ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕುಂತಿಬೆಟ್ಟದ ಕುವೆಂಪು ಪ್ರೌಢಶಾಲೆಯಲ್ಲಿ ಕಳೆದ 30 ವರ್ಷಗಳಿಂದಲೂ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ಪ್ರಭಾರಿ ಮುಖ್ಯ ಶಿಕ್ಷಕರಾಗಿ ವಯೋ ನಿವೃತ್ತಿ ಹೊಂದಿದ ಹಿರೇಮರಳಿ ಪಾರ್ಥೇಗೌಡರಿಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿತು.ಪಾರ್ಥೇಗೌಡರನ್ನು ಅಭಿನಂದಿಸಿ ಮಾತನಾಡಿದ ಶ್ರೀಶಂಕರಾನಂದ ಭಾರತಿ ವಿದ್ಯಾಪೀಠದ ಅಧ್ಯಕ್ಷ ಎಚ್.ಎಲ್. ನಂಜೇಗೌಡ, ಪಾರ್ಥೇಗೌಡರು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದಾರೆ. ನಮ್ಮ ಸಂಸ್ಥೆಗೆ ಒಂದು ಕಿರೀಟ ಇದ್ದಂತೆ. ಸಂಸ್ಥೆ ಏಳಿಗೆಗಾಗಿ ಶ್ರಮಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ ಮಾತನಾಡಿ, ಪಾರ್ಥೇಗೌಡರು 30 ವರ್ಷಗಳ ಸುದೀರ್ಘ ಸೇವೆಯಲ್ಲಿ ಶಾಲೆಯ ದಾಖಲಾತಿ ಮತ್ತು ಉಳಿವಿಗಾಗಿ ಶ್ರಮಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಉಪಾಧ್ಯಕ್ಷ ಡಿ.ಕೆ.ದೇವೇಗೌಡ ಮಾತನಾಡಿ, ಕ್ರೀಡೆಯಲ್ಲಿ ಪಾರ್ಥೇಗೌಡರು ಹೆಚ್ಚು ಕ್ರಿಯಾಶೀಲ ವ್ಯಕ್ತಿಯಾಗಿ ಶಾಲೆಯ ಮಕ್ಕಳ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಖೋಖೋ ಮತ್ತು ಕಬಡ್ಡಿಯಲ್ಲಿ ಸಾಧನೆ ಮಾಡಿದ್ದರು. ಜತೆಗೆ ಸ್ವತಃ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಅವರ ಸೇವಾ ಕಾರ್ಯಕ್ಕೆ ಮೆರುಗು ನೀಡಿದೆ ಎಂದರು.
ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಡಿ.ಕೆ.ದೇವೇಗೌಡ, ನಿರ್ದೇಶಕ ಕೆನ್ನಾಳು ಚಂದ್ರಶೇಖರ್, ನಿವೃತ್ತ ಮುಖ್ಯ ಶಿಕ್ಷಕರಾದ ಚಂದ್ರಶೇಖರಯ್ಯ, ಎಸ್.ಎಲ್.ರಾಮಕೃಷ್ಣ, ವೆಂಕಟೇಶ್, ನಿವೃತ್ತ ತೋಟಗಾರಿಕೆ ಶಿಕ್ಷಕ ಮರಿಕುಂಟೇಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಾದೇಶ್, ಶಿಕ್ಷಕರಾದ ನಾಗಪ್ಪ ಕೋರೆರಾ, ಮರಿಯಪ್ಪ, ಭಾಸ್ಕರ, ಪರಿಣಿತ, ಶಾರದಮ್ಮ, ಪ್ರಗತಿ, ಸೌಮ್ಯ, ತಸ್ಲೀಮ್, ಮಂಜುನಾಥ್, ರಕ್ಷಿತಾ, ದಿವ್ಯಾ, ಸೌಮ್ಯ, ವಾರ್ಡನ್ ಪೃಥ್ವಿ ಇತರರಿದ್ದರು.ಕಾಲೇಜು ಪ್ರವೇಶಾತಿಗೆ ಪ್ರಕ್ರಿಯೆ ಆರಂಭಕೆ.ಆರ್.ಪೇಟೆ: ಪಟ್ಟಣದ ಪ್ರತಿಷ್ಠಿತ ಸರ್ಕಾರಿ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆಯಲ್ಲಿ 2024-25ನೇ ಸಾಲಿಗೆ ಪ್ರವೇಶ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಸದರಿ ಶಿಕ್ಷಣ ಸಂಸ್ಥೆ ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಪ್ರವೆಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶಕ್ಕೆ ಜೂ.15 ಕೊನೆ ದಿನ. ಅರ್ಹ ಅಭ್ಯರ್ಥಿಗಳು ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಕಾಲೇಜಿನಲ್ಲಿ ಪ್ರಥಮ ಡಿಪ್ಲಮೊ ವ್ಯಾಸಂಗಕ್ಕೆ ಸೇರ್ಪಡೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಕೆ.ಆರ್.ಪೇಟೆ, ಮೊ-7259930107ಸಂಪರ್ಕಿಸುವಂತೆ ಸಂಸ್ಥೆ ಪ್ರಾಂಶುಪಾಲ ಹುಲಿವಾನ ನಾಗರಾಜು ತಿಳಿಸಿದ್ದಾರೆ.