ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಮಾರಿಕಾಂಬ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೋಟೆ ಮಾರಿಕಾಂಬ ದೇವಿಯ ಜಾತ್ರೆಗೆ ಸರ್ವಸಿದ್ಧತೆಗಳು ಪೂರ್ಣಹಂತ ತಲುಪಿವೆ. ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಗಾಂಧಿಬಜಾರಿನ ತವರು ಮನೆಯಲ್ಲಿ ಸಾಪ್ರದಾಯಕ ಪೂಜೆಗಳೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು. ಅಂದು ರಾತ್ರಿ ಮೆರವಣಿಗೆಯ ಮೂಲಕ ಮಾರಿ ಗದ್ದುಗೆಗೆ ಅಮ್ಮನವರನ್ನು ಪ್ರತಿಷ್ಠಾಪಿಸಲಾಗುವುದು. ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಗಾಂಧಿಬಜಾರ್ ಮತ್ತು ಅಮ್ಮನ ಗದ್ದುಗೆ ಎರಡೂ ಸ್ಥಳಗಳಲ್ಲಿಯೂ ಅಮ್ಮನ ದರ್ಶನ ಪಡೆಯಲು ಲಕ್ಷಾಂತರ ಜನರು ಆಗಮಿಸುವುದರಿಂದ ಯಾವುದೇ ತೊಂದರೆಯಾಗದಂತೆ ಎಲ್ಲರಿಗೂ ಅಮ್ಮನ ದರ್ಶನ ಆಗುವಂತೆ ನೋಡಿಕೊಳ್ಳಲಾಗುವುದು. ವಿಶೇಷ ಚೇತನರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕವಾಗಿ ಈ ಬಾರಿ ಎರಡು ಸಾಲುಗಳನ್ನು ನಿರ್ಮಿಸಲಾಗಿದೆ. ಬ್ಯಾರಿಕೇಡ್‌ನ್ನು ಬಳಸಲಾಗುತ್ತದೆ. ವಿಶೇಷ ದರ್ಶನಕ್ಕೆ 200 ರು. ಮತ್ತು 500 ರು. ಟಿಕೆಟ್ ದರ ನಿಗದಿಪಡಿಸಲಾಗಿದೆ. ಈ ಟಿಕೆಟ್‌ಗಳು ಗಾಂಧಿಬಜಾರಿನ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಕಾಳಿಕಾ ದೇವಿಯ ಮೂರ್ತಿಯ ಮುಂಭಾಗದಲ್ಲಿ ದೊರೆಯಲಿದೆ ಎಂದರು.ವಾಸವಿ ಯುವಕ ಸಂಘದ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಪಾನಕ, ಮಜ್ಜಿಗೆ ವ್ಯವಸ್ಥೆಯನ್ನು ಮಾಡಿದ್ದಾರೆ. ಜಾತ್ರೆಯ ಸುತ್ತಮುತ್ತ ಇರುವ ತ್ರಿಕೋನಾಕಾರದ ಜಾಗದಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಲಾಗಿದ್ದು, ಅದರ ಬದಲು ಸುಮಾರು 20 ಸಾವಿರ ಕೈಚೀಲದಿಂದ ಪ್ರಸಾದವನ್ನು ವಿತರಿಸಲಾಗುವುದು. ಅಂಗಡಿಗಳ ಮಾಲೀಕರಿಗೂ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ ಎಂದರು.
ಪ್ರಮುಖರಾದ ಉಮಾಪತಿ, ಹನುಮಂತಪ್ಪ, ಎಸ್.ಸಿ.ಲೋಕೇಶ್, ಚಂದ್ರಶೇಖರ್ ಹಲವರು ಇದ್ದರು.
ಹಿರಿಯ ಕಾಂಗ್ರೆಸ್ ಮುಖಂಡರು, ಡಿಸಿಸಿ ಬ್ಯಾಂಕ್ ನಿರ್ದೇಶಕರು ಆದ ಎಂ.ಶ್ರೀಕಾಂತ್ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬ ಗದ್ದುಗೆಗೆ ಫಲಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿಸಿದ್ದಾರೆ.
ಜಾತ್ರೆಯುದ್ದಕ್ಕೂ ಸಿಸಿ ಕ್ಯಾಮೆರಾ ಕಣ್ಗಾವಲು
ಜಾತ್ರೆ ನಡೆಯುವ ಗಾಂಧಿಬಜಾರಿನ ಕೋಟೆ ರಸ್ತೆ ಸುತ್ತಮುತ್ತಲ ವಾಹನ ಸಂಚಾರ ಮಾರ್ಗ ನಿಷೇಧಿಸಲಾಗಿದೆ. ಮತ್ತು ಮಾರ್ಗ ಬದಲಾವಣೆ ಮಾಡಲಾಗಿದ್ದು, ಸೈನ್ಸ್ ಮೈದಾನ, ಸೇಕ್ರೇಡ್ ಹಾರ್ಟ್ ಚರ್ಚ್, ಮಹಾನಗರ ಪಾಲಿಕೆ ಆವರಣಗಳಲ್ಲಿ ವಾಹನದ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.