ಪರಿಹಾರಕ್ಕಾಗಿ ಕುಷ್ಟಗಿಯಲ್ಲಿ ಹೈಟೆನ್ಶನ್ ಟವರ್ ಏರಿದ ರೈತ

KannadaprabhaNewsNetwork |  
Published : Oct 07, 2026, 02:45 AM IST
ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ರೈತ ಪರಿಹಾರ ವಿಚಾರವಾಗಿ ಹೈಟೆನ್ಶನ್ ವಿದ್ಯುತ್ ಟವರ್‌ ಮೇಲೆ ಕುಳಿತಿರುವುದು. | Kannada Prabha

ಸಾರಾಂಶ

ಜಮೀನಿನಲ್ಲಿ ನಿರ್ಮಿಸುತ್ತಿರುವ ಹೈಟೆನ್ಶನ್ ವಿದ್ಯುತ್ ಟವರ್‌ಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತನೊಬ್ಬ ನಿರ್ಮಾಣ ಹಂತದ ಟವರ್ ಏರಿ ಕುಳಿತ ಘಟನೆ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕುಷ್ಟಗಿ: ಜಮೀನಿನಲ್ಲಿ ನಿರ್ಮಿಸುತ್ತಿರುವ ಹೈಟೆನ್ಶನ್ ವಿದ್ಯುತ್ ಟವರ್‌ಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತನೊಬ್ಬ ನಿರ್ಮಾಣ ಹಂತದ ಟವರ್ ಏರಿ ಕುಳಿತ ಘಟನೆ ತಾಲೂಕಿನ ಹಿರೇನಂದಿಹಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ರೈತ ಹನುಮಂತಪ್ಪ ಬಾರಿಗಿಡ ಅವರಿಗೆ ಸೇರಿದ ಜಮೀನಿನಲ್ಲಿ ಖಾಸಗಿ ಕಂಪನಿಯ, ರಾಯಚೂರು–ಗದಗ ಸಂಪರ್ಕ ಮಾರ್ಗದ ಬೃಹತ್ ವಿದ್ಯುತ್ ಟವರ್ (ಪವರ್‌ಗ್ರಿಡ್) ನಿರ್ಮಿಸಲಾಗುತ್ತಿದೆ. ಜಮೀನಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿರುವ ಅವರು, ಕಳೆದ ಆರು ತಿಂಗಳಿಂದ ಕಂಪನಿ ಎಂಜಿನಿಯರ್‌ಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.

ಸೋಮವಾರ ಕಾಮಗಾರಿ ಕೈಗೊಳ್ಳಲು ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿದಾಗ ಹನುಮಂತಪ್ಪ ಕೆಲಸ ತಡೆದು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿ ನಿರ್ಮಾಣ ಹಂತದ ಟವರ್ ಏರಿ ಕುಳಿತರು.

ಮಾಹಿತಿ ತಿಳಿದು ಕುಷ್ಟಗಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಮಾಳಿಂಗರಾಯ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಕೆಲಕಾಲ ಮನವೊಲಿಸಿದರು. ಕಂಪನಿ ಸಿಬ್ಬಂದಿ ಹಾಗೂ ರೈತ ಕುಟುಂಬದವರೊಂದಿಗೆ ಚರ್ಚಿಸಿ ಭರವಸೆ ನೀಡಿದ ಬಳಿಕ ಹನುಮಂತಪ್ಪ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಜಮೀನಿನಲ್ಲಿ ವಿದ್ಯುತ್ ಟವರ್ ಅಳವಡಿಕೆಯಿಂದ ಉಂಟಾಗುವ ಪರಿಣಾಮಕ್ಕೆ ನಿಯಮಾನುಸಾರ ಪರಿಹಾರ ನೀಡಬೇಕು. ಹಲವು ತಿಂಗಳಿಂದ ಮನವಿ ಮಾಡಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈ ಹಾದಿ ಹಿಡಿಯಬೇಕಾಯಿತು ಎಂದು ಹನುಮಂತಪ್ಪ ತಿಳಿಸಿದ್ದಾರೆ.

ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ಹನುಮಂತಪ್ಪ ಪರಿಹಾರ ವಿಚಾರವಾಗಿ ಟವರ್ ಏರಿ ಕುಳಿತಿರುವ ಮಾಹಿತಿ ಬಂದ ತಕ್ಷಣ ತಂಡದೊಂದಿಗೆ ಸ್ಥಳಕ್ಕೆ ತೆರಳಲಾಯಿತು. ಕಂಪನಿ ಸಿಬ್ಬಂದಿಯೊಂದಿಗೆ ಚರ್ಚಿಸಿ ಭರವಸೆ ಪಡೆದು ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ಕುಷ್ಟಗಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಮಾಳಿಂಗರಾಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಅಭಿವೃದ್ಧಿಗೆ ಪ್ರಶಸ್ತಿ ಮನ್ನಣೆ: ಪೂಂಜಾ
ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂ ದೌರ್ಜನ್ಯ: ಜ್ಯೋತಿ ಹೆಬ್ಬಾರ್ ಆಕ್ರೋಶ