ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ರಾಮದ ಸರ್ವೇ ನಂ. 18ರಲ್ಲಿ ಪ್ರಭಾವಿ ವ್ಯಕ್ತಿಗಳು ಭಾರೀ ಪ್ರಮಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು, ರೈತ ಕುಟುಂಬಗಳ ಜಮೀನು ಕಸಿದು ದಬ್ಬಾಳಿಕೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರೈತರಿಗೆ ಸೇರಿದ್ದ ಜಮೀನಿನಲ್ಲಿ ಬಂಡೆ ಸಿಡಿಸಲು ಅಳವಡಿಸಿದ್ದ ಸ್ಫೋಟಕಗಳ ಮೇಲೆ ಸುಮಾರು 20 ದಲಿತ ಕುಟುಂಬದ ರೈತರು ಕುಳಿತು ತಮ್ಮ ಜಮೀನು ಹಾಗೂ ನ್ಯಾಯಕ್ಕಾಗಿ ಜೀವದ ಹಂಗು ತೊರೆದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿದ್ದಯ್ಯ, ಗವಿಯಯ್ಯ, ಬೋರಯ್ಯ, ಚಿಕ್ಕೋನು, ಚಿಕ್ಕಜವರಯ್ಯ, ನರಸಿಂಹ, ದೊಳ್ಳಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.