ಎತ್ತಿನ ಬಂಡಿಯಲ್ಲಿ ಹೂವಿನಹಾರ ತಂದ ರೈತ

KannadaprabhaNewsNetwork |  
Published : Mar 12, 2026, 01:30 AM IST
ಪೊಟೋಎತ್ತಿನ ಬಂಡಿಯಲ್ಲಿ ಹೂವಿನಹಾರ ಮೆರವಣಿಗೆ ಮಾಡಿ ಕನಕಾಚಲಪತಿ ರಥಕ್ಕೆ ಸಮರ್ಪಿಸಿದ ರೈತ ಹನುಮಂತಪ್ಪ.  | Kannada Prabha

ಸಾರಾಂಶ

ರಥಕ್ಕೆ ನೂರಾರು ವಾಹನಗಳ ಮೂಲಕ ಹೂವಿನ ಹಾರ ಅರ್ಪಿಸುವ ಸಾವಿರಾರು ಭಕ್ತರ ನಡುವೆ ಈ ರೈತ ಹನುಮಂತಪ್ಪ ತನ್ನ ಭಕ್ತಿ ಕನಕಾಚಲಪತಿಗೆ ಮುಟ್ಟಬೇಕೆನ್ನುವ ಸಂಕಲ್ಪದೊಂದಿಗೆ ೧೨ ಕಿಮೀ ದೂರದಿಂದ ಚಕ್ಕಡಿಯಲ್ಲಿ ಹೂವಿನ ಹಾರ ತಂದು ಭಕ್ತಿ ಭಾವ ಮೆರೆದಿದ್ದಾನೆ.

ಎಂ. ಪ್ರಹ್ಲಾದ್ ಕನಕಗಿರಿ

ಭಕ್ತನೊಬ್ಬ ಬರೋಬ್ಬರಿ ೧೨ ಕಿಮೀ ಎತ್ತಿನ ಬಂಡಿಯಲ್ಲಿ ಹೂವಿನಹಾರ ಮೆರವಣಿಗೆ ಮಾಡಿ ಕನಕರಾಯನ ರಥಕ್ಕೆ ಅರ್ಪಿಸಿದ್ದಾನೆ.

ಹೌದು. ತಾಲೂಕಿನ ಹುಲಸನಹಟ್ಟಿ ಗ್ರಾಮದ ರೈತ ಹನುಮಂತಪ್ಪ ಗೊಲ್ಲರ್ ಮಾ. ೧೧ರಂದು ನಡೆದ ಕನಕಾಚಲಪತಿ ರಥೋತ್ಸವಕ್ಕೆ ಬೃಹತ್ ಹೂವಿನ ಹಾರವನ್ನು ೧೨ ಕಿಮೀ ದೂರದಿಂದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ ಕನಕಾಚಲಪತಿ ತೇರಿಗೆ ಸಮರ್ಪಣೆ ಮಾಡಿದ್ದಾನೆ.

ರಥಕ್ಕೆ ನೂರಾರು ವಾಹನಗಳ ಮೂಲಕ ಹೂವಿನ ಹಾರ ಅರ್ಪಿಸುವ ಸಾವಿರಾರು ಭಕ್ತರ ನಡುವೆ ಈ ರೈತ ಹನುಮಂತಪ್ಪ ತನ್ನ ಭಕ್ತಿ ಕನಕಾಚಲಪತಿಗೆ ಮುಟ್ಟಬೇಕೆನ್ನುವ ಸಂಕಲ್ಪದೊಂದಿಗೆ ೧೨ ಕಿಮೀ ದೂರದಿಂದ ಚಕ್ಕಡಿಯಲ್ಲಿ ಹೂವಿನ ಹಾರ ತಂದು ಭಕ್ತಿ ಭಾವ ಮೆರೆದಿದ್ದಾನೆ.

ಅಲ್ಲದೇ ಕೊಪ್ಪಳ ತಾಲೂಕಿನ ಹೊಸಲಿಂಗಾಪುರದ ನಿವಾಸಿ ವಿಜಯ ಭಾರತಿ ಕಳೆದ ನಾಲ್ಕೈದು ವರ್ಷಗಳಿಂದಲೂ ಮನೆಯಲ್ಲಿ ತಿಂಗಳ ಕಾಲ ಸಿದ್ದಪಡಿಸಿದ ಗೆಜ್ಜೆ ಹಾರ ಅರ್ಪಿಸಿದ್ದಾರೆ. ದೇವರ ಅನೇಕ ಸೇವೆಗಳಲ್ಲಿ ಗೆಜ್ಜೆ ಹಾರದ ಸೇವೆಯೂ ಬಹಳ ಮಹತ್ವದ್ದಾಗಿದೆ.

ಈ ಹಾರ ತಿಂಗಳ ಕಾಲ ಮನೆಯಲ್ಲೆ ಹತ್ತಿಯಿಂದ ಸಿದ್ಧಪಡಿಸಿದ್ದು, ಜಾತ್ರೆ ದಿನ ಇಲ್ಲಿನ ರಾಯರ ಮಠದಿಂದ ಕನಕಾಚಲಪತಿ ಸನ್ನಿಧಾನಕ್ಕೆ ತೆರಳಿ ವಿಶೇಷ ಪೂಜೆ ತೇರಿಗೆ ಅರ್ಪಣೆ ಮಾಡಲಾಯಿತು.

ಹೀಗೆ ಹತ್ತಾರು ಸಂಘಟನೆಗಳಲ್ಲಿನ ಭಕ್ತರು, ಸ್ನೇಹ ವೃಂದದವರು ನೂರಾರು ಹಾರಗಳನ್ನು ಕನಕರಾಯ ರಥಕ್ಕೆ ಹಾಕಿ ಭಕ್ತಿ ಪ್ರಣಾಮ ಸಲ್ಲಿಸಿದರು.

ಪೂರ್ವಜರ ಇಚ್ಛೆಯಂತೆ ಕನಕರಾಯನ ತೇರಿಗೆ ಹೂವಿನಹಾರವನ್ನು ೧೨ ಕಿಮೀ ದೂರದಿಂದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ ತಂದಿದ್ದೇನೆ. ಮಳೆ, ಬೆಳೆ ಉತ್ತಮವಾಗಿ ಆಗಲಿ ರೈತರಿಗೆ ಕನಕರಾಯ ಒಳ್ಳೆಯದು ಮಾಡಲೆಂದು ಪ್ರಾರ್ಥಿಸುತ್ತೇನೆ ಎಂದು ಭಕ್ತ ಹನುಮಂತಪ್ಪ ಗೊಲ್ಲರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ