ಹನೂರು: ಅಂತಾರಾಷ್ಟ್ರೀಯ ಮಟ್ಟದ ದುಬೈ ಏಷ್ಯನ್ ಗೇಮ್ಸ್ 2025ರ ಯೂತ್ ಪ್ಯಾರಗನ್ಸ್ ನಲ್ಲಿ ತಾಲೂಕಿನ ರಾಮಾಪುರ ವಿದ್ಯಾರ್ಥಿನಿ ಸೌಮ್ಯ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಸೌಮ್ಯ ಮಹಿಳಾ ವಿಭಾಗದ 400 ಮೀ, 1500 ಮೀ ವಿಭಾಗದಲ್ಲಿ ವಿಜೇತರಾಗಿ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಸೌಮ್ಯ ತಂದೆ ತಾಯಿ ನಿಧನ ಹೊಂದಿರುವಂತಹ ನೋವಿನಲ್ಲೇ ಅಣ್ಣ ಸತ್ತೀಶ್ ಆಶ್ರಯದಲ್ಲಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ನಂತರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ದುಬೈನಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು ರಾಮಪುರ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಸೌಮ್ಯ ಸಾಧನೆಗೆ ತಾಲೂಕಿನ ಕ್ರೀಡಾಪಟುಗಳು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.