ವಾಲ್ಪಾಡಿ ಗ್ರಾಮೋತ್ಸವ: ಶಾಲಾ ಮಕ್ಕಳಿಗೆ ಬೀಳ್ಕೊಡುಗೆ, ಸಾಧಕರಿಗೆ ಸನ್ಮಾನ

KannadaprabhaNewsNetwork |  
Published : Apr 11, 2025, 12:32 AM IST
ವಾಲ್ಪಾಡಿಯಲ್ಲಿ ಗ್ರಾಮೋತ್ಸವ: ಶಾಲಾ ಮಕ್ಕಳಿಗೆ ಬೀಳ್ಕೊಡುಗೆ, ಸಾಧಕರಿಗೆ ಸನ್ಮಾನ | Kannada Prabha

ಸಾರಾಂಶ

ವಾಲ್ಪಾಡಿಯ ಗ್ರಾಮೋತ್ಸವ ಸಮಿತಿ ಹಾಗೂ ಮಾಡದಂಗಡಿ ಶಾಲಾ ಎಸ್‌ಡಿಎಂಸಿ ವತಿಯಿಂದ ಗ್ರಾಮೋತ್ಸವ, ಐದನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ವಾಲ್ಪಾಡಿಯ ಗ್ರಾಮೋತ್ಸವ ಸಮಿತಿ ಹಾಗೂ ಮಾಡದಂಗಡಿ ಶಾಲಾ ಎಸ್‌ಡಿಎಂಸಿ ವತಿಯಿಂದ ಗ್ರಾಮೋತ್ಸವ, ಐದನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ವಾಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಗ್ರಾ.ಪಂ.ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಶ್ರೀಧರ ಬಂಗೇರ,ಸಮಾಜ ಸೇವಕ ಶಶಿಧರ ದೇವಾಡಿಗ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ವಾಣಿಶ್ರೀ ಭಾಗವಹಿಸಿದ್ದರು.

ಐದನೇ ತರಗತಿ ವಿದ್ಯಾರ್ಥಿಗಳಾದ ಗೌಸುಲ್ ಅಹ್ಲಮ್, ಸುಹಾನ, ರಶ್ಮಿ, ಸೃಜನ್, ಧೀರಕ್ಷ, ಸಂಗೀತ ಹಾಗೂ ಶರಣ್ ಅವರನ್ನು ಬೀಳ್ಕೊಡಲಾಯಿತು.

ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಅಧಿಕಾರಿ , ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಸಮಾಜ ಸೇವೆಗಾಗಿ ರುಕ್ಕಯ್ಯ ಪೂಜಾರಿ,ನಿವೃತ್ತ ಶಿಕ್ಷಕಿ ಜೆಸಿಂತ ಡೇಸ,ಹಿರಿಯ ಕಾರು ಚಾಲಕ ರಾಮಣ್ಣ ಶೆಟ್ಟಿ, ಹಿರಿಯ ರಿಕ್ಷಾ ಚಾಲಕ ಎಸ್.ಎ.ಇಬ್ರಾಹಿಂ, ಮುತ್ತಯ್ಯ ನಲ್ಕೆ ( ದೈವಾರಾಧನೆ),ಸುಬ್ರಾಯ ಭಟ್ (ಹೊಟೇಲ್ ಉದ್ಯಮ),ರಾಘು ಪೂಜಾರಿ ( ಬೀಡಿ ಉದ್ಯಮ),ಪ್ರಶಾಂತ್ ಜೈನ್ ( ಪಾಕತಜ್ಞ), ಬಾಬು ಜೋಗೊಟ್ಟು ( ಧಾರ್ಮಿಕ), ಅಚ್ಚಪ್ಪ ಟೈಲರ್ ( ಟೈಲರಿಂಗ್), ಸದಾಶಿವ ದೇವಾಡಿಗ (ಎಲೆಕ್ಟ್ರಿಷಿಯನ್), ವಿಠಲ ಮಡಿವಾಳ (ಲಾಂಡ್ರಿ), ಕರಿಯ ಪೂಜಾರಿ ( ಕೃಷಿ), ಜಯ ಭಂಡಾರಿ ( ಕ್ಷೌರಿಕ ವೃತ್ತಿ) ಹಾಗೂ ಕೆಮನು ಮಾಂಟ್ರಾಡಿ ( ಮನೆಮದ್ದು) ಅವರನ್ನು ಗ್ರಾಮೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕಿಯರಾದ ವಾಣಿಶ್ರೀ ಹಾಗೂ ರಶ್ಮಿ ಎಂ.ಎಸ್.ಅವರನ್ನು ಐದನೇ ತರಗತಿ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಉಪಾಧ್ಯಕ್ಷರಾಗಿದ್ದ ಸುಕುಮಾರ್ ಜೈನ್ ಹಾಗೂ ಎಸ್‌ಡಿಎಂಸಿ ಸದಸ್ಯರಾಗಿದ್ದ ಯಶೋಧ- ಜಯಾನಂದ, ಸುಕನ್ಯ- ಸಂಜೀವ ದಂಪತಿಯನ್ನು ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.

ಎಸ್.ಡಿ.ಎಂ.ಸಿ.ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ಜನಾರ್ದನ ವಾಲ್ಪಾಡಿ ವಂದಿಸಿದರು. ಗ್ರಾ‌.ಪಂ.ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಎಂ.ಎಸ್.ಐದನೇ ತರಗತಿ ವಿದ್ಯಾರ್ಥಿಗಳನ್ನು ಪರಿಚಯಿಸಿ ತನ್ನ ಪುತ್ರನ ಹೆಸರಲ್ಲಿ ಪ್ರತೀ ವರ್ಷ ನೀಡುವ ವಿದ್ಯಾರ್ಥಿವೇತನವನ್ನು ಅತಿಥಿಗಳ ಮೂಲಕ ವಿತರಿಸಿದರು.

ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಆನಂದ,ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಸುಶ್ಮಿತ,ಇರ್ಷಾದ್ ಬಿ.ಕೆ, ಶೇಖರ, ಗೋಪಾಲ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಶೋಭಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌