಕೇಳಿ ಬಂದ ಜನರು ಸುಚಿತ್ರಾ, ಏಕನಾಥ ನಾಯ್ಕ ಹಾಗೂ ಓರ್ವ ಅನ್ಯ ವ್ಯಕ್ತಿಯನ್ನು ಹಿಡಿದಿಟ್ಟುಕೊಂಡಿದ್ದು ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ತಕ್ಷಣ ಮೂವರನ್ನು ಖಾಸಗಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದಾಗ ವಸಂತ ನಾಯ್ಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಐಜಿಪಿ ಅಮಿತ ಸಿಂಗ್, ಅಡಿಷನಲ್ ಎಸ್ಪಿ ಜಗದೀಶ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳದಲ್ಲಿದ್ದಾರೆ.