)
-ನಗರದ ಕೊತ್ತನೂರು ಪೊಲೀಸರಿಂದ ರಕ್ಷಣೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಪ್ರೀತಿಗೆ ಪೋಷಕರ ವಿರೋಧ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಯತ್ನಿಸಿದ್ದ ಪ್ರೇಮಿಗಳನ್ನು ಕೊತ್ತನೂರು ಠಾಣೆ ಪೊಲೀಸರು ರಕ್ಷಿಸಿದ್ದಾರೆ.ಕೊತ್ತನೂರು ಸಮೀಪದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಅವರು ಬುಧವಾರ ಸಂಜೆ ಕಾಲೇಜು ಮುಗಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದಕ್ಕೂ ಮುನ್ನ ತಮ್ಮ ಪೋಷಕರಿಗೆ ಕರೆ ಮಾಡಿ ಅವರು ವಿಷಯ ತಿಳಿಸಿದ್ದರು. ಕೂಡಲೇ ಆತಂಕಗೊಂಡ ವಿದ್ಯಾರ್ಥಿಗಳ ಕುಟುಂಬದವರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾರೆ. ತಕ್ಷಣವೇ ಮಾಹಿತಿ ಪಡೆದು ಕಾರ್ಯಪ್ರವೃತ್ತರಾದ ಕೊತ್ತನೂರು ಠಾಣೆ ಹೊಯ್ಸಳ ಸಿಬ್ಬಂದಿ, ಕಾಲೇಜು ಆವರಣದಲ್ಲಿ ವಿಷ ಸೇವಿಸಿದ್ದ ಪ್ರೇಮಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.