The deceased, Sevalal, was a JCB operator. Distressed by frequent quarrels, his wife had moved to Vuna with their children, while Sevalal continued to live in Mataki Tanda.
ಕನ್ನಡಪ್ರಭ ವಾರ್ತೆ ಆಳಂದ
ಮೃತ ಸೇವಾಲಾಲ್ ಜೆಸಿಬಿ ಚಾಲಕ. ಪತ್ನಿಯೊಂದಿಗೆ ಜಗಳವಾಡುತ್ತಿದ್ದರಿಂದ ಬೇಸತ್ತ ಪತ್ನಿ ಮಕ್ಕಳೊಂದಿಗೆ ವುನಾದಲ್ಲಿ ವಾಸವಾಗಿದ್ದಳು. ಆದರೆ ಶಿವಲಾಲ ಮಾತ್ರ ಮಟಕಿ ತಾಂಡಾದಲ್ಲಿಯೇ ವಾಸವಾಗಿದ್ದ. ವತ್ನಿ ಸವಿತಾ ಪುನಾದಿಂದ ಬಂದಿದ್ದಾಳೆಂಬ ಸುದ್ದಿ ತಿಳಿದ ಶಿವಲಾಲನು ತನ್ನ ಹಾಗೂ ವತ್ನಿಯ ಜಗಳದಿಂದಾಗಿ ಕೊಪಗೊಂಡ ಎಲ್ಲರನ್ನು ಹತ್ಯೆ ಮಾಡಬೇಕೆಂದುಕೊಂಡು ತಾನು ಕೆಲಸ ಮಾಡುವ ಸ್ಥಳಗಳಿಂದ ಜಿಲೆಟಿನ್ ಕಡ್ಡಿ ಹೆರಳ ಪ್ರಮಾಣದಲ್ಲಿ ಸಂಗ್ರಹಿಸಿದ್ದ ಶಿವಲಾಲನು ಇಂದು ಬೆಳಗ್ಗೆ ೯.೩೦ರ ಸುಮಾರಿಗೆ ತಾನು ಧರಿಸಿದ ಲುಂಗಿ, ಶರ್ಟ್, ಶರ್ಟ್‌ನ ಜೇಬು ಸೇರಿದಂತೆ ಇತರೆ ಕಡೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ತುಂಬಿಕೊಂಡು ನೇರವಾಗಿ ಪತ್ನಿಯ ತವರು ಮನೆಗೆ ಹೋಗಿದ್ದಾನೆ. ಅಲ್ಲಿ ಹೋದವನೇ ಮನೆಯೊಳಗೆ ಹೋಗಿ ಒಳಗಿನಿಂದ ಕೊಂಡಿ ಹಾಕಿಕೊಂಡ ಭೂಪ ನೋಡ ನೋಡುತ್ತಲೇ ತನ್ನ ಮೈಗೆ ಬೆಂಕಿ ಹಚ್ಚಿಕೊಂಡು ಸ್ಪೋಟಿಸಿಕೊಂಡಿದ್ದಾನೆ.
ಸ್ಪೋಟದ ಭೀಕರತೆಗೆ ಶಿವಲಾಲನ ದೇಹ ಸಂಪೂರ್ಣ ಛಿದ್ರವಾಗಿದ್ದು ಅಲ್ಲದೆ ಹತ್ತಿರದಲ್ಲಿಯೇ ಇದ್ದ ಮಗಳು ಮೀರಾಳಿಗೂ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಶಿವಲಾಲನ ಪತ್ನಿ ಸಂಗೀತಾ, ಪುತ್ರ, ಪತ್ನಿಯ ಸಹೋದರನ ಪತ್ನಿ ಆತನ ಮಗ ಹೀಗೆ ಐದು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಪೋಟದ ಸದ್ದು ಕೇಳಿದ ಅಕ್ಕ ಪಕ್ಕದ ಮನೆಯವರು ಬೆಚ್ಚಿಬೀದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ್ದು ಅಲ್ಲದೇ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ.
ಸ್ಪೋಟದ ಸುದ್ದಿ ತಿಳಿದ ಎಸ್ಪಿ ಅತ್ತೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಡಿಎಸ್ಪಿ ತಮ್ಮಾ ರಾಯ ಪಾಟೀಲ್, ಸಿಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್‌ಐ ಸುಧಾಕರ ಪಾಟೀಲ್, ಇಂಟ್ಲಿಜೆನ್ಸಿ ತಂಡ, ಶ್ವಾನದಳ, ಬಏರಳಚ್ಚು ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಘಟನೆಯಿಂದ ತಾಂಡಾದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.