ಊರಿಗೆ ಊಟ ಹಾಕಿಸಿ ಎತ್ತಿನ ಹುಟ್ಟುಹಬ್ಬ ಆಚರಿಸಿದ ರೈತ

KannadaprabhaNewsNetwork |  
Published : Feb 26, 2026, 04:15 AM IST
ಕಕಕಕಕ | Kannada Prabha

ಸಾರಾಂಶ

ಅಥಣಿ: ರೈತನೊಬ್ಬ ತಮ್ಮ ಮನೆ ಮಗನಂತೆ ಸಾಕಿದ ''''ಚಂಡ'''' ಎಂಬ ಎತ್ತಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.

ಅಥಣಿ: ರೈತನೊಬ್ಬ ತಮ್ಮ ಮನೆ ಮಗನಂತೆ ಸಾಕಿದ ''''''''ಚಂಡ'''''''' ಎಂಬ ಎತ್ತಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.

ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಬಡ ರೈತ ಉಮೇಶ ಶಿಂದೆ ಅವರು ಈ ರೀತಿ ಊರಿಗೆ ಊಟ ಹಾಕಿಸಿ ಎತ್ತಿನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಬೃಹತ್ ಶಾಮಿಯಾನ, ರುಚಿಕರ ಭೋಜನದ ವ್ಯವಸ್ಥೆ, ಆಕಾಶದೆತ್ತರಕ್ಕೆ ಹಾರಿದ ಬಣ್ಣ ಬಣ್ಣದ ಪಟಾಕಿಗಳು ಎಲ್ಲರನ್ನು ಚಕಿತಗೊಳಿಸಿತು. ತಮ್ಮ ಮನೆ ಮಗನಂತೆ ಸಾಕಿದ ''''''''ಚಂಡ'''''''' ಎಂಬ ಎತ್ತಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಎತ್ತಿಗೆ ವಿಶೇಷ ಅಲಂಕಾರ ಮಾಡಿ, ಕೇಕ್ ಕಟ್ ಮಾಡಿ, ಸಿಹಿ ಹಂಚಿ, ಗ್ರಾಮಸ್ಥರ ಜೊತೆಗೂಡಿ ಹಬ್ಬದ ವಾತಾವರಣ ನಿರ್ಮಿಸಿದರು. ಸಾವಿರಾರು ಮಂದಿ ಗ್ರಾಮಸ್ಥರು ಭಾಗಿಯಾಗಿ ''''''''ಚಂಡ'''''''' ಎತ್ತಿಗೆ ಆಶೀರ್ವಾದ ಕೋರಿದರು. ಮಹಾರಾಷ್ಟ್ರದ ಓಟದ ಮೈದಾನಗಳಲ್ಲಿ ಅಬ್ಬರಿಸಿ ಹೆಸರು ತಂದಿರುವ ಈ ಎತ್ತು ಈಗ ಊರಿನ ಹೆಮ್ಮೆಯಾಗಿದೆ. ರೈತನ ಹೃದಯದ ದೊಡ್ಡತನಕ್ಕೆ ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರಿಗೆ ₹300 ಕೋಟಿ ಬಿಡುಗಡೆ
ಮಾ.2ಕ್ಕೆ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ