ಕೆಕೆಆರ್‌ಟಿಸಿ ಚಾಲಕ ಲಕ್ಷ್ಮಣ ರಾಠೋಡ್ ಬೀಳ್ಕೊಡುಗೆ

KannadaprabhaNewsNetwork |  
Published : Oct 05, 2026, 01:45 AM IST
ಅಫಜಲಪುರ ಕೆಕೆಆರ್‌ಟಿಸಿ ಅಫಜಲಪುರ ಬಸ್ ಘಟಕದಲ್ಲಿ ಸುಮಾರು 29 ವರ್ಷಗಳ ಕಾಲ ಚಾಲಕರಾಗಿ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ ಲಕ್ಷ್ಮಣ ರಾಠೋಡ್ ಅವರು ಸೇವಾ ನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಘಟಕದ ವತಿಯಿಂದ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕೆಕೆಆರ್‌ಟಿಸಿ ಅಫಜಲಪುರ ಬಸ್ ಘಟಕದಲ್ಲಿ 29 ವರ್ಷಗಳ ಕಾಲ ಚಾಲಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಲಕ್ಷ್ಮಣ ರಾಠೋಡ ಅವರು ಸೇವಾ ನಿವೃತ್ತಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಘಟಕದ ವತಿಯಿಂದ ಅವರಿಗೆ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು.

ಅಫಜಲಪುರ: ಕೆಕೆಆರ್‌ಟಿಸಿ ಅಫಜಲಪುರ ಬಸ್ ಘಟಕದಲ್ಲಿ 29 ವರ್ಷಗಳ ಕಾಲ ಚಾಲಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಲಕ್ಷ್ಮಣ ರಾಠೋಡ ಅವರು ಸೇವಾ ನಿವೃತ್ತಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಘಟಕದ ವತಿಯಿಂದ ಅವರಿಗೆ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಘಟಕದ ವ್ಯವಸ್ಥಾಪಕ ಎಸ್.ಎಂ. ವಾಲಿಕಾರ ಮಾತನಾಡಿ, ಲಕ್ಷ್ಮಣ ರಾಠೋಡ ಅವರು ಸಾರಿಗೆ ಇಲಾಖೆಯಲ್ಲಿ ದೀರ್ಘಾವಧಿ ಪ್ರಾಮಾಣಿಕ ಹಾಗೂ ಶಿಸ್ತಿನ ಸೇವೆ ಸಲ್ಲಿಸಿದ್ದಾರೆ. ಅವರ ಸರಳತೆ, ಸಜ್ಜನಿಕೆ ಹಾಗೂ ಕರ್ತವ್ಯನಿಷ್ಠೆ ಇತರ ಸಿಬ್ಬಂದಿಗೆ ಮಾದರಿ. ಪ್ರಯಾಣಿಕರ ಸುರಕ್ಷತೆಗೆ ಸದಾ ಆದ್ಯತೆ ನೀಡುತ್ತಿದ್ದ ಅವರು ,ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇಂತಹ ನಿಷ್ಠಾವಂತ ಸಿಬ್ಬಂದಿ ಸೇವೆಯನ್ನು ಇಲಾಖೆ ಸದಾ ಸ್ಮರಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸೇವಾ ನಿವೃತ್ತಿ ಹೊಂದಿದ ಲಕ್ಷ್ಮಣ ರಾಠೋಡ ಮಾತನಾಡಿ, ಸಾರಿಗೆ ಇಲಾಖೆಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ತಮ್ಮ ಜೀವನದ ಸ್ಮರಣೀಯ ಅವಧಿ. ಈ ಅವಧಿಯಲ್ಲಿ ಸಹಕಾರ ನೀಡಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.ಲಕ್ಷ್ಮಣ ರಾಠೋಡ ಅವರನ್ನು ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿ ಶುಭಹಾರೈಸಿದರು. ಆನಂದ ರಾಠೋಡ, ಜಯರಾಮ ರಾಠೋಡ, ಮನೋಹರ ರಾಠೋಡ, ಸಾರಿಗೆ ನಿಯಂತ್ರಕ ಸಿದ್ದಪ್ಪ, ರವಿ ನಾಯ್ಕೋಡಿ, ದಯಾನಂದ ಹಿರೇಮಠ, ಸರ್ವೇಶ ಲಿಂಬಿತೋಟ, ನಿವೃತ್ತಿ ಹೊಂದಿದ ಚಾಲಕರ ಕುಟುಂಬ ಸದಸ್ಯರು ಇದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡ ರೈತರಿಗೆ ಕಾನೂನು ಬದ್ಧವಾಗಿಯೇ ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು
ಮಂಡ್ಯ: ಗುರುದೇವ ಅಕಾಡೆಮಿಯ ಗುರು ದೇವೋತ್ಸವಕ್ಕೆ ತೆರೆ