ದೇವರಹಿಪ್ಪರಗಿ: ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಲಾದಹಳ್ಳಿಯಲ್ಲಿ ಗುರುವಾರ ನಡೆದಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯ ಬಸನಗೌಡ ಬಿರಾದಾರ(52) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಸುಮಾರು 8 ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದು, ಸಾಲ ಪಾವತಿ ಮಾಡುವಂತೆ ಫೈನಾನ್ಸ್ ಸಿಬ್ಬಂದಿ ನೀಡಿದ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೇವರಹಿಪ್ಪರಗಿ: ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಲಾದಹಳ್ಳಿಯಲ್ಲಿ ಗುರುವಾರ ನಡೆದಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯ ಬಸನಗೌಡ ಬಿರಾದಾರ(52) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಸುಮಾರು 8 ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದು, ಸಾಲ ಪಾವತಿ ಮಾಡುವಂತೆ ಫೈನಾನ್ಸ್ ಸಿಬ್ಬಂದಿ ನೀಡಿದ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ರೈತ ಬಸನಗೌಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ₹3.5 ಲಕ್ಷ ಪಡೆದಿದ್ದ. ಕೆಂಭಾವಿಯ ಮೈಕ್ರೋ ಫೈನಾನ್ಸ್‌ನಲ್ಲಿ ₹ 1 ಲಕ್ಷ, ಎಲ್.ಆಂಡ್ ಟಿನಲ್ಲಿ ₹ 1.10 ಲಕ್ಷ, ನವಚೇತನನಲ್ಲಿ ₹1 ಲಕ್ಷ, ಈ.ಎಸ್.ಎಫ್.ಎಸ್‌ನಲ್ಲಿ ₹ 75 ಸಾವಿರ, ಚೈತನ್ಯನಲ್ಲಿ ₹1 ಲಕ್ಷ, ಸುಗ್ಮಯ್ಯಾನಲ್ಲಿ ₹ 50 ಸಾವಿರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ₹1 ಲಕ್ಷ, ತಾಳಿಕೋಟೆಯ ಆರ್.ಬಿ.ಎಲ್.ನಲ್ಲಿ ₹ 1 ಲಕ್ಷ ಹೀಗೆ ಒಟ್ಟು ₹7.35 ಲಕ್ಷ ಸಾಲ ಮಾಡಿದ್ದ.
ಸಾಲ ತೀರಿಸಲು ಪರದಾಡುತ್ತಿದ್ದ ರೈತ ಬಸನಗೌಡ ಗುರುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರಿಮಿನಾಶಕ ಸೇವಿಸಿ ಅತ್ಮಹತ್ಯೆ ಪ್ರಯತ್ನಿಸಿದ್ದಾನೆ. ಪತ್ನಿ ಹೊಲದಿಂದ ಬಂದು ನೋಡುವಷ್ಟರಲ್ಲಿ ಈತ ಒದ್ದಾಡುವುದನ್ನು ಗಮನಿಸಿ ವಿಚಾರಿಸಿದಾಗ ಫೈನಾನ್ಸ್ ಸಿಬ್ಬಂದಿಯವರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಸಿದ್ದೇನೆ ಎಂದು ಹೇಳಿದ್ದ. ನಂತರ ಕಲಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದ ಮಧ್ಯೆ ಅಸುನೀಗಿದರು ಎಂದು ಮೃತರ ಪತ್ನಿ ಮಹಾದೇವಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಕಲಕೇರಿ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
---------
ಕೋಟ್...
ರೈತ ಬಸನಗೌಡ ಸಾಲ ಮಾಡಿ ಜಿ.ಆರ್.ಜಿ ತೊಗರಿ ಬೆಳೆದಿದ್ದ. ಆಳೆತ್ತರ ಬೆಳೆದ ತೊಗರಿ ಬೆಳೆ ಕೈ ಕೊಟ್ಟ ಕಾರಣ ದಿಕ್ಕು ತೋಚದೆ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಮಾಡಿ ಅವರ ಕಿರಿಕಿರಿ ತಾಳದೆ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತನ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು. ಈ ರೀತಿ ಫೈನಾನ್ಸ್‌ಗಳ ಕಿರಿಕಿರಿ ಗಡಿಭಾಗದಲ್ಲಿ ಯಥೇಚ್ಛವಾಗಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ರೈತರ ಕುಟುಂಬಗಳನ್ನು ಉಳಿಸಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.