ನಿಮಿಷಾಂಬ ದೇವಿ ದರ್ಶನ ಪಡೆದ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ

KannadaprabhaNewsNetwork | Published : Feb 2, 2025 1:01 AM

ಸಾರಾಂಶ

ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಫೋಟೋ ತೆಗೆಸಿಕೊಂಡ ಗಾಯಕಿ ಎಸ್.ಜಾನಕಿ. ದೇವಿಗೆ ಕುಂಕುಮ ಅರ್ಚನೆ ಸೇರಿದಂತೆ ಇತರೆ ಪೂಜೆಗಳ ನೆರವೇರಿಸಿ ಪ್ರಾರ್ಥನೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಚಲನಚಿತ್ರ ಹೆಸರಾಂತ ಹಿರಿಯ ಹಿನ್ನೆಲೆ ಗಾಯಕಿ ಎಸ್.ಜಾನಕಿ ಪಟ್ಟಣದ ಪ್ರಸಿದ್ಧ ಗಂಜಾಂನ ಶ್ರೀನಿಮಿಷಾಂಬ ದೇವಿ ದರ್ಶನ ಪಡೆದರು.

ಎಸ್. ಜಾನಕಿ ಅವರು ತಮ್ಮ ಸಾಕು ಮಗನ ಕುಟುಂಬಸ್ಥರೊಂದಿಗೆ ದೇವಾಲಯಕ್ಕೆ ಆಗಮಿಸಿ ದೇವಿಗೆ ಕುಂಕುಮ ಅರ್ಚನೆ ಸೇರಿದಂತೆ ಇತರೆ ಪೂಜೆಗಳ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

ದೇವಿ ದರ್ಶನಕ್ಕೆ ಆಗಮಿಸಿದ್ದ ಭಕ್ತರನ್ನೆಲ್ಲ ಕೈ ಬೀಸಿ ಆತ್ಮೀಯವಾಗಿ ಶುಭ ಕೋರುವ ಜೊತೆಗೆ ದೇವಾಲಯದ ಅರ್ಚಕರು, ಸಿಬ್ಬಂದಿಯೊಂದಿಗೆ ಮಾತನಾಡಿ ಫೋಟೋ ತೆಗೆಸಿಕೊಂಡರು. ಎಲ್ಲರೂ ನಮ್ಮ ಮಕ್ಕಳಿದ್ದಂತೆ ಬನ್ನಿ ಬನ್ನಿ ಎಂದು ನೆರದಿದ್ದ ಭಕ್ತರೊಟ್ಟಿಗೆ ಸೇರಿ ಖುಷಿಪಟ್ಟರು.

ಸ್ಥಳದಲ್ಲಿದ್ದವರು ಎಸ್.ಜಾನಕಿ ಅವರನ್ನು ನಿಲ್ಲಿಸಿಕೊಂಡು ತಮ್ಮ ಮೊಬೈಲ್‌ಗಳ ಮೂಲಕ ಸೆಲ್ಫಿ ಫೋಟೋ ಚಿತ್ರಿಸಿಕೊಂಡರು. ನಂತರ ದೇವಾಲಯದ ಹೊರಾಂಗಣದಲ್ಲಿ ಸುತ್ತಾಡಿ ಕಾವೇರಿ ನದಿ ಸ್ನಾನಘಟ್ಟದ ಬಳಿ ಐದು ನಿಮಿಷ ಕುಳಿತು ವಿಶ್ರಾಂತಿ ಪಡೆದು ನಂತರ ಪ್ರಸಾದ ಸ್ವೀಕರಿಸಿ ಖುಷಿ ಪಟ್ಟು ತೆರಳಿದರು.

10ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಶ್ರೀರಂಗಪಟ್ಟಣ:

ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಫೆ.10ರಂದು ನಡೆಯಲಿದೆ.

ಈ ಕುರಿತು ತಹಸೀಲ್ದಾರ್ ಅವರು ಪ್ರಕಟಣೆ ಹೊರಡಿಸಿದ್ದು, ಸರ್ಕಾರದ ಅಧಿಸೂಚನೆಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗಧಿ ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಚುನಾವಣೆಯನ್ನು ನಡೆಸಲು ದಿನಾಂಕ ಹಾಗೂ ಸಮಯವನ್ನು ನಿಗಧಿಪಡಿಸಿದೆ. ಅಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಸುವುದು, ಮಧ್ಯಾಹ್ನ 1 ಗಂಟೆಗೆ ಸಭೆ ನಡೆಸಲಾಗುವುದು. ನಂತರ 1 ಗಂಟೆಯಿಂದ 1.20 ರವರೆಗೆ ಚುನಾವಣಾ ಸಭೆ ಪ್ರಾರಂಭ ಹಾಗೂ ನಾಮಪತ್ರಗಳ ಪರಿಶೀಲನೆ. ಬಳಿಕ ಮಧ್ಯಾಹ್ನ 1.20 ರಿಂದ 1.30ರವರೆಗೆ ನಾಮಪತ್ರ ವಾಪಸ್ ಡೆಯಲು ಸಮಯ ನಿಗಧಿ ಪಡಿಸಲಾಗಿದೆ. ಮತದಾನ ಅವಶ್ಯವಿದ್ದಲ್ಲಿ ಮಧ್ಯಾಹ್ನ 1.30 ಕ್ಕೆ ಮತದಾನ ನಡೆಸುವುದಾಗಿ ತಿಳಿಸಿದ್ದಾರೆ.

Share this article