ಇಲ್ಲಿಯ ನವನಗರದ ರೈತರೊಬ್ಬರು ನೇಣಿಗೆ ಶರಣಾಗಿದ್ದು, ಸಾಲಭಾದೆಯೇ ಇವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ ಇಲ್ಲಿಯ ನವನಗರದ ರೈತರೊಬ್ಬರು ನೇಣಿಗೆ ಶರಣಾಗಿದ್ದು, ಸಾಲಭಾದೆಯೇ ಇವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶಂಭು ಸಕ್ರಪ್ಪ ಗುಳೇದ (೪೪) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಶಿಗ್ಗಾಂವಿಯ ಕೆವಿಜಿ ಬ್ಯಾಂಕ್‌ನಲ್ಲಿ ₹೧ ಲಕ್ಷ ಬೆಳೆಸಾಲ, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ₹೧,೫೦ ಲಕ್ಷ ವೈಯಕ್ತಿಕ ಸಾಲ, ತನ್ನ ಹೆಂಡತಿಯ ಹೆಸರಿನಲ್ಲಿ ಗ್ರಾಮಶಕ್ತಿ ಸಂಘದಲ್ಲಿ ೫೦ ಸಾವಿರ, ಅಲ್ಲದೇ ತಮ್ಮ ಪರಿಚಯದವರ ಹತ್ತಿರ ಸುಮಾರು ₹೪ ಲಕ್ಷ ಕೈಗಡ ಸಾಲ ಮಾಡಿದ್ದ. ಈ ವರ್ಷ ಸರಿಯಾಗಿ ಮಳೆ ಬಾರದ್ದರಿಂದ ಬೆಳೆ ಹಾಳಾಗಿದ್ದು, ಅದನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯ ರೂಮಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.