ಹರಪನಹಳ್ಳಿ: ರೈತ, ಸೈನಿಕ ಹಾಗೂ ಶಿಕ್ಷಕರು ಈ ದೇಶದ ರತ್ನಗಳು ಎಂದು ಎಎಂಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷ, ರಾಜ್ಯ ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ ಎ.ಎಂ.ಪಿ. ವಾಗೀಶ್ ತಿಳಿಸಿದರು.ತಾಲೂಕಿನ ಎರಡೆತ್ತಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎ.ಎಂ.ಪಿ.ಅಜ್ಜಯ್ಯ ಸಮಾಜ ಮುಖಿ ಟ್ರಸ್ಟ್ ಹೊಳಗುಂದಿ, ಸಂಸ್ಥಾಪನ ದಿನಾಚರಣೆ ನಿಮಿತ್ತ, ಶಾಲೆಯ ಆವರಣದಲ್ಲಿ ಗಿಡ ನೆಟ್ಟು, ರೈತ ಮಹಿಳೆ, ನಿವೃತ್ತ ಸೈನಿಕ, ಶಿಕ್ಷಕರಿಗೆ ಸನ್ಮಾನ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ದೇಶದ ವ್ಯವಸ್ಥೆಯಲ್ಲಿ ರೈತರು ಮಾತ್ರ ಪ್ರಾಮಾಣಿಕ ವ್ಯಕ್ತಿಗಳಾಗಿದ್ದಾರೆ. ಸೈನಿಕರು ನಮ್ಮ ದೇಶವನ್ನು ಸಂರಕ್ಷಣೆ ಮಾಡುತ್ತಿದ್ದರೆ, ಶಿಕ್ಷಕರು ಅಕ್ಷರಗಳನ್ನು ಕಲಿಸುವ ಮೂಲಕ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ ಎಂದರು.ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಯಾವ ಊರಿನಲ್ಲಿ ದೇವಸ್ಥಾನದ ಗಂಟೆ ಬಾರಿಸಿದರೆ ಅಲ್ಲಿ ಬಡತನ ಉಂಟಾಗುತ್ತದೆ. ಅದೇ ಶಾಲೆಯ ಗಂಟೆ ಬಾರಿಸಿದರೆ ಶ್ರೀಮಂತ ಗ್ರಾಮವಾಗುತ್ತದೆ. ಪ್ರತಿಯೊಬ್ಬರು ತಮ್ಮ ಉತ್ತಮ ವಿದ್ಯಾಭ್ಯಾಸ ಮೂಲಕ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ತತ್ವ, ಆದರ್ಶಗಳನ್ನು ತಂದೆಯವರು ಅಳವಡಿಸಿಕೊಂಡಿದ್ದು ನಾವು ಸಹ ಅವರ ಸ್ಮರಣೆಯಲ್ಲಿ ಸಮಾಜಮುಖಿ ಟ್ರಸ್ಟ್ ವತಿಯಿಂದ ಪ್ರತಿವರ್ಷ ಸಾಮೂಹಿಕ ವಿವಾಹಗಳು, ಉಚಿತ ಶಿಕ್ಷಣಕ್ಕೆ ನೇರವು, ವೈದ್ಯಕೀಯ ಶಿಬಿರ ಹಾಗೂ ಸಮಾಜ ಸೇವೆಯಲ್ಲಿ ಕೈಲಾದಷ್ಟು ಮಾಡುತ್ತಿದ್ದೇವೆ ಎಂದು ಹೇಳಿದರು.ಬಿಇಒ ಎಚ್.ಲೇಪಾಕ್ಷಪ್ಪ ಮಾತನಾಡಿ, ಗಾಂಧೀಜಿ ಹಾಗೂ ಲಾಲ್‌ಬಹುದ್ದೂರ್ ಶಾಸ್ತ್ರಿಯವರ ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ ಎಂದ ಅವರು ರೈತ, ಸೈನಿಕ, ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಎಎಂಪಿ ವಾಗೀಶ್‌ರವರು ಇನ್ನಷ್ಟು ಉತ್ತಮ ಸತ್ಕಾರ್ಯಗಳನ್ನು, ಈ ನಿಟ್ಟಿನಲ್ಲಿ ಅವರ ಕುಟುಂಬವು ಸಹ ಸಮಾಜ ಮುಖಿ ಕೆಲಸದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.ಪ್ರಾಸ್ತಾವಿಕವಾಗಿ ಎಎಂಪಿ ಸಂದೀಪ್ ಮಾತನಾಡಿದರು. ಈ ವೇಳೆ ರೈತ ಮಹಿಳೆ ಚಂದ್ರಮ್ಮ, ನಿವೃತ್ತ ಸೈನಿಕ ಗೋಣೆಪ್ಪ, ಶಾಲೆಯ ಮುಖ್ಯ ಶಿಕ್ಷಕಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಮಕ್ಕಳಿಗೆ ನೋಟ್‌ಪುಸ್ತಕ, ಪೆನ್ನು, ಚಾಕಲೇಟ್ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಎಎಂಪಿ ವಿಜಯಕುಮಾರ, ತೋಟಗಾರಿಕೆ ಅಧಿಕಾರಿ ರವೀಂದ್ರ, ಬಿಆರ್‌ಸಿ ಹೊನ್ನತ್ತೆಪ್ಪ, ನಿಲಯ ಮೇಲ್ವಿಚಾರಕ ರವಿಗೌಡ, ಸಮಾಲೋಚಕಿ ಲೀಲಾಲಿಂಗರಾಜ, ಸುಜಾತ, ಶ್ವೇತಾ, ಅರ್ಜುನ ಪರಸಪ್ಪ, ಸಲಾಂ, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಶಾಲೆಯ ಶಿಕ್ಷಕರು ಇತರರು ಇದ್ದರು.