ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಸಮಸ್ತದ ನೂರನೇ ಅಂತಾರಾಷ್ಟ್ರೀಯ ಮಹಾಸಮ್ಮೇಳನದ ಪ್ರಚಾರ ಮಹಾಸಮ್ಮೇಳನದಲ್ಲಿ ಅವರು ಮಾತನಾಡಿ, ಕಳೆದ ನೂರು ವರ್ಷಗಳಿಂದ ಇಸ್ಲಾಮಿಕ್ ಶಿಕ್ಷಣ, ಧಾರ್ಮಿಕ ಮೌಲ್ಯಗಳು ಹಾಗೂ ಸಮಾಜ ಸೇವೆಯ ಮೂಲಕ ದೇಶದಾದ್ಯಂತ ತನ್ನದೇ ಆದ ಸ್ಥಾನವನ್ನು ಗಳಿಸಿದೆ ಎಂದು ಹೇಳಿದರು.
ಫೆಬ್ರವರಿ 4ರಿಂದ 8ರವರೆಗೆ ನಡೆದ ನೂರನೇ ವರ್ಷದ ಶತಮಾನೋತ್ಸವ ಮಹಾಸಮ್ಮೇಳನದಲ್ಲಿ ಸುಮಾರು 33 ಸಾವಿರಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿವರು. ಇದು ಭಾರತದ ಇತಿಹಾಸದಲ್ಲೇ ಅಪರೂಪದ ಹಾಗೂ ಭವ್ಯ ಶಿಬಿರವಾಗಿದ್ದು, ದೇಶದ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯ ವಿಶ್ವಾಸಿಗಳು ಪಾಲ್ಗೊಳ್ಳುತ್ತಾರೆ ಎಂದು ವಿವರಿಸಿದರು.ಸೂಫಿ ಉಲಮಾಗಳು ಸುಖಸಮೃದ್ಧಿಯ ಕಾಲದಲ್ಲಲ್ಲ, ಬದಲಾಗಿ ಸಂಕಷ್ಟದ ದಿನಗಳಲ್ಲಿ ಗ್ರಾಮಗ್ರಾಮಗಳಿಗೆ ತೆರಳಿ, ಕತ್ತಲೆಯಲ್ಲೇ ಧಾರ್ಮಿಕ ಸಂದೇಶಗಳನ್ನು ಸಾರುತ್ತಾ, ಮದರಸಗಳು ಹಾಗೂ ಮಸೀದಿಗಳನ್ನು ನಿರ್ಮಿಸಿ, ತ್ಯಾಗದ ಬದುಕು ನಡೆಸಿದ್ದಾರೆ. ಇಂತಹ ಮಹಾನ್ ತ್ಯಾಗಗಳ ಫಲವಾಗಿ ಇಂದು ನಾವು ಧರ್ಮವನ್ನು ಅನುಸರಿಸುವಂತಾಗಿದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳಿಂದ ಮದರಸೆಗಳ ಮೂಲಕ ಶಿಕ್ಷಣ, ಬಡವರ ನೆರವು, ಆರೋಗ್ಯ ಸೇವೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಸ್ತ ಹಾಗೂ ಎಸ್‌ಕೆಎಸ್‌ಎಸ್‌ಎಫ್ ನಡೆಸಿಕೊಂಡು ಬಂದಿದೆ. 2008ರಲ್ಲಿ ಸಾಮೂಹಿಕ ವಿವಾಹ, 2016ರಲ್ಲಿ ಆಂಬ್ಯುಲೆನ್ಸ್ ಸೇವೆ, 2019ರಲ್ಲಿ ರಜತ ಮಹೋತ್ಸವ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.