ಕನ್ನಡಪ್ರಭ ವಾರ್ತೆ ರಾಮದುರ್ಗ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಮತ್ತು ಶರಣ ಸಂಸ್ಕಾರದ ಮನೆತನದಲ್ಲಿರುವ ಅನಿಕೇತ ಯುವಕರಿಗೆ ಆದರ್ಶ ನಾಯಕನಾಗಿ ಬೆಳೆಯಲು ಬಹುತೇಕ ಪಡ್ಡೆ ಹುಡುಗರು ಇರುತ್ತಾರೆ. ತಾವೊಬ್ಬರೆ ದುಶ್ಚಟಗಳಿಂದ ದೂರು ಉಳಿಯದೇ ಜೊತೆಗೆ ತಮ್ಮ ಬೆಂಬಲಿಗರನ್ನು ದುಶ್ಚಟಗಳಿಂದ ರಕ್ಷಿಸಬೇಕು. ಅಂದಾಗ ಪ್ರಾಮಾಣಿಕ ನಾಯಕನಾಗಲು ಸಾಧ್ಯ ಎಂದು ತೊಂಡಿಕಟ್ಟಿಯ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಮತ್ತು ಶರಣ ಸಂಸ್ಕಾರದ ಮನೆತನದಲ್ಲಿರುವ ಅನಿಕೇತ ಯುವಕರಿಗೆ ಆದರ್ಶ ನಾಯಕನಾಗಿ ಬೆಳೆಯಲು ಬಹುತೇಕ ಪಡ್ಡೆ ಹುಡುಗರು ಇರುತ್ತಾರೆ. ತಾವೊಬ್ಬರೆ ದುಶ್ಚಟಗಳಿಂದ ದೂರು ಉಳಿಯದೇ ಜೊತೆಗೆ ತಮ್ಮ ಬೆಂಬಲಿಗರನ್ನು ದುಶ್ಚಟಗಳಿಂದ ರಕ್ಷಿಸಬೇಕು. ಅಂದಾಗ ಪ್ರಾಮಾಣಿಕ ನಾಯಕನಾಗಲು ಸಾಧ್ಯ ಎಂದು ತೊಂಡಿಕಟ್ಟಿಯ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಹೇಳಿದರು.ರಾಮದುರ್ಗದ ಯುಥ್ ಕಾಂಗ್ರೆಸ್ ಅಧ್ಯಕ್ಷ ಅನಿಕೇತ ಪಟ್ಟಣ ಅವರ 25ನೇ ವರ್ಷದ ಜನ್ಮ ದಿನದ ಅಂಗವಾಗಿ ಅವರ ಸ್ವಗೃಹದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ತಾಲೂಕಿನಲ್ಲಿ ಯುವಕರಿಗೆ ಉನ್ನತ ಶಿಕ್ಷಣ ಅದರಲ್ಲಿ ತಾಂತ್ರಿಕ ಶಿಕ್ಷಣದ ಕೊರತೆ ಹೆಚ್ಚಾಗಿದ್ದು, ಅದರ ಪರಿಹಾರಕ್ಕೆ ಶ್ರಮಿಸುವಂತೆ ಸೂಚನೆ ನೀಡಿದರು.ಕಾಲೇಜಿನ ಪ್ರಾಧ್ಯಾಪಕ ಯಶವಂತ ಕೊಕ್ಕನವರ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಯೋಧರ ಮನೆಯಲ್ಲಿ ಜನಿಸಿದ ಅನಿಕೇತ ಪಟ್ಟಣ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಜೀವನ ಹಾಳು ಮಾಡಿಕೊಳ್ಳದೆ ದೀನ ದಲಿತರ, ಹಿಂದುಳಿದ ಜನಾಂಗದ ಏಳಿಗೆಗೆ ಆದ್ಯತೆ ನೀಡಬೇಕು ಎಂದರು.
ಅನಿಕೇತ ಪಟ್ಟಣ ಮಾತನಾಡಿ, ರಾಮದುರ್ಗ ವಿಧಾನಸಭಾ ಕ್ಷೇತ್ರದ ಜನರು ನನ್ನ ಅಜ್ಜ, ಅಮ್ಮ ಮತ್ತು ದೊಡ್ಡಪ್ಪನನ್ನು ಶಾಸಕರಾಗಿ ಆಯ್ಕೆ ಮಾಡುವ ಮುಖಾಂತರ ಜನರ ಸೇವೆಗೆ ಅವಕಾಶ ನೀಡಿದ್ದಾರೆ. ತಾಲೂಕಿನ ಜನರ ಋಣ ತೀರಿಸಲು ಕುಟುಂಬ ಬದ್ಧವಾಗಿದ್ದು, ಜನರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ 159 ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಮುಳ್ಳೂರು ಮಠದ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅನಿಕೇತ ತಂದೆ ಪ್ರದೀಪ, ತಾಯಿ ಜಮುನಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನಗೌಡರ, ರಾಯಪ್ಪ ಕತ್ತಿ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಸುರೇಶ ಪತ್ತೇಪೂರ, ಪೀರು ತಳವಾರ, ಸತೀಶ ಜಿನಗಾ, ಜಹೂರ ಹಾಜಿ ಮತ್ತು ಅನಿಕೇತ ಅಭಿಮಾನಿ ಬಳಗದ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.