ನಂಜಾಪುರ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಕೃಷ್ಣೇಗೌಡರಿಗೆ ಬೀಳ್ಕೊಡುಗೆ

KannadaprabhaNewsNetwork | Published : Jul 12, 2024 1:40 AM

ಸಾರಾಂಶ

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ 13 ವರ್ಷ ಯಾವುದೇ ಲೋಪ ಬರದಂತೆ ಉತ್ತಮ ಸೇವೆ ಸಲ್ಲಿಸಿದ್ದೇನೆ. ಗ್ರಾಮಸ್ಥರು, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ನನಗೆ ಸಹಕಾರ ನೀಡಿದ್ದಾರೆ. ನನ್ನ ಅವಧಿಯಲ್ಲಿ ಶಾಲೆಯಲ್ಲಿ ಉತ್ತಮ ತೋಟವನ್ನು ನಿರ್ಮಿಸಿ, ವಿದ್ಯಾರ್ಥಿಗೆ ಉತ್ತಮ ಪರಿಸರ ದೊರೆಯುವಂತೆ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ನಂಜಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ 13 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಈ.ಕೃಷ್ಣೇಗೌಡರಿಗೆ ಸಿಬ್ಬಂದಿಯಿಂದ ಬೀಳ್ಕೊಡುಗೆ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಈ.ಕೃಷ್ಣೇಗೌಡ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ 13 ವರ್ಷ ಯಾವುದೇ ಲೋಪ ಬರದಂತೆ ಉತ್ತಮ ಸೇವೆ ಸಲ್ಲಿಸಿದ್ದೇನೆ. ಗ್ರಾಮಸ್ಥರು, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ನನಗೆ ಸಹಕಾರ ನೀಡಿದ್ದಾರೆ. ನನ್ನ ಅವಧಿಯಲ್ಲಿ ಶಾಲೆಯಲ್ಲಿ ಉತ್ತಮ ತೋಟವನ್ನು ನಿರ್ಮಿಸಿ, ವಿದ್ಯಾರ್ಥಿಗೆ ಉತ್ತಮ ಪರಿಸರ ದೊರೆಯುವಂತೆ ಮಾಡಿರುವುದಾಗಿ ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಕೃಷ್ಣೆಗೌಡರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು, ಇದುವರೆಗೂ ಉತ್ತಮ ಸೇವೆ ಸಲ್ಲಿಸಿರುವುದಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದರು. ಸರ್ಕಾರಿ ಸೇವೆ ಎಂದ ಮೇಲೆ ವರ್ಗಾವಣೆ, ನಿವೃತ್ತಿಕೊಳ್ಳುವುದು ಸಾಮಾನ್ಯ. ಸೇವಾ ಅವಧಿಯಲ್ಲಿ ಎಷ್ಟು ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದರು.

ಗ್ರಾಮಸ್ಥರು ಹಾಗೂ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘ ಮತ್ತು ಸಿಬ್ಬಂದಿಯವರು ಸನ್ಮಾನಿಸಿರುವುದು ಶ್ಲಾಘನೀಯ ಹಾಗೂ ಕೃಷ್ಣೇಗೌಡರ ಸೇವಾ ಅವಧಿಯಲ್ಲಿ ಸಹಶಿಕ್ಷಕರ ಜೊತೆ ಉತ್ತಮ ಒಡನಾಡ ಇಟ್ಟುಕೊಂಡು ಸಂಘದ ಅಭಿವೃದ್ಧಿಗೂ ಸಹಕಾರಿಯಾಗಿದ್ದರು ಎಂದರು.

ಈ ವೇಳೆ ಬ್ಯಾಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಿದ್ದಪ್ಪ, ಬೋರೇಗೌಡ, ಕೆ.ಸಿ.ಮಹೇಶ, ಕೃಷ್ಣ, ಕುಳ್ಳಯ್ಯ, ಬಸವರಾಜು, ಸೇರಿದಂತೆ ಇತರರು ಇದ್ದರು.ನಾಳೆ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಮಂಡ್ಯ: ಮಂಡ್ಯ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಹೊರಡುವ ಎಫ್ 3-ಡಿ.ಸಿ.ಅಫೀಸ್, ಎಫ್ 4-ಹೆಬ್ಬಕವಾಡಿ, ಎಫ್ 5-ಕಲ್ಲಹಳ್ಳಿ, ಎಫ್ 6-ಹೊಸಹಳ್ಳಿ, ಎಫ್ 7- ಎಲ್‌ಪಿ 1, ಎಫ್ 8-ಕೊತ್ತತ್ತಿ ಎನ್ ಜಿವೈ, ಎಫ್13- ವಿ.ವಿ.ನಗರ, ಎಫ್ 14-ಗಾಂಧಿನಗರ ಫೀಡರ್ ಗಳ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಜುಲೈ 13 ರಂದು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಂಡ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮಂಡ್ಯ ವಿದ್ಯುತ್ ವಿತರಣಾ ಕೇಂದ್ರಗಳಾದ ಕಲ್ಲಹಳ್ಳಿ, ವಿ.ವಿ.ನಗರ, ಬಂದೀಗೌಡ ಬಡಾವಣೆ, ಎಂ.ಸಿ.ರಸ್ತೆ, ದ್ವಾರಕನಗರ, ಹಾಲಹಳ್ಳಿ, ಎನ್‌ಜಿಒ ಲೇಔಟ್, ಗಾಂಧೀ ನಗರ, ಚಾಮುಂಡೇಶ್ವರಿ ನಗರ, ಅನ್ನಪೂರ್ಣೇಶ್ವರಿ ನಗರ, ಸಿದ್ದೇಶ್ವರ ಬಡಾವಣೆ, ಶಂಕರನಗರ, ಹಾಲಹಳ್ಳಿ, ಕಾವೇರಿನಗರ 1ಮತ್ತು 2, ಹೌಸಿಂಗ್ ಬೋರ್ಡ್, ವಿನಾಯಕ ಬಡಾವಣೆ, ನಾಲ್ವಡಿ ಕೃಷ್ಣರಾಜೇಂದ್ರ ಬಡಾವಣೆ, ಕೆಂಪೇಗೌಡ ಬಡಾವಣೆ, ಶ್ರೀರಾಮನಗರ, ಹೊಸಹಳ್ಳಿ, ಆದರ್ಶ ಕನ್ವೆಂಟ್, ಕ್ಯಾತುಂಗೆರೆ ನಗರ ವ್ಯಾಪ್ತಿಯಲ್ಲಿ ಹಾಗೂ ಕಾರಸವಾಡಿ, ಇಂಡುವಾಳು, ಸಿದ್ದಯ್ಯನಕೊಪ್ಪಲು, ಹೆಬ್ಬಕವಾಡಿ, ಹನಿಯಂಬಾಡಿ, ಚೀರನಹಳ್ಳಿ, ಮಂಗಲ, ಸಂತೆಕಸಲಗೆರೆಯ ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ಸಾರ್ವಜನಿಕರು ಸಹಕರಿಸಬೇಕೆಂದು ಮಂಡ್ಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ ಎಫ್ 2-ಷುಗರ್‌ಟೌನ್, ಎಫ್ 3-ಕೆ.ಎಚ್.ಬಿ ಫೀಡರ್‌ಗಳ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಜುಲೈ 13ರಂದು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ನಗರದ ಪೇಟೆಬೀದಿ, ಷುಗರ್ ಪ್ಯಾಕ್ಟರಿ, ಕಾಳಿಕಾಂಭ ದೇವಸ್ಥಾನದ ಸುತ್ತಮುತ್ತ ವಿವೇಕನಂದ ನಗರ, ಕೆ.ಎಚ್.ಬಿ ಕಾಲೋನಿ ಮಂಜುನಾಥ ನಗರ, ಚಂದ್ರಶೇಖರ ಲೇಔಟ್, ಬೀಡಿ ಕಾಲೋನಿ ಕಾರೇಮನೆ ಗೇಟ್‌ನಿಂದ ಚಿಕ್ಕಮಂಡ್ಯ ಸುತ್ತಮುತ್ತಲಿನ ನಗರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮಂಡ್ಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

Share this article